Sunday, 28 May 2017

Mungaru Male...Hennu...Kanasu ( ಮುಂಗಾರು ಮಳೆ... ಹೆಣ್ಣು...ಕನಸು)

ಮಳೆ..ಮುಂಗಾರು ಮಳೆ..ನನ್ನ ಹುಟ್ಟು ಕರಾವಳಿ ಆದದ್ದಕೋ...ಇಲ್ಲ ಮಳೆಯಲ್ಲೇ ಎಲ್ಲರ ಬದುಕಿನ ಮುನ್ನುಡಿ ಇದೆಯೋ..ಅಂತೂ ಮುಂಗಾರು ಮಳೆಗೂ ನನಗೂ ಇನ್ನಿಲ್ಲದ ನಂಟು... ಅದನ್ನೇ ಬರೆಯೋಣ ಅಂತ ಹೊರಟೆ...ಮೊನ್ನೆ ನನಗೊಂದು SMS ಬಂತು: ಮುಂಗಾರು ಮುನ್ನುಡಿ ಬರೆಯುವಂತಿದೆ ಗೆಳತಿ. ಮನ್ನಸ್ಸಿನ ಮೂಲೆಯಲ್ಲಿದ್ದ ಬರವಣಿಗೆ ಗೂಡು ಕಟ್ಟ ತೊಡಗಿತು.

ಮುಂಗಾರು ಮಳೆ..ಹೆಣ್ಣು ಎರಡೂ ಒಂದೇ.. ಮೊದಲು ಬಂದಾಗೊಂದು ಹೊಸ ಪರಿಮಳ... ಅಲ್ಲೇ ನೆಲೆ ನಿಂತ ಮಣ್ಣಿಗೂ ಹೊಸ ಗಮಗಮ... ಅದನ್ನ ಅಸ್ವಾದಿಸಲು, ಪ್ರತಿಯೊಬ್ಬರಿಗೂ ಆಸೆ... ಬಿಸಿಲ ಬೇಗೆಗೆ ಕಾದು ನಿಂತ ನೆಲ.. ಬಯಸುವುದು ಧೋ ಎಂದು ಸುರಿಯುವ ಮುಂಗಾರನ್ನ. ಪ್ರೀತಿಯೆಂಬ ಕನಸನ್ನ ತನ್ನೊಳಗೇ ಬೇಯಿಸಿದ ಹಡುಗನಿಗೂ ಧೋ ಎಂದು ತನ್ನೊಳೆಗೆ ಸುರಿದು ಬರುವ ರಾಧೆಯ ಆಸೆ...

ಕಪ್ಪು ಮೋಡವನ್ನೆಲ್ಲ ಸರಸಿ ಪೃಕೃತಿಗೊಂದು ಹೊಸ ಹುಟ್ಟು ಮುಂಗಾರಿನಿಂದ...ಎಲ್ಲೆಲ್ಲೂ ಹಸಿರು, ಹೊಸ ಹುರುಪು, ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿ ಕೂಡ ನೀರು. ಜೀವ ಸೆಲೆಗೆ ಆಸರೆ ಮುಂಗಾರು...ಹೆಣ್ಣೂ ಪೃಕೃತಿ ತಾನೆ, ಆಕೆಯ ಗೆಜ್ಜೆ ಕಾಲುಗಳು ಹೃದಯ ಜಲ್ಲೆನಿಸುತ್ತೆ.. ಜೀವಗಳು ಸೆಲೆಯಾಗಿ ಹರಿಯಲು ಬೇಕವಳ ತಂಪು, ಹೊಸ ಹುಟ್ಟಿಗೆ ಅವಳೇ ಸಾಕ್ಷಿ..ಅವಳೇ ಮಾದರಿ.. ಅವಳಿದ್ದಲ್ಲೆಲ್ಲ ಹಸಿರು, ಕೆಂಪುಗಳ ಆಟ...ಅವಳಾಗಮನವೇ ತುಂಬುವಿಕೆ... ನೀರೇನೀರು...

ಪೃಕೃತಿ, ಬೆಚ್ಚಗಿನ  ಕನಸು, ರೈತನ ಬೆವರು... ಜೀವಗಳ ಹೋರಾಟ, ಇನ್ನೊಂದು ಹುಟ್ಟು... ಎಲ್ಲಾ ಮುಂಗಾರಿಗೆ.. ಜೊತೆಗಿಹಳು ಅವಳು, ಅವಳ ಕನಸು..ಅಲ್ಲಿಂದಲೇ ಇನ್ನೊಂದು ಜೀವ..ಮತ್ತೊಂದು ಜೀವನ..

ಹೆಣ್ಣಿನ ಬದುಕು ಹಣ್ಣಾಗುತ್ತೆ... ಕನಸುಗಳು ಬಣ್ಣ ಕಳೆದುಕ್ಕೊಳ್ಳುತ್ತೆ.. ಕಣ್ಣು ಮಂಜಾಗೋಕು ಮುಂಚೆ, ಟಿಪ್ಪ್..ಟಿಪ್ಪ್ ಅಂತ ನಂತರ ಧೋ..ಧೋ ಬರುವ ಮಳೆಯಲ್ಲಿ ನೆನಪುಗಳು ಹುಟ್ಟುತ್ತವೆ.. ಹಣ್ಣಾದ ಬದುಕಿನಲ್ಲಿ ಪುನಃ ಬಣ್ಣಗಳ ಕೊಡೆ ಹೊಸ ಕನಸ ಹುಟ್ಟಿಸುತ್ತೆ... ಆಗಲೇ.. ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿನ ನೀರಿಗೆ ಆಕೆಯ ಗೆಜ್ಜೆ ಕಾಲ್ಗಳ ಹಿತಾನುಭೂತಿ..ನೀರಿನಾಸೆ ಎಂದಾದರೂ ಪೂರೈಸುವೆಯಾ ಗೆಳತಿ, ಕೇಳಿದ ಗೆಳಯ ಈಗಿಲ್ಲ ... ಆದರೆ ಅನುಭೂತಿ ಜೀವಂತ...

ಮುಂಗಾರು ನಿರಂತರ.. ಹೆಣ್ಣು, ಪ್ರೀತಿ ನಿಲ್ಲದ ಮಳೆ.. ಮಳೆಯಲ್ಲೇ ಬದುಕು, ಆಕೆ ತಾಯಿ..ಬದುಕು ತುಂಬುತ್ತಾಳೆ..

ಇನ್ನು ಮುಗಿಯಲ್ಲಿಲ್ಲ ನನ್ನ ಮಳೆಯ ಹಂಬಲ... ಇನ್ನೂ ಇದೆ ಬರೆಯಲು ಮಳೆಯ ಹಾಗೆ..ಮಳೆಯ ಬಗ್ಗೆ.... ಆದರೀಗ ಹೆಣ್ಣಾಗಿ ಕಾಯುತ್ತಿರವೆ ಮುಂಗಾರು ಹ್ಯೊಯಲು.... ಬರಲಿ ಬರಲಿ ಮಳೆ..ಮುಂಗಾರು‌ ಬರಲಿ..ಕನಸ ಅಂತ್ಯದಲ್ಲೇ ಹುಟ್ಟಲಿ ನೆನಪು..

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...