ಕನ್ನಡ ರಾಜ್ಯೋತ್ಸವದ ಆರಂಭದಲ್ಲೇ ಒಂದಷ್ಟು ಬರೀಬೇಕು ಅಂತ ಅನ್ನಿಸಿದ್ದು...
ಒಂದು ಪುಟ್ಟ ಕನ್ನಡದ ಹುಡುಗಿ ತನ್ನ ಅಪ್ಪ ಅಮ್ಮನೊಡನೆ ಇಂಗ್ಲಿಷ್ ನಲ್ಲೇ ವ್ಯವಹರಿಸಿದ್ದ ಕಂಡು...
ಕನ್ನಡದ್ದೇ ಕಂಪು ಅಂದುಕೊಂಡ ನನ್ನೂರಿನ ಇನ್ನೊಂದು 20 ವರ್ಷದ ಹುಡುಗಿ ಇವತ್ತು ಪೇಟೆಯವಳಾಗಿ, ಮನೆಯ ಒಳೆಗೆ ಇಂಗ್ಲಿಷ್ ತಂದ ಬಗೆಯನ್ನ ಕಂಡು...
ನಾನು ಕೆಲಸ ಮಾಡುವ ಕಡೆ ಕನ್ನಡದವರೇ ಅಂದುಕೊಂಡವರೂ, ಕನ್ನಡ ಹೆಮ್ಮೆ ಎಂದುಕೊಂಡವರೂ ಒಂದು ಪೂರ್ತ ವಾಕ್ಯವನ್ನ ಇಂಗ್ಲಿಷ್ ಇಲ್ಲದೆ ಮಾತನಾಡಲಾಗದೇ ಹೋದದ್ದನ್ನ ಕಂಡು....
ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕನ್ನಡ ಗುತ್ತಿಗೆ ಪಡೆದ ಕನ್ನಡ ಶಾಲೆ ಮಾಷ್ಟ್ರಗಳನ್ನ ಬಿಟ್ಟು ಬೇರಾರಿಗೂ ಒಂದಷ್ಟು ಹೊತ್ತು ಶುದ್ಧ ಕನ್ನಡ ಮಾತನಾಡಲಾಗದ್ದು ಕಂಡಾಗ...
ಬೇಸರವಾಗುತ್ತೆ.....ಮಣ್ಣಿನ ಸಂಸ್ಕೃತಿ ಉಳಿಯಬೆಕಾದರೆ ಮಣ್ಣಿನ ಭಾಷೆ ಉಳಿಯಬೇಕಲ್ಲ.. ಸಂಹನೆಯ ಮಾಧ್ಯಮವೇ ಬದಲಾದರೆ ಯೋಚಿಸುವ ಆಂತರ್ಯದಲ್ಲಿ ಕನ್ನಡತನ...ಮಣ್ಣಿನ ಸಂಸ್ಕೃತಿ ಉಳಿದೀತೇ?? ಯಾಕೆ ಉಳಿಸಬೇಕು?? ನಿಜ....ನಾನೇನು ಶುಧ್ಧ ಸಂಸ್ಕೃತಿ ಹರಿಕಾರಳಲ್ಲ... ಗೌರಮ್ಮನಂತೆ ಹಿಂದಿನದ್ದನ್ನೇಲ್ಲಾ ಪಾಲಿಸುತ್ತಾ ಸೀರೆ, ಭರತನಾಟ್ಯ ಸನಾತನ ಧರ್ಮ ಅಂತೆಲ್ಲ ಪಟ್ಟಾಗಿ ಪಾಲಿಸುವವಳಲ್ಲ... ಬದಲಾವಣೆ ನೆಲದ ಯಾವತ್ತೂ ಸತ್ಯ ಅಂತ ತಿಳಿದವಳು... ಆದರೆ, ಭಾಷೆಯ ಜೊತೆ ನಮ್ಮೊಳಗಿನ ನಮ್ಮತನವನ್ನ ಪೂರ್ತಿಯಾಗಿ ಮಾರಿಬಿಟ್ಟರೆ...ನಮ್ಮ ಮುಂದಿನ ಜನಾಂಗವಿಡೀ ಗೊಂದಲದಲ್ಲಿ ತಬ್ಬಲಿತನದಲ್ಲಿ...ತನ್ನನ್ನ ತಾನು ಕಳೆದುಕೊಂಡದ್ದರಲ್ಲಿ ಕಳೆಯುವುದಿಲ್ಲವೇ??? ಇದು ನನಗೆ ಸಂಕಟ ಉಂಟುಮಾಡುತ್ತದೆ... ಸಂಸ್ಕೃತಿ...ತನ್ನತನ ಇವೆಲ್ಲಾ ಮನುಷ್ಯನಿಗೆ ತಾನು ತನ್ನದು ಅನ್ನುವ ಸುಖ ಕೊಡುವುದಂತೂ ನಿಜ ತಾನೇ!!... ಅದೇ ಇಲ್ಲ ನಾವು ಯಡಬಿಡಂಗಿಗಳಾದೆವು ಎಂದರೆ ಮಕ್ಕಳು ನಾಳೆ ಅಸಾಯಕತೆಯಿಂದ...ತಳಮಳದಿಂದ ಇಡೀ ಜೀವನ ಕಳೆಯುವ ಪರಿಸ್ಥಿತಿಗೆ ನಾವೇ ದೂಡುತ್ತಿದ್ದೇವೆ ಎಂದೆಣಿಸುತ್ತಿಲ್ಲವೇ????
ಇನ್ನೂ ಬರೆಲಿದೆ... ಇದು trailor ಅಷ್ಟೇ....

No comments:
Post a Comment