Tuesday, 4 July 2017

Manasemba markatadalli kasemba hucchu kodi....... (ಮನಸೆಂಬ ಮಾರ್ಕಟದಲ್ಲಿ ಕನಸೆಂಬ ಹುಚ್ಚುಖೋಡಿ.......)....


ಮನಸುಗಳು ಮುಖ್ಯವಾದವೋ, ಕನಸುಗಳು ಮುಖ್ಯವಾದವೋ?!?! ಈ ಪ್ರಶ್ನೆ ಬಂದದ್ದು ಜೀವನ ಈಗಿನ್ನು ಶುರುಮಾಡಿದ ಜೋಡಿಗಳಿಂದ.. ಕನಸುಗಳು ಮನಸ್ಸ ಮುಖ ಮಾಡಿ ನಡೆಯುತ್ತದೋ... ಮನಸ್ಸು ಕನಸ ಬೆನ್ನೇರಿ ನಡೆಯುತ್ತದೋ ಬಲ್ಲವರು ಯಾರು?!?!
      ಪ್ರತಿಯೊಬ್ಬರೂ ಕನಸ ಬಗ್ಗೆ ಮಾತನಾಡುತ್ತಾರೆ, ಅವರವರ ಕನಸು ಅವರವರಿಗೆ ಮುಖ್ಯವಾದರೆ, ಸಂಸಾರದ ಸಾಮರಸ್ಯವೆಂತಯ್ಯ ಅನ್ನುತ್ತಾರೆ ಹಿರಿಯರು... ಬದುಕಿ ಬೆಳೆಯಲು ಮನಸ್ಸು ಕೂಡಬೇಕು, ಮನಸ್ಸು ಕೂಡಿದರಷ್ಟೇ ಬದುಕು ಬಂಗಾರ...ಇದು ನಮಗೆಲ್ಲ ತಿಳಿದಿದೆ... ಹಾಗಾದರೆ ಕನಸು ಕಟ್ಟು, ಕನಸ ನನಸಾಗಿಸಲು ದುಡಿ ಅನ್ನುವಿರೇಕೆ?!?!
       ಚಿನ್ನದ ಜಿಂಕೆ ಬಯಸಿದ ಸೀತೆಗೆ, ರಾಮನೇ ಮನದ ತುಂಬೆಲ್ಲಾ..ರಾಮನಿಲ್ಲದ ಬದುಕೇ ಕಾಣದ ಆಕೆ, ಹುಚ್ಚುತನ ಎಂದು ತಿಳಿದು ಕೂಡ, ಕನಸ ಬೆನ್ನೆತ್ತಿದಳಾಕೆ, ಮನ ಕೂಡಿದಾಕ್ಷಣ ಒಂದೇ ಕನಸು ಚಿಗುರೊಡೆಯಬೇಕಂಥೇನಿಲ್ಲ.... ಆದರ್ಶದ ಸಂಸಾರದಲ್ಲೂ ಕನಸುಗಳು ಬೇರೆ ಬೇರೆ ಆಗಿ ಚಿಗುರೊಡೆದೀತು...
      ಮನಸ್ಸೆಂಬ ಮರ್ಕಟದಲ್ಲಿ ಕನಸ್ಸೆಂಬ ಹುಚ್ಚು ಖೊಡಿಯೋ ಇಲ್ಲ ಕನಸ ಹುಚ್ಚಿನಲ್ಲಿ ಮನಸ್ಸು ಮಾರ್ಕಟವಾಯಿತೋ....ಬಲ್ಲವರು ಯಾರಯ್ಯ?!?
   ಇನ್ನು ಕನಸು ಹೇಗೆದ್ದೀತು ಯಾರಿಗೇನು ತಿಳಿದೀತು? ಕನಸ ಕಂಡ ಮನಸ್ಸಿಗೆ ಬಿಟ್ಟು.... ಆಕಾಶದ್ದೆತ್ತೆರದ ಕನಸೋ, ಇಲ್ಲ ಬೇಲಿಯಾಚೆಯ ಕನಸೋ.. ಯಾರು ಹೇಳಿಯಾರು?? ಬೇಲಿಕಟ್ಟಿದವರೇ ಇಲ್ಲ ಆಕಾಶದ ಅಳತೆ ಅಳೆದವರೇ?!?! ಕನಸು, ಕನಸೇ.... ಮನಸ್ಸುಗಳ ಒಳಗೆಲ್ಲ ಹೊಸ ಒರೆತ, ಹೊಸ ಉತ್ಸಾಹ, ಕನಸುಗಳ ಹರಿಯುವುಕೆಯಿಂದ ತಾನೇ!!
       ಮನಸುಗಳ ಒಡಂಬಡಿಕೆಯೊಂದಿಗೆ, ಕನಸುಗಳು ಜೊತೆಗೇ ಉಕ್ಕಿ ಹರಿಯಬೇಕೆಂಬ ಹಠವೇಕೆ? ಇನ್ನೊಬ್ಬರ ಕನಸುಗಳೆಡೆಗೊಂದು ಕೌತುಕ, ಪ್ರೀತಿ, ಗೌರವ ಇಷ್ಟು ಸಾಕಲ್ಲವೇ ಮನಸ್ಸು ಕೂಡಲು.....
         ಬೇಡವೆನಿಸಿದರೂ, ಸಾಗಲ್ಲಿಲ್ಲವೆ ರಾಮ ಬಂಗಾರದ ಜಿಂಕೆ ತರಲು ಸೀತೆಯ ಕನಸನ್ನ ಗೌರವಿಸಿ...ರಾಮನ ವಚನಗಳು ಸೀತೆಯ ಕೌತುಕವಾದಂತೆ...ಇಲ್ಲೆಲ್ಲೂ ಬೇಲಿಯಾಚೆಯ ಬಯಕಗಳೆಂದು ಹೀಗಳಿಸಿಲ್ಲ...ಆಕಾಶದೆತ್ತರ ಕನಸೆಂದು ಉದ್ಧರಿಸಿಲ್ಲ...ಕನಸುಗಳಿಗೆ ರೆಕ್ಕೆ ಕೊಟ್ಟ ಮನಸುಗಳು ಸದಾ ಒಂದಾಗಿ ನಡೆದವಷ್ಟೇ....
          ಕನಸು ಮನಸುಗಳು ಒಂದರೊಳಗೊಂದು ಸೇರಬೇಕು... ಕನಸುಗಳಾಗಲಿ ಮನಸುಗಳಾಗಲಿ ಒಂದಾಗಲೇಬೇಕಿಲ್ಲ.. ಹೊಸ ಕನಸು, ಕನಸ ಕಟ್ಟಲು ಹೊಸ ಹೊಸ ಒರೆತಗಳು ಮನದಲ್ಲಿ ಮೂಡದ್ದಿದ್ದರೆ ಅದೆಂತಹ ಜೇವನ‌.‌..ಕನಸು ನನಸಾಗಲು ಇರುವ ತುಡಿತವೇ ಜೀವನ..  ಪ್ರತಿ ಜೀವನ ಹೊಸದಾಗಬೇಕಾದರೆ ಕನಸುಗಳ ಸಾಲುಗಳು ನಿರಂತರವಾಗಿರಬೇಕು... ಅದಕ್ಕೇ ಗೌರವ, ಸೋಜಿಗ, ಸೌಹಾರ್ದ, ಇಬ್ಬರ ಕನಸು, ಮನಸುಗಳ ಬಗ್ಗೆ ಮೂಡಿ.... ಪ್ರೀತಿ ಅನ್ನೋ ಹಠ, ಹೃದಯದಲ್ಲಿ ಮುಖ್ಯವಾಗಬೇಕು...ಅಷ್ಟೇ...

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...