Monday, 19 June 2017

Putta Prapanchada Prashnegalu (ಪುಟ್ಟ ಪ್ರಪಂಚದ ಪ್ರಶ್ನೆಗಳು..‌.)

ಸ್ವಲ್ಪ ಕಷ್ಟ ಕಣ್ರೀ..ನನ್ನಂತವರಿಗೆ..ಕರಾವಳಿಯ ವತಾವರಣದ ದೋಷವೋ..ಇಲ್ಲಾ ಹುಟ್ಟಿನಿಂದ ಬಂದ ದೋಷವೋ.. ಒಂದೋ ಮಳೆ ಇಲ್ಲಾ ಬಿಸಿಲು...ಇದು ಬಿಟ್ಟು ಇನ್ನೊಂದು ನನಗೆ ತಿಳಿದಿಲ್ಲ... ಮಳೆಯ ತಂಪಿನೊಂದಿಗೆ..ಕರಾವಳಿಯಲ್ಲಿ ಬಿಸಿಲು ಕಾಣಿಸಿದೆ...ಹಾಗೇ ಮನಸ್ಸಿನಲ್ಲೂ ಬಿಸಿಲು....

ಬಹಳ ದೊಡ್ಡ ವಿಷಯವೇನಲ್ಲ.. ನನ್ಯಾರು ದೇಶದ ಉದ್ಧಾರದ ಬಗ್ಗೆ ಮಾತಾಡಲು.. ನನ್ನದೆನಿದ್ದರೂ.‌‌‌.ಪುಟ್ಟ ಪ್ರಪಂಚ, ಇವತ್ತಿನ ಮಾತು..ಈ ಪುಟ್ಟ ಪ್ರಪಂಚದ್ದೇ.. ನನ್ನ ನಿಮ್ಮ ಮನೆಗಳಲ್ಲಿ ಓಡಾಡುವ ಈ ಪುಟ್ಟರದ್ದು....

ನಮಗೆಲ್ಲ"ನಾನು, ನನ್ನ ಮಗ/ಮಗಳು" ಬದ್ಧಿವಂತರು.. ಒಳ್ಳೆಯವರು.. ಆದರೆ ಈಗಿನ ಪ್ರಪಂಚ, ಸಮಾಜ ..‌ಅವಿವೇಕಿ ಸಮಾಜ,.. ನಾವುಗಳಿಲ್ಲದ ಸಮಾಜವುಂಟೇ?!?!?  ಇದ್ಯಾರನ್ನ ದೂಷಿಸ ಹೊರಟ್ಟಿದ್ದು ನಾವು??..

ಸಮಾಜೀಕರಣ, ನಾಗರೀಕರಣ, ಬದಲಾವಣೆಯ ಗಾಳಿ, ಬೆಳವಣಿಗೆ.‌‌...ಇವೆಲ್ಲ ನಮ್ಮ ಕಾಲದವರೆಗೂ ಬೇಕಿತ್ತು..‌ ಈಗ ನೋಡಿ..."ಎಂತಹ ಕೆಟ್ಟ ಬೆಳವಣಿಗೆ, ನಾಗರೀಕರಣ ನಮ್ಮ ಮಕ್ಕಳನ್ನು ತಿಂದು ಹಾಕುತ್ತಿದೆ"  ನಾವೆಲ್ಲ ಅಡುವ ಮಾತೇ ... ಹಾಗಾದರೆ ನಮ್ಮ ಮನಸ್ಸಿನ ಭೃಮೆಯ ಮೇಲಷ್ಟೆ ನಾಗರೀಕರಣ, ಸಮಾಜೀಕರಣ ಬೇಕೆ??!? ..ನಾವು ಯೋಚಿಸಲಾಗದ್ದೆಲ್ಲ ಕೆಟ್ಟದ್ದೇ???

ಕಳೆದು ಹೋಗುತ್ತಿರುವ ನಮ್ಮ ಮನಸ್ಸಿನಾದಾರದ ಸೃಜನಶೀಲತೆ ಬಗ್ಗೆ, ಕಳೆದು ಹೋಗುತ್ತಿರುವ ನಾವಂದುಕೊಂಡ ಶಿಸ್ತಿನ ಬಗ್ಗೆ‌..‌ ನಮಗೆ ನಾವೇ ಇಲ್ಲ ನಮ್ಮ ಹಿರಿಯರು ಹಾಕಿದ ಸಾಮಾಜಿಕ ಚೌಕಟ್ಟು ಮುರಿದು ಬೀಳುತ್ತಿರುವ ಬಗ್ಗೆ ನಮಗೆಲ್ಲ ವಿಪರೀತ ಆತಂಕ... ವಿಕಾಸ ವಾದದ ಪ್ರಕಾರ ವಿಕಸನ, ಬದಲಾವಣೆ ನಿರಂತರ... ಹಾಗಿದ್ದ ಮೇಲೆ, ನಾವಂದುಕೊಂಡಿದ್ದೇ ಸತ್ಯವಾ?? ನಮ್ಮ ಚೌಕಟ್ಟುಗಳೂ, ಹಿಂದಿನದರಂತೆ ಮುರಿಯಲೇಬೇಕಲ್ಲ... ನಮಗ್ಯಾಕೆ ಆತಂಕ?!?!?

ನವೆಂದೂ ತಿಂದು ನೋಡದ, ನಾವೆಂದೂ ಆ ವಯಸ್ಸಿನಲ್ಲಿ ಬದುಕಿ ನೋಡದ, ಆಡಿ ನೋಡದ, ತಿಂಡಿ, ಬದುಕು, ಆಟ ಇವುಗಳ ಬಗ್ಗೆ ನಮಗೇಕೆ ಮುನಿಸು?!?!.. ನಮಗಿಂತ ಹೆಚ್ಚು ಸಮಾಜೀಕರಣಗೊಂಡ ನಮ್ಮ ಚಿಣ್ಣರನ್ನ.. ನಮ್ಮ ಹಿರಿಯರಿಗಿಂತ ಹೆಚ್ಚು ನಾಗರೀಕರಣಗೊಂಡ ನಮ್ಮನ್ನ ಒಪ್ಪಿಕೊಂಡಂತೆ ಗೊಣಗದೆ ಒಪ್ಪಿಕೊಳ್ಳಲಾರೆವೇಕೆ??!?!

ಸಮಾಜ ಬದಲಾಗುತ್ತೆ... ಸಾಮಾಜಿಕ ಚಿಂತನೆಗಳೂ ಕೂಡ, ಇಂದಿನ ಕನಸು, ನಾಳೆಗೆ ಬರೀ ಗೋಳಾದೀತು... "ನಾನು, ನನ್ನದು" ಇವತ್ತಿಗಷ್ಟೇ... ನಾವ್ಯಾರು ನಾಳಿನ ನಮ್ಮ ಪುಟ್ಟ ಕಂದಮ್ಮಗಳಿಗೆ ಬದುಕ ಕಟ್ಟಿ ಕೊಡಲು, ನಾಳಿನ ಸಮಾಜ ಕಟ್ಟಿ ನಿಲ್ಲಿಸಲು?!?!?

ನಾವು ಹೇಳುವುದೆಲ್ಲ ಸರಿಯಾದರೆ... ಪ್ರಶ್ನಿಸಲು ಅಧಿಕಾರವೇ ಯಾರೀಗೂ ಇಲ್ಲ.. ಸನಾತನತೆಯೂ ಸರಿಯೇ... ಇಂದಿನ ಬದುಕನ್ನ ಒಪ್ಪಿಕೊಳ್ಳದೆ... ನನ್ನ ಬಾಲ್ಯವೇ ಅತ್ಯಬ್ಧುತ, ಅಷ್ಟೂ ಸಂತೋಷ ನಿನಗೆ ಕಟ್ಟಿಕೊಡುತ್ತೇನೆ...ನನ್ನಂತೆ ನಡಿ ಅನ್ನೋದು.. ಸನಾತನತೆಯಲ್ಲವೇ?!?!?

ನಮ್ಮ ಹಿಂದಿನ ಸಮಾಜಕ್ಕೆ ಸವಾಲೊಡ್ಡಿ ನಾವೆಲ್ಲ ಚಿಂತಕರು ಅನ್ನೋ ನಾವು, ನಮ್ಮ ಚಿಣ್ಣರನ್ನ ಮಾಹಾನ್ ಚಿಂತಕರನ್ನಬೇಕೆ?!?! (ಚಿಂತಕರ ಮಕ್ಕಳು).. ಹಾಗಾದರೆ ಮಾಹಾನ್ ಚಿಂತಕರ ಸಮಾಜವೇಕೆ ಹಳಸಲಾದೀತು?!?!?

ಪ್ರಶ್ನೆಗಳು ನೂರಾರು..ನಾನು ಹೀಗೇರೀ... ಕಡಿಮೆ ಯೋಚನೆಯವಳು... ಅದಕ್ಕೇ ನನ್ನಲ್ಲಿ ಬರೀ ಪ್ರಶ್ನೆಗಳೇ ಇವೆ ರೀ...ಆದರೆ ನನ್ನ ಬದುಕು ಸುಲಭಾ ರೀ...ಯಾಕೆ ಕೇಳಿದ್ರಾ?!?! ನಾನು ತಿರುಗುವ ಕಲ್ಲು...ಬದಲಾವಣೆ ಒಂದೇ ಸತ್ಯ ಅಂತ ನಂಬಿದೋಳು ಕಣ್ರೀ.... 

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...