ನಾನು ಕಂಡದ್ದು ನಿನ್ನನ್ನೋ ನಿನ್ನೊಳಗಿನ ಕನಸನ್ನೊ...
ನನ್ನ ಮೋಡಿ ಮಾಡಿದ್ದು ನಿನ್ನ ನೆನಪೋ ಇಲ್ಲ ನಿನ್ನ ಬಿಸುಪೋ...
ಕಣ್ಣಂಚಿನಲ್ಲಿ ಮೂಡಿದ್ದು ಆ ನಿನ್ನ ನಗುಮುಖದ ನೆರಳೋ..ಇಲ್ಲ ನನ್ನ ಕಾಡುವ ಬಯಕೆಯ ಹೊರಮುಖವೋ ...
ಕಾಣದ ಆಸೆಯ ತಳಕ್ಕೆ ನನ್ನ ಕೊಂಡ್ಯೊದ್ದದ್ದು ನಿನ್ನ ಹುಮ್ಮಸ್ಸೋ.. ಇಲ್ಲ ನನ್ನ ಹೃದಯದಲ್ಲಿ ತುಳುಕುತ್ತಿದ್ದ ಬುಗ್ಗೆ ಬುಗ್ಗೆಯಾದ ಪ್ರೀತಿಯೋ...
ಮುಗ್ಗಲು ಮುರಿದಾಗ ಕಾಡುವ ನೆನಪು ನಿನ್ನ ಬಳಿಬೇಕೆಂಬ ಆಶಯದ್ದೋ... ಇಲ್ಲ ನನ್ನ ಕಾಡುತ್ತಿರುವ ಒಂಟಿತನದ್ದೋ....
ಬೆಳ್ಳಂಮಬೆಳ್ಳಿಗ್ಗೆ ನನ್ನ ಸುತ್ತೆಲ್ಲ ಕಾಡುವ ನಿನ್ನಿರುವು... ನೀನು ಕೊಟ್ಟು ಹೋದ ಮನಸಿನ ಸುಖದ್ದೋ ಇಲ್ಲ .....ನನ್ನ ನಾನು ಪ್ರೀತಿಸಬೇಕೆಂಬ ಹಠದ್ದೋ...
ಬೇಕೆನಿಸುವುದು ಸಹಜವಾದಂತೆ ಬೇಡವೆನಿಸುವುದೂ ಸಹಜತೆ ಆದರೆ... ನಾನುಭವಿಸುವ ಈ ಧೀಕಾರ...ನಿನ್ನ ಬಗ್ಗೆ ನನ್ನ ಕೋಪದ್ದೋ.....ಇಲ್ಲ ನನ್ನ ಬಗ್ಗೆ ನನಗೇ ಮೂಡಿದ ಹತಾಷೆಯದೋ....

No comments:
Post a Comment