ಕನಸುಗಳು, ಹಾರಿ ಹೋದಾವು ಅಂತ ಆಕೆಗೆ ಭಯ..ಕಣ್ಣು ತಾಕಿತೆಂದು ತಡೆ,ತಡೆದರೂ ಮುಗುಳು ನಗೆ ಉಕ್ಕಿ ಹರಿಯುತ್ತಿತ್ತು. ಸತ್ಯವೇ, ಕಣ್ಣ ತುಂಬ ಆತನೇ ...ವಯಸ್ಸಾದ ಹೆಣ್ಣಾದರೇನಂತೆ, ಮಕ್ಕಳಿದ್ದರೇನಂತೆ, ಮನಸ್ಸು ಮರ್ಕಟವೇ ತಾನೇ.... ಆಶ್ಚರ್ಯವಾಗಿತ್ತು ಆಕೆಗೆ, ಎಲ್ಲಿಂದ ಬಂತೀ ಭೃಂಗ? ಕಪ್ಪು ಬಿಳುಪಾಗಿದ್ದ ಜೀವನ...ಬಣ್ಣ ಬಣ್ಣದ ಚಿಟ್ಟೆಯಾಗಿತ್ತು....ಬದುಕ ಬಯಲಲ್ಲಿ, ಚಿಮ್ಮಿತ್ತು ಹೊಸತನ, ಹೊಸತನದ ಆಸೆ ತನಗಿತ್ತೋ ಇಲ್ಲ ಬದುಕೇ ಹೊಸತನ ನೀಡಿತ್ತೋ ಆಕೆ ತಿಳಿಯದಾದಳು. ಮನದ ಕನಸುಗಳಿಗೀಗ ಕಸುವು...ಇದು ಕೇವಲ ಎರಡು ದಿನದ ಮಾತು.. ಮಾತುಕತೆಗಳು ಕವಿತೆಗಳಾದವು.. ಹುಚ್ಚುಕೋಡಿಯಾಗಿತ್ತು ಮನ...ಏನು ಕೇಳಿದರೂ ಮಾಡುವ ಆಸೆ. ಮಾಡುವ ಕೆಲಸದಲ್ಲಿ ಹೊಸ ಹುರುಪು. ಏನಿತ್ತಲ್ಲಿ ತಿಳಿಯದು ಆದರೆ ಆ ಎಲ್ಲಾ ಕನಸುಗಳು ಬೇಕಿತ್ತವಳಿಗೆ....ಆಕೆಯ ಕನಸು ಹಾರಡುತ್ತಿದ್ದಾಗಲೇ ಬಂತು ಭೃಂಗದ ಆಸೆಯ ಇಂಗಿತ...
ಆಕೆಗೋ ಇನ್ನಿಲ್ಲದ ತಳಮಳ ರಾತ್ರಿ ಹಗಲು ಪ್ರಶ್ನೆಗಳ ಗೋಜಲ...
ವ್ಯಕ್ತಿಯ ಬಗ್ಗಿನ ಆಸಕ್ತಿ ಅತನ್ನನ್ನು/ ಅಕೆಯನ್ನ ಒಂದೆರಡು ನಿಮಿಷದ ಬಿಸುಪಿಗೇ ಸ್ಥೀಮಿತವಾಗಿಸಬೇಕೆ?
ಗಂಡು ಹೆಣ್ಣಿನ ಸಂಬಂಧ ಹಾಸಿಗೆಯ ಎರಡು ನಿಮಿಷಕ್ಕೆ ಸ್ಥೀಮಿತವಷ್ಟೇಯಾ?
ಆಸಕ್ತಿಗಳೆಲ್ಲ ಬಯಕೆಗಳೇ.. ವ್ಯಕ್ತಿ ಬಯಕೆ ಅಗಬೇಕಾದರೆ... ಆತ/ಆಕೆ ನಮ್ಮನ್ನ ಪೂರ್ಣವಾಗಿ ಆವರಿಸುವ ಅಗತ್ಯತೆ ಇಲ್ಲವೇ?
ಕನಸುಗಳಿಗೆ ಕಾಲಿದೆ ಅದು ಓಡುತ್ತದೆ... ಬಿಸಿ ನಿಂತ ಮೇಲೆ ಅಲ್ಲೇನಿರುತ್ತೆ ಬರೀ ಬೂದಿ...
ಬದುಕಿನ ತೋಟದಲ್ಲಿರುವ ಸೌಂದರ್ಯವನ್ನ ಪ್ರೀತಿಸಿದರೆ ಅದು ಒಂಟಿತನದ ಹಪಹಪಿಯೇ?
ಕನಸುಗಳು ಇನ್ನೂ ಬಣ್ಣ ಬಣ್ಣದ್ದಾಗೇ ಇದೆ, ಪ್ರಶ್ನೆಯ ಗೋಜಲಗಳೂ ಅಲ್ಲೇ ಇವೆ... ಆಸೆಗಳಿಲ್ಲದ ಬದುಕಿಲ್ಲ ನಿಜ ಆದರೆ ಕನಸುಗಳು ಆಸೆಗಳಾಗಬೇಕಾದರೆ ಹೆಣ್ಣಿಗದು ಜೀವನವಾಗಬೇಕಾದ ಅನಿವಾರ್ಯತೆ, ಗಂಡಿನ ಕನಸುಗಳೆಲ್ಲ ಅದ್ಹೇಗೆ ಆಸೆಗಳಾಗಿ ಹರಿದಾಡಿಬಿಡುತ್ತೆ, ಅಂತ ಆಕೆಗೆ ಸೋಜಿಗ.
ಹೆಣ್ಣು ನದಿಯಾಗಿ ಹರಿಯಬೇಕು.... ಉಬ್ಬು ತಗ್ಗುಗಳಲ್ಲಿ ಬೊರ್ಗೆರದು...ಅಡೆತಡೆಗಳನ್ನು ಕೊಚ್ಚಿ ಹರಿಯಬೇಕು ಆಗಲೇ ತಂಪು... ನದಿಯಾಗಿ ಹರಿಯಲು ಬೇಕು ಉಗಮದ ಉನ್ಮಾದ.... ಅಲ್ಲಿ ಬಂಡೆಯಾಗಿ ನಿಲ್ಲಬೇಕವನು...ಆಗಲೇ ಕನಸು ಆಸೆ ಅದೀತು.

No comments:
Post a Comment