Friday, 11 August 2017

Malae...... Sidileragida kanasugala naduve (ಮಳೆ...ಸಿಡಿಲೆರಗಿದ ಕನಸುಗಳ ನಡುವೆ)

ಬೋರೆಂಬ ಮಳೆ ಮನೆಯ ಸುತ್ತ....
ಮನದ ತುಂಬಾ ಕವಿದ ಮೋಡ ..ಬೋರೆಂದು
ಸುರಿಯುತ್ತತ್ತು ಹೃದಯದ ತುಂಬೆಲ್ಲ
...,.........
ಕಣ್ಣಿನಿಂದ ಇಳಿದ ಮಳೆ ಮಡಿಲ ತುಂಬಾ
ಮೋಡ ಸಿಡಿಲು ಊರಲ್ಲೆಲ್ಲ...........
ಕನಸು ಕೊಂದ ಸಿಡಿಲ ..ನೆನೆಯುತ್ತಾ
ಇಳಿದಿತ್ತು ಮಳೆ ಕಣ್ಣಿನಿಂದ‌.....

ಆ ಒಂದು ಕ್ಷಣ....ಒಂದೇ ಕ್ಷಣ....
ಎಲ್ಲಾ ನೆಡೆ ಹುಸಿಯಾಗುತ್ತು...
ಭವಿಷ್ಯದ ಆಸೆ, ಕನಸುಗಳ...ಹೊತ್ತ
ಧೃಡ ನಡೆಗೆ ಗರ ಬಡಿದಿತ್ತು....
ಸ್ವಾವಲಂಬನೆಯ ನೆಡೆ ಚೂರಾಗಿತ್ತ...
ವ್ಯಾಘ್ರದ ಕಣ್ಣಲ್ಲಿ........
"ಹುಡುಗಿ" ಕಾಣಬಾರದೇ ಕನಸನ್ನೂ...

ದೇಹಕ್ಕಾ ದುರಾಸೆ?!?!  ಮನಸ್ಸಿಗಾ ವ್ಯಾಘ್ರತನ??
ಗಂಡೆಂಬ ಅಹಂಕಾರವಾ!?? ಹೆಣ್ಣೆಂಬ ತಾತ್ಸಾರವಾ?
ಒಂದು ಕ್ಷಣದ ಭಿಭಿತ್ಸ ಆಸೆಗಾ...
ವರ್ಷಗಳಿಂದ ಮನದೊಳಗೇ...ಕೂಡಿಟ್ಟ
ಕಾಮನಬಿಲ್ಲಂತ ಆಸೆಗಾ ಕೊಡಲಿ ಏಟು?!?

ಅತ್ಯಾಚಾರ...ಕಾಮನೆ..ಇಲ್ಲ ಭಿಭಿತ್ಸ ಪ್ರೀತಿ‌...
ಹೆಸರೇನೇ ಇರಲಿ......
ಹುಡುಗಿಯ ಮನದ ಕನಸೆ ಚದುರಿ ಹೋಯಿತಲ್ಲ
ಭಯದ ಕಾರ್ಮೋಡ ಎಲ್ಲೆಲ್ಲೂ......
ಇನ್ನಿರುವುದು ಬರೀ ಕತ್ತಲಿನ ಭಯ!!!
ಸಿಡಿಲಿನ ಆರ್ಭಟ, ಮಳೆಯ ನೋವು....

ಮೊದಲಿಂದಲೂ ಆಕೆಗೆ ಮಳೆ..ಉತ್ಸಾಹ ಪ್ರೀತಿ
ಕನಸು ಕಟ್ಟುವ..ಪುಳಕಗಳನ್ನ ತನ್ನ ಸುತ್ತೆಲ್ಲ ಸುರಿಸುವ
ಹೆಣ್ಣು....ಹೆಣ್ಣಾದ ಒಂದೇ ಕಾರಣಕ್ಕೆ ...
ಮಳೆ ಇಂದು ನೋವು...ದುಃಖದ ಪ್ರತೀಕ...
ಕಣ್ಣು, ಮನೆ, ಮನ ಎಲ್ಲಾ ಬರೀ ಮಳೆ...
ಮಳೆಯೇ ಅದು ಎಲ್ಲೆಲ್ಲೂ.....
ಸಿಡಿಲೆರಗಿದ ಕನಸುಗಳ ನಡುವೆ....

ಇವತ್ಯಾಕೋ ಕವಿತೇನೇ ಬರೀಬೇಕು ಅನ್ನಿಸಿತ್ತು... ಓದಿಕೊಳ್ಳುತ್ತಿರಲ್ಲ‌........
ಇನ್ನೆರಡು ವಾರ ಕವಿತೆ ಬರೆಯುವ ಹಂಬಲ..

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...