Friday, 29 September 2017

ಗಾಂಧಿಯ ಗುಂಗಿನಲ್ಲಿ-೧ Gandhi Gunginalli -1

ಎರಡು ವರ್ಷ ಅದೇನೋ ಹುಚ್ಚು ಕನಸು, "ಬರಿ ಮೈ ಫಕೀರ ತಾತ, ಅದ್ಹೇಗೆ ಇಡೀ ಜಗತ್ತನ್ನ ತನ್ನ ಬರೀ ಮಾತಿಗೆ ಹೆದರಿಸಿದ ಅಂತ".... ಕನಸು ಶುರುವಾದದ್ದು, ಗುಜರಾತಿನ ಗಾಂಧಿನಗರದ ದಂಡಿ ಕುಟೀರದಲ್ಲಿ.......
      ಗಾಂಧಿ ಬೆಳೆದ ರೀತಿ ಅವನ ಯೋಚನೆಗಳು, ಎಂತಹವರನ್ನೂ ಅಲಗಾಡಿಸುತ್ತೆ...... ಉಪವಾಸ,  ಸತ್ಯ ನಿಷ್ಠೆ, ವೃತಗಳನ್ನ ಒಂದು ಸಿದ್ದಾಂತದ ಮೇರೆಗೆ ತನ್ನ ಇಡೀ ಜೀವನವನ್ನ ತೆರಿದಿಟ್ಟುಕೊಂಡ ರೀತಿ ಎಲ್ಲಾ ಕನಸಿನಂತೆ ಅನ್ನಿಸಿಬಿಡುತ್ತದೆ. ಸಾಯದೇ ಇವತ್ತೀಗೂ ಚರ್ಚೆ ಆಗುವ ಫಕೀರನಿಗೆ ಕನಸುಗಳಿದ್ದವೋ ಇಲ್ಲ ದೃಢ ನಿರ್ಧಾರಗಳಿತ್ತೋ ಅಂತೂ ಯುಗಪುರುಷನಾದ....
   ನಾನು ದಂಡಿ ಕುಟೀರದಲ್ಲಿ ಕಂಡ ಆತನ ಬಾಲ್ಯ ಎಷ್ಟೂ ಸಾಮಾನ್ಯ ಅನ್ನಿಸಿದರೂ ಅಲ್ಲೆಲ್ಲೋ ಒಂದು ಬಂಡೆಯಂತಹ ಧ್ಯೇಯಗಳು ಎದ್ದು ನಿಂತು ಬಿಡುತ್ತದೆ. ಪ್ರತೀ ಧ್ಯೇಯಕ್ಕೂ ಅಷ್ಟೊಂದು ಚಿಂತನೆ ಮಾಡುವ ಸಣ್ಣ ಹುಡುಗ ಆಕ್ಷಣ ನಾಯಕನಾಗದೆಯೇ ತನ್ನೊಳಗಿನ ತುಮುಲಕ್ಕೆ ಹೊಸ ದಾರಿ ಕೊಡುವ ಯೋಗಿಯಾಗುತ್ತಾನೆ.....
      ಹರಿಶ್ಚಂದ್ರ ನಾಟಕವನ್ನ ತನ್ನೊಳಗೆ ಪ್ರಯೋಗ ಗೊಳಿಸಬೇಕೆಂಬ ಗೀಳು... ಸರಿಯಿಲ್ಲದರ ವಿರುದ್ಧ ಹೋರಾಡಬೇಕೆಂಬ ಕನಸಿಗಾಗಿ ತನ್ನನ್ನ ಮಾಂಸಾಹಾರಿಯಾಗಿಸುವ ಪ್ರಯೋಗ ಹಾಗೂ ಆ ಪ್ರಯೋಗವೇ ತಪ್ಪೆಂದು ಪ್ರಾಯಶ್ಚಿತ್ತಕ್ಕೆ ಹೊರಡುವ ಹುಡುಗನಲ್ಲಿ ಸಹಜ ನಾಯಕತ್ವದ ಗುಣಗಳಿಗಿಂತ ಸಾಮಾಜಿಕ ವಿಜ್ಞಾನಿಯ ಕುತೂಹಲಗಳು ಅಚ್ಚರಿ ಹುಟ್ಟಿಸುವಷ್ಟು ಮೆಚ್ಚುಗೆ ಪಡೆಯುತ್ತವೆ. ಏನೂ ಮಾಡಲಾಗದವನು ಎಂದು ಹಲಬುವ, ಅದಕ್ಕಾಗಿ ಸಾವಿಗೂ ಹೊರಡುವ ಈತನಲ್ಲಿಯ ದೈವತ್ವ ಗುಣಗಳು ಚಿಕ್ಕ ಹುಡುಗನಲ್ಲೇ ಹುಟ್ಟಿ ಬಂದವು ಅನ್ನಿಸುತ್ತೆ.
        ನಾವು ಕಾಣದ್ದನ್ನ ಅನುಭವಿಸದ್ದನ್ನ ನಂಬುವುದು ಅದು ನಿಮ್ಮೆದುರಿಲ್ಲದಾಗ ಯಾರಿಗೂ ಸಾಧ್ಯವಾಗುವುದಿಲ್ಲ ಅಲ್ಲವೇ,.....ಅದಕ್ಕೇ ಏನೋ ಇವತ್ತು ಆತನ ಬಗ್ಗೆ ಅಷ್ಟೊಂದು ಚರ್ಚೆಗಳು..ಅಪನಂಬಿಕೆಗಳು...... ಆದರೆ ತನ್ನ ಸಾಧ್ಯವಾಗದಿರುವಿಕೆಯನ್ನ ಸಾಧ್ಯವಾಗಿಸುವ ಆತನ ಪಯಣಕ್ಕೆ ಆತ ದಣಿದದ್ದಂತೂ ಸತ್ಯವಲ್ಲವೇ..ಅದನ್ನ  ನಾವೇಕೆ ಮರೆತು ಬಿಡುತ್ತೇವೆ???!!  ಹಾಗೆ ತನ್ನನ್ನ ಪ್ರಯೋಗಕ್ಕೆ ಒಡ್ಡುವ ಆತನೊಳಗಿನ ಆ ಹುಟ್ಟು ಯೋಗಿಗೆ... ನಮ್ಮ ಸಲಾಮಗಳನ್ನು ನೀಡುವುದರ ಬದಲು,  ಮುಂದೆಲ್ಲೋ...... ಯಾವುದೋ ಸಂಧರ್ಭದಲ್ಲಿ..ಮಾಡಿದನು ಎನ್ನಲಾದ ತಪ್ಪಿಗೇ ಕಂದಾಯ ಸಲ್ಲಿಸುವಂತೆ ಮಾಡುವುದು ಮಾನವತೆಗೇ ನಾವು ಮಾಡುವ ಅನ್ಯಾಯವಲ್ಲವೇ???!
     ಈ ಬೃಹತ್ ವ್ಯಕ್ತಿ ನನ್ನನ್ನ ಕಾಡಲಾರಂಭಿಸಿದ್ದು ಆಗಲೇ.... ಗುಜರಾತಿನ ಗಾಂಧಿನಗರದ ತುಂಬೆಲ್ಲ ಆತನ ಹೆಜ್ಜೆಗಳನ್ನು ಹುಡುಕುತ್ತಾ ನಡೆದಾಡಿದೆ...‌ ಒಂದು ಹಂತದ ಗಾಂಧಿ ಸ್ವಲ್ಪ ದಂಡಿ ಕುಟೀರದಲ್ಲಿ, ಸ್ವಲ್ಪ ಗಾಂಧಿನಗರ ಆಶ್ರಮದಲ್ಲಿ ಅನಾವರಣ ಗೊಂಡರೆ.... ಅದಕ್ಕೂ ಮೀರಿದ ಗಾಂಧಿಯು ಪೋರಬಂದರಿನ ಆಶ್ರಮ ಹಾಗೂ ವಾರ್ದಾದ ಆಶ್ರಮದಲ್ಲಿ ವಿಸ್ತಾರವಾಗುತ್ತಾ ಹೋಯಿತು.‌.
    ಸಾಮಾಜಿಕ ವಿಜ್ಞಾನಿ, ಯೋಗಿಗಳ ಜೀವನವನ್ನ ತನ್ನಲ್ಲೇ ಹೋರಾಡಿ ತಂದ ತಾತನ ಬಾಲ್ಯ ಸಾಮಾನ್ಯವೆನಿಸಿದರೂ ಸಾಮಾನ್ಯವಾಗಿರಲು ಸಾಧ್ಯವೇ??????

ಒಂದಿಷ್ಟು ಗಾಂಧಿಯನ್ನ ಓದಿಕೊಳ್ಳಣವೇ ಎಂದು ಕೇಳುತ್ತಾ ಮುಂದಿನ ಬ್ಲಾಗಿನಲ್ಲಿ ಮತ್ತೊಂದಷ್ಟು ತೆರೆದುಕೊಳ್ಳವ....

Sunday, 10 September 2017

Uttarada Neeriksheyalli (ಉತ್ತರದ ನಿರೀಕ್ಷೆಯಲ್ಲಿ)

ಆತನ ಕನಸಿಗೆ ಆಕೆಯ ಆಗಮನವೇ ಇಲ್ಲ.....

         ಆಕೆಗೆ ಅದ್ಯಾವುದೋ ಗುಹ್ಯದೊಳಗಿನ ಬದುಕಿನ ಬಗ್ಗೆ ಕನಸು... ಒಂದೊಳ್ಳೆ ನಿದ್ರೆ... ಏಳುತ್ತಿರವಂತೆ ತನ್ನ ಸುತ್ತೆಲ್ಲ ಆತನ ಘಮ..... ಆತನ ಆ ಘಮವೇ ತನ್ನ ಇಡೀ ದಿನ ಬೆಳಕಾಗಿಸುವ ಆಶಯ....ಸೂರ್ಯನ ಉದಯದಲ್ಲೊಂದು ಸುಖ, ಕೈಯ ಕಾಫಿಗೆ ಅವನ ಬಿರುಸಿನ ಮುಗುಳ್ನಗೆ.... ಬೆನ್ನ ಹಿಂದೆ ಆತನೇ ಅನ್ನುವಷ್ಟು ತನ್ನನ್ನ ಆವರಿಸುವ ಆ ಸುಖದ ನೆನಪು.... ಆತ ಸಾಯಂಕಾಲ ಬರುವವರೆಗೂ ಆತನದೇ ಗುಂಗು... ಇದವಳ ಕನಸಿನ ಬದುಕು...
        ತನ್ನತನವನ್ನ ಏನೆಂದೂ ಪ್ರಶ್ನಿಸದೆ ತನ್ನ ಪೂರ್ತಿ ಬದುಕನ್ನ ಪ್ರೀತಿಯ ಕಡಲಿನಲ್ಲಿ ಮುಳುಗಿಸುವ..... ತನ್ನ ಪ್ರೀತಿಯ ರಥ ಆತನೊಂದಿಗೆ ಏರಿ ಕಡಲ ತುಂಬೆಲ್ಲ ತನ್ನೊಳಗಿನ ಬೆಳಕ ಪಸರಿಸುವ ಒಂದು ಹುಚ್ಚು ಆಸೆ.... ನೀನು ನಾನೆಂಬುದು ಉಳಿಯದೇ ಹೆಣ್ಣೊಳಗಿನ ಗಂಡಾಗಿ... ಗಂಡೊಳಗೆ ಬೆರತ ಹೆಣ್ಣಾಗಿ ಹೊಸ ಕನಸ ಕಾಣುವ ಹೆಬ್ಬಯಕೆ....... ಕೈಗೆ ಆತ ಸಿಗದೇ ಹೋದರೂ ಹೃದಯಲ್ಲೇ ಪ್ರತಿಷ್ಟಾಪನೆಗೊಂಡು.... ಉಸಿರಲ್ಲೆಲ್ಲಾ ಆತನನ್ನ ಅನುಭವಿಸುವ ಅಧ್ಯಮ್ಯ ಬಯಕೆ ಆಕೆಗೆ......
          ಬದುಕು ಆಕೆಗೋ ನಿತ್ಯದ ನಡೆ. ಹಗಲೆಲ್ಲ ಆತನ ಎಚ್ಚರವಾದಾಗಿನ ನಿರಾಳತೆಯಿಂದ ಶುರುವಿಟ್ಟುಕೊಂಡು ರಾತ್ರಿ ಮುಚ್ಚಿಹೋಗುವ ಕಣ್ಣಿನೊಳಗೊಂದು ತನಗೆ ಜಾಗ ಇದೆ ಎಂದುಕೊಳ್ಳುತ್ತಾ ಸುಖ ನಿದ್ದೆಗೆ ಜಾರುವ ಆ ಕ್ಷಣಗಳನ್ನ ಕಾಯುವ ಕನಸು ರಾತ್ರಿಯೆಲ್ಲ..... ತನ್ನನ್ನೂ ಮರೆತು ಆತನ ಬೆರಳೊಳಗೆ ತನ್ನ ಇಡೀತನವನ್ನ ಕರಗಿಸುವ ಹುಚ್ಚು ಆವೇಶಗಳು ಮಧ್ಯಾಹ್ನನದ ಉರಿ ಬಿಸಿನಲ್ಲಿದ್ದರೆ, ಸಾಯಂಕಾಲದ ತಂಪಿನಲ್ಲಿ ಆತನ ಎದೆಯಲ್ಲಿ ಕಳೆದುಹೋಗುವ..ಕಣ್ಮಚ್ಚಿನಲ್ಲೇ ಆತನೊಡನೆ ಸುಮ್ಮನೆ ಮಾತನಾಡುವ ತಣ್ಣನೆಯ ಬಯಕೆ... ರಾತ್ರಿ ವೇಳೆಯಲ್ಲಿ ಸುಸ್ತಾದ ಆತನನ್ನ ತನ್ನ ಎದೆಯೊಳಗೆ ಹುದುಗಿಸಿ..ಹೊಸ ಜೀವವಾಗಿಸುವ ಚಿಗುರುತನ....
     ಕೈಗೆ ಸಿಗದ ಹುಚ್ಚು ಕುದುರೆ ಆತನ ಓಟಗಳೋ ಅವಳಿಗೆ ಸೋಜಿಗ..ಯಾಕೆ ಓಡುತ್ತಾನೆ ಎಲ್ಲಿ ನಿಲ್ಲುತ್ತಾನೆ!!... ಆತನಿಗೇಕೆ ತನ್ನಂತಹ ಹಸಿ ಬಿಸಿ ಕನಸುಗಳಿಲ್ಲ!!!... ಸಣ್ಣಪುಟ್ಟ ಕನಸುಗಳು ಸಾಲದೆ ಬದುಕಿಗೆ??!?... ನೂರು ಜನ ಓಹೋ ಅಂದರಷ್ಟೇ ಬದುಕೇ!!!?? ಮಗುವಾಗಿದ್ದಾಗ ತಾನು ನಕ್ಕರೆ ಸಾಕು ಇಡೀ ಮನೆ ನಗುತ್ತಿತ್ತು...‌‌ ಈಗ ಇವನಿಗೆ ತನ್ನ ಮುಗುಳ್ನಗುವಿನಲ್ಲೂ ಯಾಕೆ ಬೇರೆ, ಬೇರೆ ಅರ್ಥ ಕಾಣಿಸುತ್ತೆ??!? ಆತನ ಸುತ್ತ ತನ್ನ ಕನಸುಗಳಿದ್ದರೆ ಆತನಿಗೇಕೆ ಸೋಜಿಗ‌‌‌...???? ಇತರರ ಹೊಟ್ಟೆ ಉರಿಸಿದರಷ್ಟೇ ತಾ ಗೆದ್ದೆನೆಂಬ ಭಾವ ಅವನಿಗ್ಯಾಕೆ??? ಆತನ ಕಣ್ಣಿನಲ್ಲಿ ಕಂಡ ಬೆಳಕನ್ನೇ ಜಯ ಎಂದು ತಾನು ಭಾವಿಸುವುದಿಲ್ಲವೇ!!?? .....
      ಯಾಕೋ ಪ್ರಶ್ನೆ ಆಗಿಬಿಟ್ಟಿದೆ ಜೀವನ ..ಇವನ್ನನ್ನ ಕನಸಾಗಿಸಿಕೊಂಡ ಮೇಲೆ. ಇದಕ್ಕೂ ಮುಂಚೆ ತನ್ನ ಬದುಕು ನಗುವಾಗಿತ್ತು, ಕನಸಾಗಿತ್ತು.... ಕನಸು ಈತನಾದ... ಎಲ್ಲಾ ಪ್ರಶ್ನೆಯಾಯಿತು. ಉತ್ತರವೆಂದು ತನ್ನದಾಗುವುದೋ !!!! ಕಾಯುವ ಕಾಯಕ....ಕನಸ ಹೊತ್ತವಳಿಗೆ
ಆತನ ಕನಸಿಗೆಂದು ಆಕೆಯ ಆಗಮನ??!!!! ಅರಿಯದ ಪ್ರಶ್ನೆ!!
         

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...