Friday, 24 November 2017

ಸಾವು ಬದುಕಿನ ನಡುವೆ ( Savu Badukina naduve)

ಸಾವು ಬದುಕಿನ ನಡುವೆ...ಕನಸು ವಾಸ್ತವದೊಂದಿಗೆ ಹೊಯ್ಯದಾಡುವ ಮನಗಳು ಗಂಡು ಹೆಣ್ಣಿನದೇ?

ಸಾವಿನಲ್ಲೂ ಸುಖವಿದೆ
ಸತ್ತು ಬದುಕುವ ಪ್ರೀತಿಗೆ ಅದರದೇ ಕಂಪು
ಸಾವಿನ ಸುಖ... ಹೃದಯದಲ್ಲಿ ಉಳಿದು ಹೋಗುವ ಸುಖ... ಇದು ಸತ್ಯವಾಗುವುದು ಹೆಣ್ಣಿಗೋ ಹೆಣ್ಣಿನೊಳಗಿನ ತಾಯಿಗೋ.. ಅಂತೂ ಸಾವೂ ಸುಖವಾಗುವ ಕನಸು ಮಾತ್ರ ಆಕೆಗೆ ಸದಾ

 ನೀನು ಸಾವಿನಾಚೆಯ ಮೌನ
ಬೆಳಕಿಯಾಚೆಯ ಆ ಬೆಳಕು
ದಟ್ಟ ಉಸಿರಿಗೆ ಪುಟಿದೇಳುವ
ಕೂದಲಿನ ನವಿರು ನೀನು..ಎಂದು ಕನಸುಗಳನ್ನ ಹೆಣ್ಣಿಗೆ ಕೊಡುವ ಉತ್ತಮ ಜೀವಿಗೆ ಸಾವಿನ ಸುಖದ ಅರಿವಾದರೂ ಇದೆಯೇ????

ಬದುಕಿನುದ್ದಕ್ಕೂ ಸಾವಿನ ಚಿಂತೆಯಲ್ಲಿ ಕಳೆಯುವುದು ಗಂಡಿಗೆ ಅನಿವಾರ್ಯವೋ.. ಅಥವಾ ಸಾವಿನಲ್ಲೂ ಬದುಕ ಕಲಿಸಿ ಅಂತರ್ಗಂಗೆಯಾಗುವ ಕಲೆ ಬರೀ ಹೆಣ್ಣಿಗೋ.. ಅಂತೂ ಸಾವಿನ ಚಿಂತೆ ಗಂಡಿಗಾದರೆ...ಸಾವಿನ ಕನಸು ಹೆಣ್ಣಿಗೆ..
ಬದುಕಿನಲ್ಲಿ ಸಾವ ಕಾಣುವುದು ಗಂಡಸಿನ ಅಹಂ..
ಸಾವಿನಲ್ಲಿ ಬದುಕು ಹುಡುಕುವುದು ಹೆಣ್ಣಿನ ಅಂತಃಕರಣ

ಅಷ್ಟು ಕನಸು ಕಂಡರೂ ಎಲ್ಲಾ ಕನಸಿನ ಮಾತು ಕಟು ವಾಸ್ತವದಲ್ಲಿ ಕೊನೆಯಾಗುವುದರ ಹಿಂದೆ ಬದುಕಿನ ಮರ್ಮ ಅಡಗಿದೆಯೇ

 ಬದುಕಿನ ವಾಸ್ತವ ಇರುವುದೇ ಕನಸು ಕಾಣುವ ವಾಸ್ತವದಲ್ಲಿ...
ಹೆಣ್ಣು ಬಯಸುವ ಪ್ರೀತಿ ಕೃಷ್ಣನ ಕನವರಿಕೆಯಂತಾದರೆ..
ಗಂಡು ಬದುಕುವ ನೀತಿ ರಾಮನಂತೆ..ವಾಸ್ತವತೆಯ ಪ್ರತೀಕ..... ಅದಕ್ಕೆಲ್ಲಾ ಒಂದು ಚೌಕಟ್ಟು...
 ಯುಗಗಳಿಂದ ಹೆಣ್ಣು ಕಾಯುತ್ತಾಳೆ ಭವಿಷ್ಯವನ್ನು
 ಸಾವಿನಾಚೆ ಮೌನವಿಲ್ಲದ.. ಬದುಕಿಗೆ
 ಬೆಳಕು ಕಾಣದ ಜಗವೇ ಇಲ್ಲ‌..ಅಂತೆಯೇ ಎಲ್ಲರೊಳಗೂ
ಉಸಿರು ಸದಾ ಹೊಮ್ಮುತ್ತಿರುತ್ತದೆ...
ಕೈಬೆರಳುಗಳ ಮಧ್ಯೆಯ ನವಿರಿನಂತೆ....
ಹೆಣ್ಣು ಬದುಕೆಂದು ತಿಳಿವ ಗಂಡಿಗೆ ಸಾವಿಲ್ಲ

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...