Thursday, 29 June 2017

Yendu nannavaladeyo kanase!! ಎಂದು ನನ್ನವಳಾದೆಯೋ ಕನಸೇ!!

 ನಾ ಹಾಡಲು ನೀ ಆಡಬೇಕು.... ತೂಗಾಡುತಾ ತಾಳ ಹಾಕಬೇಕು....ಆತನ ಬಯಕೆ ತುಂಬಾ ಚಿಕ್ಕದ್ದು.

 ನೀ ಹಾಡಲು, ಮನ ತುಂಬಿ ಮಿಡಿಯಲು.. .
ಮನದಲ್ಲಿ ಮೌನ, ಅದರೆ ಕನಸಲ್ಲಿ ಸಂಚಲನ...
 ಹಾಡಿನ ಪರಿಯೋ.... ಪರಿಸರದ ಅನುಭೂತಿಯೋ..
ನಾನಾಗಬೇಕು ಕನಸ ಮೈದುಂಬಿ.. ತೂಗ್ಯಾಲೆ...ತುಂಬೆಲ್ಲ ಪಸರಿಸಿ.....
 ಹಾಡು ಗೆಳೆಯ ಅಂತಹ ಹಾಡನ್ನ....ಗೆಳತಿಯ ಹಾಡು ಮುಂದುವರಿಯಿತು..

 ಎಂತಹ ಮಾತಂದೆ ಗೆಳತಿ, ನನ್ನ ತುಂಬೆಲ್ಲ ನೀನೆ....ಆತ ಬಿಟ್ಟೂಬಿಡ

 ನಾನೆಷ್ಟರವಳು...ಆಕೆ ಚಿಪ್ಪಿನಿಂದ ಹೊರಬರಳು.

 ನಾನೆಷ್ಟರವಳು?!?! .........ಗೊತ್ತಗಾಲಿಲ್ಲ
 ನನ್ನ ಬದುಕಿನ ಬಂಡಿಯಲ್ಲಾ...ಆತನ ಆಸೆಯ ಕುದರೆಗೆ ಓಟದ ತೆವಲು

 ಅವರವರ ಬದುಕಿಗೆ, ಅದರದರದೇ ಓಟ....
 ಅಲ್ಲಲ್ಲೆ ಎಡತಾಕುವ ಬಳ್ಳಿ ‌...
ನಾನ್ಯವ ಎಡತಾಕುವಿಕೆಗೂ ಇಲ್ಲದವಳು..
 ನಿನ್ನ ಬದುಕಂತೂ ಕೇಳಲೇ ಬಾರದು
 ಅದು... ಹಾರುವ ಕುದುರೆ
 ಧೂಳಿನ ಮಧ್ಯದಲ್ಲಿ... ಅಲ್ಲೆಲ್ಲೋ...
ಎಡತಾಕುವಿಕೆಗೆ ನಾನಿಲ್ಲ, ಹಾರುವ ಕುದರೆ ನೀನು... ಓಡುವ ಬಂಡಿಗಳು ತಾಗುವುದಾದರೂ ಎಲ್ಲಿ ಹುಚ್ಚ..........
 ಗೆಳತಿಯ ಒರೆತ ಮುಂದುವರಿಯಿತು...

 ಅದು ಅವರವರ ಸ್ವಾತಂತ್ರ್ಯವು ಕೂಡ ಅಲ್ವೆ?
 ಬಯಸುವುದು ಸಹಜ..
ಪೃಕೃತಿಯನ್ನು ಬಯಸದ ಕವಿ, ಕವನ ಉಂಟೆ.... ಸ್ಪಂದಿಸುವುದು ಮಾತ್ರ ಅವರವರ ಆಯ್ಕೆ
ಪೃಕೃತಿಯನ್ನ ಒತ್ತಾಯಿಲಾದೀತೆ!! ಏನಂತೀಯಾ..ಆತ ಕೇಳಿಯೇ ಬಿಟ್ಟ

ಯಾರ ಬಯಕೆ.?? ನೀನೀಗ?😀😀... ನಗು ಗೆಳತಿಯದು

ನಿನ್ನ ಅಭಿಪ್ರಾಯ ಏನು? .ನಿನ್ನದೇ ವಿಷಯ ದಲ್ಲಿ...ಬಿಡಲೊಲ್ಲ ಆತ

 ನಾನ್ಯಾರ ಕನಸೂ ಕದಿಯಲಿಲ್ಲ ಗೆಳೆಯ...ಆಕೆಗೋ ಹೆದರಿಕೆ

 ನೀನಲ್ಲದೇ ಇನ್ಯಾರ ಮನ ಕಲಕಲಿ?!?
 ನನಗೋ ಪೃಕೃತಿಯ ಕನಸು, ನಿನ್ನ ಮನ ಬಿಟ್ಟು ಇನ್ಯಾವುದೂ ಕಚಗುಳಿ ನೀಡದೇ ಹುಡುಗಿ.‌..ಪುನಃ ಕನಲಿದ ಆತ

 ಬಯಕೆಯ ತೋಟದ ಹಣ್ಣುಗಳೆಲ್ಲ..ನಮ್ಮದಾಗದು...
ಆದರೆ ಬಯಸೋದು ತಪ್ಪಲ್ಲ ಅಲ್ಲವೇ ಅಲ್ಲ
ಬಯಕೆಯನ್ನು ಮೀರಿ ನಿಂತರೆ ಜೀವನೋತ್ಸಾಹ...ಎಲ್ಲಿದೆ ...ಪೃಕೃತಿ ಬಯಕೆಯಿಂದ ಬೇರಾದರೆ ವಸಂತ ಮೂಡೀತೆ?? ಬಿಸಿಲು, ಮಳೆಗಳಿಂದ ಜೀವಿಗಳ ಮುಗಳ್ನಗೆಗಳು ಉಳಿದಾವೇ?? ಬಯಕೆಯಿಂದ ಹುಡುಗಿ ಹೇಗೆ ಹೊರತಾದಳು.

 ವಾಹ್ಹ ಕ್ಯಾ ಬಾತ ಹೇ.. ಉದ್ಗಾರವದು...

 ಸರಿ...ಈಗೆಷ್ಟು ಬಯಕೆಗಳಿವೆ..ಸ್ಪಂದನಕ್ಕೆ ಕಾದು..ನಿನ್ನಲ್ಲಿ?.‌..ವಸಂತ ಬರಲು ಇನ್ನೂ ವರುಷ ಕಾಯಬೆಕಾದೀತು!! ಬಿಗುಮಾನದ ಗೆಳತಿ.

 ಇಷ್ಟು ಹೇಳಿದ ಮೇಲೆಯೂ ಮತ್ತೆ ಪ್ರಶ್ನೆ ಕೇಳಿದರೆ ಎನೆನ್ನಲಿಯೇ. ಹತಾಶನಾದ ಆತ....

ಕನಸು ಕಾಣುತ್ತಾ ಗೆಳತಿಯ ಮನ ಗೆಲ್ಲಲೇ... ಕಾಯುತ್ತಾಳಾಕೆ ಏನ್ನನ್ನ?!?! ಆತನಲ್ಲಿ ಗೊಂದಲ.. ಎಲ್ಲಾ ಗಂಡಿನಂತೆ...

ಪೃಕೃತಿ ಆಕೆ.. ಪುರಷ  ಆಕೆಯೊಳಗೆ ಲೀನವಾಗಿಸಿದಾಗ ಮಾತ್ರ ಅವನೊಳಗೆ ತಾನು ಇಳಿಯಬಲ್ಲಳು ...ತನ್ನತನದೊಂದಿಗೆ ಪೃಕೃತಿಯ ಸುವಾಸನೆ ಸೇರಿದಾಗಷ್ಟೇ ಪುರಷನ ಕನಸುಗಳನ್ನ ವಿಸ್ತರಿಸುವಳಾಕೆ....

ಪೃಕೃತಿ ಪುರುಷ ಒಂದಾಗಲು.. ಪುರಷನಲ್ಲಿರಬೇಕು ಬಯಕೆಯ ಹಪಹಪಿ.. ಕನಸುಗಳ  ಪೊಟ್ಟಣ..ಕರಗಿ ಒಂದಾಗುವ ಜೀವಂತಿಕೆ....

ಗೆಳತಿಗೆ ಆತ ಬೇಕು, ಪುರುಷನಿಲ್ಲದ ಪೃಕೃತಿ ಇದೆಯೇ... ಪೃಕೃತಿ ಆಕೆ ಆದರವನು ಸಂಪೂರ್ಣ ಪುರಷನಾದಾಗಷ್ಟೇ....ಆಕೆಯೊಳ ಸೇರಬಲ್ಲ‌‌‌....

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...