Wednesday, 1 November 2017

Kanasa Mathu....Manasa Nadige (ಕನಸ ಮಾತು...ಮನಸ ನಡಿಗೆ...)

ಕನಸು ಮಾತಾಡ ಬಯಸಿತ್ತು ಮನಸ್ಸಿನೊಂದಿಗೆ...
ಮನಸ್ಸಿನ ಹತಾಷೆ ಕನಸ್ಸನ್ನ ಬಡಿದೆಚ್ಚರಿಸಿತ್ತೋ ಇಲ್ಲ ಮನಸ್ಸೇ ಬದಲಾಯಿತೋ....

ಮನಸ್ಸು ಮುಚ್ಚಿಡಬಹುದು ಮನದ ಭಾವವನ್ನು
ಕಣ್ಣು ಮುಚ್ಚಿಟ್ಟೀತೇ .....
ಹಾಗೆ ಅಡಗಿಸಿ ರೆಪ್ಪೆ ಮುಚ್ಚಿದರು ಕಣ್ಣೀರ ಹನಿಯೊಂದು ಜಾರದಿದ್ದೀತೇ ....
ಹಾಗೆ ಕೆನ್ನೆ ಮೇಲೆ ಇಳಿಯುವ ಒಂದೊಂದು ಹನಿಯು ನೀರಲ್ಲ
ಎದೆಯೊಳೆಗಿನ ಭಾವವದು .....
ಹಗುರಾಗು ಅನ್ನುತ್ತಿದೆ ಕನಸು..

 ಮನದ ಬಾವವೀಗ ಎಷ್ಟು ಜಡಗಟ್ಟಿದೆಗೊತ್ತಾ..‌
ಕಣ್ಣುಗಳಲ್ಲಿನ ಜೀವಂತಿಕೆಯೇ ಕಣ್ಮರೆಯಾಗಿದೆ...
ಕಣ್ಣೀರ ಸಲೆ ಬತ್ತಿ ವರ್ಷಗಳೇ ಆದವು..
ಎದೆ ಬಡಿತ ಈಗಿರುವುದು ಪ್ರಾಣವಾಯುವಿಗೆ
 ಜೀವಿಸುವ ಆಶಯವೇ ಬತ್ತಿಹೋಗಿದೆ...
ಅವನಿಲ್ಲದ ಉಸಿರಿಗೆ ಬಿಸುಪಿದೆಯೇ
ಕನಸುಗಳಲ್ಲೆ ಬಣ್ಣ ಕಳೆದುಕೊಂಡು ಮಲಗಿದೆ...
ಯಾಂತ್ರಿಕತೆ ನನ್ನ ಹೊತ್ತು ನಡೆದದ್ದು ಅವನು ನನ್ನೊಳೆಗೆ ಸತ್ತ ಮರುಕ್ಷಣದಿಂದ...
ಮನಸ್ಸು ನಿಟ್ಟುಸಿರಿಡುತ್ತಿದೆ...

ಅವನೆಂಬ ಕನಸ್ಸಿಗೆ ಇಲ್ಲದ ಚಿಂತೆ..ನಿನಗ್ಯಾಕೆ ಮನವೇ
ನಾನು ಬಂದಿದ್ದೇನೆ....ಹೊಸತನದ ಅಲೆಯಲ್ಲಿ..
ಆತನ ನೆನಪು ನಿನ್ನ ನುಣುಪಿನ ಕಂಬನಿ ಆಗಿ...
ನಿನ್ನೊಳಗಿನ ಮಿತಿಗೆ ಅಂತ್ಯ ಕಾಣಲಿ...
ಮನದ ಭಾವವನ್ನ ಹೊಳೆಯುವ ಕಣ್ಣು ಹೊರಹಾಕಿದರೆ...
ಜೀವಂತಿಕೆಗೆ ಕೊರತೆಯೇ???
ಎದೆಯ ಬಡಿತದ ಯಾಂತ್ರಿಕತೆಗೆ ನನ್ನನ್ನ ಜೋಡಿಸು ಗೆಳತಿ...
ಅಲ್ಲೋಲ ಕಲ್ಲೋಲವಾದೀತು...
ರಾತ್ರಿಯ ನೀರವತೆಯೂ ಹೊಸ ಹುರುಪು ತಂದೀತು...
ಕನಸ್ಸಿಗೆ ತುಂಬಾ ಆಶಯ...ಬದಲಾವಣೆಯ ಬಯಕೆ

 .... ನೀನು ಜೀವಸಲೆ ಆದರೆ ನಾನು ಹತಾಷೆ...ನನ್ನ ಹತಾಷೆಗೆ ಕನಸುಗಳ ಬಯಕೆ...ಇದೇ ಅಲ್ಲವೆ ಬದುಕಿನ ವೈಪರೀತ್ಯಗಳು???
ಮನಸ್ಸಿಗೆ ಇನ್ನೂ ಕಾಣದ ಸಂಶಯ...

ನಿನ್ನ ನಿದ್ದೆಗೆಟ್ಟ ಕಣ್ಣುಗಳಲ್ಲಿ ಬಯಕೆಯ ಕಾಮನೆ...
ಹತಾಷೆ ನೀನುಲಿದಿಟ್ಟ ಕರಾಳತನ...
ಕೆಂಪಾದ ಕೆನ್ನೆಗಳಲ್ಲಿ ನಾನು...
ನಿನ್ನ ಸುಕ್ಕಾದ ತುಟಿಗಳಲ್ಲಿ ಹೊಸ ಭಾವ...
ಇವೆಲ್ಲಾ ಸುಳ್ಳೆಂದರೂ ಆಗಾಗ ಪಳ್ಳೆಂದು ಹೊರಬರುವ..
ಮನಸ್ಸಿನ ಕನ್ನಡಿ...ಕಂಬನಿ..ಹತಾಷೆಯನ್ನ ಮರೆತು ನಕ್ಕಿದ್ದು ಸುಳ್ಳೇ.......
ಬದುಕಿನ ವೈಪರೀತ್ಯಗಳನ್ನ ಬಿಡೇ ಗೆಳತಿ...
ಕುಂಟೆಬಿಲ್ಲೆ ಆಡಲು ವಯಸ್ಸೇಕೆ...
ಮೂರನೆಯ ಮನೆಯ ನನ್ನೆಡೆಗೆ ಹಾರಿ ಬಾ...

ನಿನ್ನ ಸೆಳತಕ್ಕಿಂತ ಹೆಚ್ಚಾದದ್ದು ಕುಂಟೆ ಬಿಲ್ಲೆ...
ಮೆರೆತ ಸಳೆತಗಳನ್ನ ವಯಸ್ಸಿನ ಏರಿತಗಳಲ್ಲಿ ಮರೆತೇ..
ನೀನು..ಕಾಡಿದ ಹೊಸ ಬದುಕಿಗಿಂತ..
ನೀನು..ನೆನಪಿಸಿದ ಹಳೆ ನೆನಪುಗಳಿಗೆ ಜೀವ ಉಂಟು..
ಹಾರುವ ಕನಸಿನಲ್ಲಿ ಹೊಳೆಯುವ ನೆನಪುಗಳು...
ನಾನು ಮರೆತದ್ದು‌...ನನ್ನನ್ನೋ (ಮನಸ್ಸನ್ನೊ) ಇಲ್ಲ
ನಿನ್ನನ್ನೋ (ಕನಸನ್ನೋ)...
ನೀನು ತಂದಿಟ್ಟ ನೆನಪಿನಲ್ಲಿ... ನಾನು ನೀನು ಒಂದಾದದ್ದು
ಹೊಸ ಹುರುಪೋ ಇಲ್ಲ ಹೊಸ ಕನಸೋ...

           ರಶ್ಮಿ ಕುಂದಾಪುರ ಮತ್ತು ಅಶ್ವಥಾ ಶೆಟ್ಟಿ
       (ಇಬ್ಬರು ಸ್ನೇಹಿತೆಯರ ಮಾತುಗಳು ಕವನವಾದ ಮನಸ್ಥಿತಿ)



No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...