Saturday, 19 August 2017

Guruthina bikkattu.... Kanasugala kadiyuvikeyu...... (ಗುರಿತಿನ ಬಿಕ್ಕಟ್ಟು...ಕನಸುಗಳ ಕದಿಯುವಿಕೆಯೂ..).

"ಕೇರಳದಲ್ಲಿ ನಾಲ್ಕು ಮಕ್ಕಳ ಸಾವು -ಬ್ಲೂ ವೇಲ್ ಆಟದ ಜಾಲದಲ್ಲಿ". ಶೀರ್ಷಿಕೆ ನೋಡಿ, "ಇದ್ಯಾಕೆ ಹೀಗೆ?, ನಾವು ಕಂಡ ಕನಸುಗಳಿಗೆ ಮಕ್ಕಳು ಕೊಡುವ ಉತ್ತರ ಇದೋ!!" ಅಂತ ಎಸ್ ಎಮ್ ಎಸ್ ಮಾಡಿದರು ಸ್ನೇಹಿತರೊಬ್ಬರು.
          ನನಗೇನು ಬೇಕು?? ಅರ್ಥವೇ ಆಗದ ಮನಸ್ಸು ನಮ್ಮದೆಲ್ಲರದ್ದೂ.... ಕನಸು ಕನಸಾಗೇ ಇರಲಿ ಇಲ್ಲ ನನಸಾಗಲಿ ಅದಕ್ಕೊಂದು ಘನತೆ ಬೇಕಲ್ಲವೇ? ಆದರೆ ಇತ್ತೀಚಿಗೆ ಕದಿಯುವುದೇ ಮುಖ್ಯವಾಗಿದೆ. ಹೆಚ್ಚಿನವರಿಗೆ ಒಂದು ಕನಸನ್ನ ತನ್ನದಾಗಿಸಿಕೊಳ್ಳಲೂ ಕೂಡ..... ಇನ್ನೊಬ್ಬರ ಕನಸನ್ನ ಕದಿಯುವ ಕೆಲಸ. ಅಯ್ಯೋ ಇದು ಪ್ರೇಮ ಪ್ರೀತಿಗೆ ಸಂಭಂದಿಸಿದ ಕದಿಯುವಿಕೆ ಅಲ್ಲಾರಿ.... ನಾನು ಹೇಳ ಹೊರಟಿರುವುದು- ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗಾಗಿ ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ತಮ್ಮ ನಾಳೆಗಾಗಿ ಕಟ್ಟುವ ಕನಸನ್ನ ಕದಿಯುವ ಬಗ್ಗೆ.
   ತಮ್ಮ ತಮ್ಮ ಕ್ಷಮತೆಗಳಿಗನುಸಾರವಾಗಿ ಪ್ರತಿಯೊಬ್ಬರೂ ಒಂದು ಯೊಜನೆ, ಕನಸನ್ನ ತಾವು ಮಾಡುವ ಕೆಲಸಕ್ಕೆ ಕಟ್ಟಿರುತ್ತಾರೆ...ಕನಸುಗಳು, ಯೊಜನೆಗಳು ಅವರವರ ಶಕ್ತ್ಯಾನುಸಾರವೇ ಇದ್ದೀತು. ಇನ್ನೊಬ್ಬರ ಕನಸುಗಳನ್ನ ಕದ್ದರೆ ಅದರ ಅನುಷ್ಠಾನ ಇವರಿಂದ  ಹೇಗಾದೀತು???!!
   ಮನುಷ್ಯರೆಲ್ಲರಿಗೂ ತಾನು ದೊಡ್ಡವನಾಗಬೆಕೆಂಬ ಹಂಬಲ ಸಹಜ, ಆದರೆ  ಇನ್ನೊಬ್ಬರಿಗೆ ಕಣ್ಣೀರು ತರಿಸಿ ತಮ್ಮ ಕನಸನ್ನ ನನಸಾಗಿಸುವ sadism  ಹೆಚ್ಚಿನವರಲ್ಲಿ... ನಾನು ಮೇಲೇಳಬೇಕಾದರೆ ಇನ್ನೊಬ್ಬರನ್ನ  ತುಳಿಯಬೇಕೆಂಬ ಆಶಯ ಇರುವುದು, ತನ್ನದಾದ ಯಾವುದೇ ವ್ಯಕ್ತಿತ್ವ ಇಲ್ಲದ ಪರಾವಲಂಬಿ ಜೀವಿಗಳಿಗೆ. ವ್ಯಕ್ತಿಯನ್ನ ವ್ಯಕ್ತಿಯ ಸಮಗ್ರತೆ.. ಆತನ ಕೌಶಲ್ಯ... ಆತನದೇ ವ್ಯಕ್ತಿತ್ವದ ಹೊರತಾಗಿ, ಕೇವಲ ಆತನ ಹೊರವಲಯದ ಪ್ರದರ್ಶನವನ್ನ.‌‌... ಆತನ ತೆಳುಪದರದ ಇವತ್ತನ್ನ....ಆತನ ಆರ್ಥಿಕ ಡಾಂಬಿಕತೆಯನ್ನ ಯಾವತ್ತು ಈ ಭೌತಿಕ ಸಮಾಜ ದೊಡ್ಡದೆಂದು ಗಮನಿಸಿತೋ, ಅಂದೇ "ಕದಿಯುವಿಕೆ" ಹೊಂದುವಿಕೆಯಾಗಿ ಬದಲಾವಣೆಗೊಂಡಿತು. ಕಳ್ಳತನ....ಸ್ಮಾರ್ಟ್ ವ್ಯಕ್ತಿತ್ವವಾಗಿ ಬದಲಾದ್ದದ್ದು ಇವತ್ತಿಗೆ ಚರಿತ್ರೆ.
    "ಗುರುತಿನ ಬಿಕ್ಕಟ್ಟು"..... ಇದೊಂದು ವ್ಯವಸ್ಥಿತ ರೋಗವಾಗಿ ಸಮಾಜದೆಲ್ಲೆಡೆ ಮುಂದುವರಿಯುತ್ತಿದೆ. ತನ್ನನ್ನ ಪ್ರತಿಯೊಬ್ಬರೂ, ಪ್ರತಿ ಸಂದರ್ಭದಲ್ಲಿ ಗುರುತಿಸಲಿ ಎಂಬ ಹುಚ್ಚು ಹಂಬಲವೇ ಈ ಗುರುತಿನ ಬಿಕ್ಕಟ್ಟು ಕಾಯಿಲೆಯ ಲಕ್ಷಣಗಳು. ಇದೇ "ಬ್ಲೂ ವೇಲ್ " ಅಂತ ಭಯಾನಕ ಜಾಲತಾಣದ ಆಟಕ್ಕೂ ಮುನ್ನುಡಿ..ನಮ್ಮಲ್ಲಿಲ್ಲದ ನಮ್ಮನ್ನ ಬಯಸುವುದು ಅತೀ ಆಸೆಯಲ್ಲವೇ
      Sadism, ಗುರುತಿನ ಬಿಕ್ಕಟ್ಟು, ಟೊಳ್ಳಾದ ವ್ಯಕ್ತಿತ್ವ, ಕನಸನ್ನ ಕದಿಯುವುದು ಇದೆಲ್ಲಾ ನಮ್ಮೊಳಗಿನ ಸಮಗ್ರತೆ ಕಳೆದುಕೊಂಡ ದಿನವೇ ನಾವು ಹುಟ್ಟುಹಾಕಿದ ರಾಕ್ಷಸರು. ಬೇಕುಗಳೇ ದೊಡ್ಡದಾಗಿ, ಢಾಂಬಿಕತೆಗೆ ಕನಸನ್ನ ಮಾರಿದ ಸಾಮಾಜದ ಅಡ್ಡ ಪರಿಣಾಮಗಳು. ಭೌತಿಕತೆ, ಕೌಶಲ್ಯವನ್ನ ಮೆಟ್ಟಿ ನಿಂತ ದಿನ ನಾವೆಲ್ಲ ವ್ಯವಸ್ಥಿತವಾಗಿ "ಗುರುತಿನ ಬಿಕ್ಕಟ್ಟು" ಕಾಯಿಲೆಗೆ ನಮ್ಮ ಮನ,ಮನೆಗಳಲ್ಲಿ ಜಾಗ ಮಾಡಿಕೊಟ್ಟೆವು...‌‌‌..
      ಬದುಕನ್ನ.. ನಮ್ಮವರನ್ನ ಉತ್ಕಟವಾಗಿ ಪ್ರೀತಿಸುವ ನಮ್ಮ ಒಳಗಿರುವ ಸಂತೋಷವನ್ನ ನಮ್ಮದಾಗಿಸಿದರೆ ಸ್ಥಿತಪ್ರಜ್ಞೆ ತಾನೇ ತಾನಾಗಿ ನಮ್ಮದಾದೀತು....
     ನಮ್ಮ ಬದುಕನ್ನ .‌..ನಮ್ಮ ಕನಸನ್ನ ಪ್ರೀತಿಸುವ ಸಂತೋಷ ನಮ್ಮದಾಗಲಿ....

Friday, 11 August 2017

Malae...... Sidileragida kanasugala naduve (ಮಳೆ...ಸಿಡಿಲೆರಗಿದ ಕನಸುಗಳ ನಡುವೆ)

ಬೋರೆಂಬ ಮಳೆ ಮನೆಯ ಸುತ್ತ....
ಮನದ ತುಂಬಾ ಕವಿದ ಮೋಡ ..ಬೋರೆಂದು
ಸುರಿಯುತ್ತತ್ತು ಹೃದಯದ ತುಂಬೆಲ್ಲ
...,.........
ಕಣ್ಣಿನಿಂದ ಇಳಿದ ಮಳೆ ಮಡಿಲ ತುಂಬಾ
ಮೋಡ ಸಿಡಿಲು ಊರಲ್ಲೆಲ್ಲ...........
ಕನಸು ಕೊಂದ ಸಿಡಿಲ ..ನೆನೆಯುತ್ತಾ
ಇಳಿದಿತ್ತು ಮಳೆ ಕಣ್ಣಿನಿಂದ‌.....

ಆ ಒಂದು ಕ್ಷಣ....ಒಂದೇ ಕ್ಷಣ....
ಎಲ್ಲಾ ನೆಡೆ ಹುಸಿಯಾಗುತ್ತು...
ಭವಿಷ್ಯದ ಆಸೆ, ಕನಸುಗಳ...ಹೊತ್ತ
ಧೃಡ ನಡೆಗೆ ಗರ ಬಡಿದಿತ್ತು....
ಸ್ವಾವಲಂಬನೆಯ ನೆಡೆ ಚೂರಾಗಿತ್ತ...
ವ್ಯಾಘ್ರದ ಕಣ್ಣಲ್ಲಿ........
"ಹುಡುಗಿ" ಕಾಣಬಾರದೇ ಕನಸನ್ನೂ...

ದೇಹಕ್ಕಾ ದುರಾಸೆ?!?!  ಮನಸ್ಸಿಗಾ ವ್ಯಾಘ್ರತನ??
ಗಂಡೆಂಬ ಅಹಂಕಾರವಾ!?? ಹೆಣ್ಣೆಂಬ ತಾತ್ಸಾರವಾ?
ಒಂದು ಕ್ಷಣದ ಭಿಭಿತ್ಸ ಆಸೆಗಾ...
ವರ್ಷಗಳಿಂದ ಮನದೊಳಗೇ...ಕೂಡಿಟ್ಟ
ಕಾಮನಬಿಲ್ಲಂತ ಆಸೆಗಾ ಕೊಡಲಿ ಏಟು?!?

ಅತ್ಯಾಚಾರ...ಕಾಮನೆ..ಇಲ್ಲ ಭಿಭಿತ್ಸ ಪ್ರೀತಿ‌...
ಹೆಸರೇನೇ ಇರಲಿ......
ಹುಡುಗಿಯ ಮನದ ಕನಸೆ ಚದುರಿ ಹೋಯಿತಲ್ಲ
ಭಯದ ಕಾರ್ಮೋಡ ಎಲ್ಲೆಲ್ಲೂ......
ಇನ್ನಿರುವುದು ಬರೀ ಕತ್ತಲಿನ ಭಯ!!!
ಸಿಡಿಲಿನ ಆರ್ಭಟ, ಮಳೆಯ ನೋವು....

ಮೊದಲಿಂದಲೂ ಆಕೆಗೆ ಮಳೆ..ಉತ್ಸಾಹ ಪ್ರೀತಿ
ಕನಸು ಕಟ್ಟುವ..ಪುಳಕಗಳನ್ನ ತನ್ನ ಸುತ್ತೆಲ್ಲ ಸುರಿಸುವ
ಹೆಣ್ಣು....ಹೆಣ್ಣಾದ ಒಂದೇ ಕಾರಣಕ್ಕೆ ...
ಮಳೆ ಇಂದು ನೋವು...ದುಃಖದ ಪ್ರತೀಕ...
ಕಣ್ಣು, ಮನೆ, ಮನ ಎಲ್ಲಾ ಬರೀ ಮಳೆ...
ಮಳೆಯೇ ಅದು ಎಲ್ಲೆಲ್ಲೂ.....
ಸಿಡಿಲೆರಗಿದ ಕನಸುಗಳ ನಡುವೆ....

ಇವತ್ಯಾಕೋ ಕವಿತೇನೇ ಬರೀಬೇಕು ಅನ್ನಿಸಿತ್ತು... ಓದಿಕೊಳ್ಳುತ್ತಿರಲ್ಲ‌........
ಇನ್ನೆರಡು ವಾರ ಕವಿತೆ ಬರೆಯುವ ಹಂಬಲ..

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...