Friday, 19 May 2017

Aatha...Aake....Kanasu (ಆತ ....ಆಕೆ ...ಕನಸು)

 ಕಡು ಕಪ್ಪಿಗೆ
ಬಂಗಾರದ ಅಂಚು
ಸೀರೆ ನೋಡಲೊ
ಸೀರೆಯೊಡತಿಯ ನೋಡಲೊ? ಆತನ ಕವನ

ತುಂಬಾ ಸುಂದರವಾಗಿದೆ..ಕನಸಿನ ಉತ್ತರ..

ನೀನು ತುಂಬಾ ಚಂದ  ಅದಕ್ಕೆ ನನಗೆ ಭಯ...ಆತನ ಹಂಬಲ

 ಅಯ್ಯೋ...ನಾನೇನು ಮಾಡಿದೆ
ನಾನೆಲ್ಲಿ ಚೆಂದ... ಸುಂದರತೆ ನೋಡುಗನ ಕಣ್ಣಲ್ಲಿ..ಕನಸಿನಲ್ಲೂ ಚಂಚಲತೆ..

ನೀನೇನೂ ಮಾಡಲಿಲ್ಲ
ನಾನೇ ಏನಾದರೂ ಹೇಳಿಬಿಟ್ಟರೆ ಅಂತ..ಆತನ ಹಿಂಜರಿಕೆ

ಅಂದೆಂತ ಹೇಳೋಣ.... ಕವಿಗಳು.. ಏನು ಹೇಳಿದರೂ ಚೆಂದ..ಕನಸಿಗೆ ಬಿನ್ನಾಣ

ಹೊನ್ನ ಸಂಜೆಯೊಂದು ಸುಮ್ಮನೆ ಸರಿದು ಹೋಯಿತಲ್ಲ!
ನಿನ್ನ ಬಿಸುಪಿಲ್ಲದೆ...ಆತನ ತಳಮಳ

ಸಂಜೆಗಳು ಹೊನ್ನವಾಗುವುದು....ನೆನಪಿನ ಅಂಗಳದಲ್ಲಿ..ಕನಸಿನ ತಿರುಗುತ್ತರ

ಕನಸು ಚೆಲ್ಲಾವೆ ಗೆಳತಿ
ಮನದಂಗಳದ ತುಂಬಾ...ಆತನ ಹಪಹಪಿ..

 ಕನಸುಗಳು ಜೀವಿತದ ಸಂಖ್ಯೆ..
ಮನಸ್ಸಿನ ಬಿಸುಪು..ಕನಸುಗಳಿಂದ..ಆಕೆಯ ಮುಗ್ದತೆ?!?!

ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ..ಆತ ಕಂಡ ಕನಸು

ಕಣ್ಣ ತುಂಬಾ ಕನಸು..ಮುಚ್ಚಲೂ ಬಾರವಾಗುತಹ ಕನಸು... ಹಾರಿಹೋದೀತು ಜೋಕೆ.. ಎಚ್ಚರಿಕೆ ಆಕೆಯಿಂದ

ರೆಕ್ಕೆಗಳನು ನಿನ್ನ ಮಡಿಲಲಿ ಮರೆತಿರುವಾಗ
ಹಾರಿ ಹೋದೇನಾದರೂ ಹೇಗೆ?..ಆತನ ಬೇಡಿಕೆ..

 ಮಡಿಲು ಬರಿದಾಗಿ ವರ್ಷಗಳೇ ಆದವು.... ಕನಸುಗಳ ಹುಟ್ಟಿ ಮಡಿಲು ಬರಿದಾಗಿಸಿದವೋ ಗೆಳೆಯ...ಕನಸಿಗೊಂದು ಬಿಗಿಮಾನ

ಒರತೆಗಳ ಮೇಲಡರಿದ ಮಣ್ಣ ಸರಿಸಿ
ಜೀವ ಜಲವ ಸ್ಪುರಿಸಬೇಕು...ಪುನಃ ಒರೆತ

ಮಣ್ಣುಗಳ ಆ ಕಂಪಿಗೇ ಜೀವ ಜಲ ಸ್ಪುರಿಸುತ್ತದೆ....ಬಿಡಲ್ಲೊಳು ತನ್ನ ಬಿಗು

ಭಾವನೆಗಳಿಗೆ ಎಷ್ಟು ಚಂದ ಸ್ಪಂದಿಸುತ್ತೀಯಾ ನೀನು...ಕೊನೆಗೂ ಆತ ಸೋತ

 ಮಾತಿನಲ್ಲರಮನೆ... ಕನಸಿನಲ್ಲಿ ಸೂರ್ಯೋದಯ...ಇವೆರಡೂ ಸುಲಭ...ಸೋಲು ತನ್ನದಲ್ಲ ಅನ್ನುತ್ತಾಳೆ ಕನಸು....

ಆತ..ಮೌನ..ಕನಸಿನ ಕವನ ಹಾಡಾಗಿ ಹರಿಯಲು ಕಾಯುತ್ತಾ....

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...