ನೀರೇ ನೀರು... ಸಮುದ್ರದ ತುಂಬಾ ನೀರು, ಕುಡಿಯಲಾಗದ ನೀರು ಆದರೂ ಜೀವರಾಶಿಗಳಿಗೆ ಜನುಮ ಕೊಡುವ ಜಲರಾಶಿ... ಜಲರಾಶಿಯ ಅನುಭೂತಿಯೇ ಅದ್ಭುತ....ಹೆಣ್ಣಿನ ಕನಸಿನಂತೆ.. ಕನಸಿನ ಅನುಭೂತಿಗಾಗಿಯೇ ಬದುಕುವ ಬಯಕೆ.
ಕನಸು ನನಸಾಗುವ ಬಯಕೆ.. ಸಮುದ್ರದ ನೀರನ್ನ ಕುಡಿಯಲು ಪ್ರಯತ್ನಸಿದಷ್ಟು ಕಷ್ಟ..
ಸಮುದ್ರ ಅದು ಬರೀ ಶಬ್ದವಲ್ಲ... ಆಗಾಧತೆ, ಸಂತಸ...ಆಟ,ಸ್ಪೂರ್ತಿ,ಸ್ಪರ್ಧೆ... ಇನ್ನೇನು..??.. ಸಮುದ್ರವೇ ಜೀವನ .. ನಮ್ಮ ಮೀನುಗಾರರಿಗೆ, ಸಮುದ್ರ ತಾಯಿ, ಸಮುದ್ರ ಬದುಕು, ಅಂತೆಯೇ ಸಮುದ್ರ ಜೀವರಾಶಿ ಎಷ್ಟೋ ಕನಸುಗಳಿಗೆ..ಇನ್ನೆಷ್ಟೋ ಕೌತುಕಗಳಿಗೆ..ಮತ್ತೇಷ್ಟೋ ಚಪಲಗಳಿಗೆ... ಸಮುದ್ರವೇ..ಸಮುದ್ರ
ಹೆಣ್ಣಿನ ಕನಸೂ ಅಂತೆಯೇ... ಅದು ಬರೀ ಆಶಯವಲ್ಲ.. ಅದೊಂದು ಹರಹು, ಸಮಾಧಾನ... ಅದು ಇಡೀ ಕುಟುಂಬಕ್ಕೆ ಸ್ಪೂರ್ತಿ..ಅದಿಲ್ಲದೆ ಆಟವಿಲ್ಲ, ಸ್ಪರ್ಧೆಯೂ ಇಲ್ಲ.. ಅದರೊಳಗೇ ಅಡಗಿದೆ ಬಂಡಾಯ. ಅದರಲ್ಲಿದೆ ಜೀವ ಪ್ರೀತಿ...ಇಡೀ ಜೀವಮಾನದ ಇನ್ನೇಷ್ಟೋ ಕೌತುಕಗಳು.. ಹೆಣ್ಣಿನ ಚಪಲಗಳಿಗೆ ಕನಸೇ ಆಧಾರ..
ಸಮುದ್ರದ ಆಳ.. ಅದರ ಅಳತೆ ಸಧ್ಯಕ್ಕೆ ಸಾಧ್ಯವಾಗದ ಮಾತು. ಇಲ್ಲೆಲ್ಲೋ ಕಾಲಿಕ್ಕಬಹುದು ಅನ್ನಿಸಿದರೆ ಇನ್ನೆಲ್ಲೋ ಮುಳುಗಿಯೇ ಹೋದೆ ಅನ್ನಿಸುತ್ತೆ... ಸಮುದ್ರ ತಟದಲ್ಲಿ ನಿಂತರೆ ಕಣ್ಣ ಹಾಯಿಸಿದಷ್ಟೂ ನೀರೇನೀರು... ತನ್ನೊಳಗೆ, ಬದುಕು ಹೋರಾಟ ಇಷ್ಟಕ್ಕೆ ಮಾತ್ರ ಜಾಗ ಅನ್ನುತ್ತೆ... ಒಣಗಿದ ಪ್ರತಿ ಸರಕೂ ತಟಕ್ಕೇ...
ಹೆಣ್ಣಿನ ಕನಸಿಗೊಂದು ಅಡೆಯೇ...ಅದಕ್ಕೊಂದು ಅಂತ್ಯವೇ?!?!.. ಮನಸ್ಸ ತುಂಬಾ ಇರುವ ಪ್ರೀತಿ, ಕನಸತುಂಬಾ ಪಸರಿಸುತ್ತೆ. ಕಣ್ಣೀರಿನ ಓಗಕ್ಕೆ..ಕನಸಲ್ಲಿ ಮುಳುಗೆದ್ದ ಕರುಣೆ, ಪ್ರೀತಿ ಕಾರಣ.. ಕನಸು ನಿಂತದ್ದು, ಕೈಗೆ ಸಿಕ್ಕಿದ್ದು ನೋಡಿದ್ದೀರ?? ಅದಕ್ಕೊಂದು ಗಡುವೂ ಇಲ್ಲ..ಅದು ಓಡುತ್ತೆ, ಅದೇ ಜನುಮ ನೀಡುತ್ತೆ ಹೊಸ ಕನಸಿಗೆ, ನನಸಾಗುವ ಕನಸೇ ಹೆಣ್ಣಿಗಿಲ್ಲ...
ನೊರೆನೊರೆಯ ನೀರು... ಎದ್ದೆದ್ದು ಅಬ್ಬರದ ತೆರೆ...ತೊರೆಗಳ್ಳೆಲ್ಲ ಬಂದು ಸೇರಿ ಸಮುದ್ರ ನಗುತ್ತೆ, ಸಮುದ್ರದಂತೆ ಎಲ್ಲೆಲ್ಲೂ ಪಸರಿಸುವ ಕನಸು. ಹೆಣ್ಣ ಮಕ್ಕಳ ಕನಸೇ ಹಾಗೆ, ಸಮುದ್ರದಂತೆ ಅಬ್ಬರಿಸುವ, ಪ್ರೀತಿಸುವ ಆಗಾಧತೆ. ನಿಂತಲ್ಲಿ ನಿಲ್ಲದೆ... ಅದಕ್ಕೊಂದು ಸಮಯದ ಕೊನೆಯೂ ಇಲ್ಲದೆ, ಆದಿ, ಅಂತ್ಯಗಳಿಲ್ಲದ ಬರೀ ತನ್ನದಾಗಿಸಿಕೊಳ್ಳುವ ಕನಸುಗಳು... ಹೆಣ್ಣಿನ ಕನಸುಗಳು, ಸ್ಪೂರ್ತಿ, ನಿಜ....ಅವುಗಳೇ ಅವಳ ಜೀವನಾಡಿ.... ಆದರೆ ಆಕೆಗೊಂದು ಕುಡಿ ಆಸೆ... ಕನಸು ನನಸಾದೀತೆ? !?!.. ಸಮುದ್ರದ ನೀರು ಕುಡಿಯುವಂತಾದೀತೇ!?!?....

No comments:
Post a Comment