Sunday, 28 May 2017

Mungaru Male...Hennu...Kanasu ( ಮುಂಗಾರು ಮಳೆ... ಹೆಣ್ಣು...ಕನಸು)

ಮಳೆ..ಮುಂಗಾರು ಮಳೆ..ನನ್ನ ಹುಟ್ಟು ಕರಾವಳಿ ಆದದ್ದಕೋ...ಇಲ್ಲ ಮಳೆಯಲ್ಲೇ ಎಲ್ಲರ ಬದುಕಿನ ಮುನ್ನುಡಿ ಇದೆಯೋ..ಅಂತೂ ಮುಂಗಾರು ಮಳೆಗೂ ನನಗೂ ಇನ್ನಿಲ್ಲದ ನಂಟು... ಅದನ್ನೇ ಬರೆಯೋಣ ಅಂತ ಹೊರಟೆ...ಮೊನ್ನೆ ನನಗೊಂದು SMS ಬಂತು: ಮುಂಗಾರು ಮುನ್ನುಡಿ ಬರೆಯುವಂತಿದೆ ಗೆಳತಿ. ಮನ್ನಸ್ಸಿನ ಮೂಲೆಯಲ್ಲಿದ್ದ ಬರವಣಿಗೆ ಗೂಡು ಕಟ್ಟ ತೊಡಗಿತು.

ಮುಂಗಾರು ಮಳೆ..ಹೆಣ್ಣು ಎರಡೂ ಒಂದೇ.. ಮೊದಲು ಬಂದಾಗೊಂದು ಹೊಸ ಪರಿಮಳ... ಅಲ್ಲೇ ನೆಲೆ ನಿಂತ ಮಣ್ಣಿಗೂ ಹೊಸ ಗಮಗಮ... ಅದನ್ನ ಅಸ್ವಾದಿಸಲು, ಪ್ರತಿಯೊಬ್ಬರಿಗೂ ಆಸೆ... ಬಿಸಿಲ ಬೇಗೆಗೆ ಕಾದು ನಿಂತ ನೆಲ.. ಬಯಸುವುದು ಧೋ ಎಂದು ಸುರಿಯುವ ಮುಂಗಾರನ್ನ. ಪ್ರೀತಿಯೆಂಬ ಕನಸನ್ನ ತನ್ನೊಳಗೇ ಬೇಯಿಸಿದ ಹಡುಗನಿಗೂ ಧೋ ಎಂದು ತನ್ನೊಳೆಗೆ ಸುರಿದು ಬರುವ ರಾಧೆಯ ಆಸೆ...

ಕಪ್ಪು ಮೋಡವನ್ನೆಲ್ಲ ಸರಸಿ ಪೃಕೃತಿಗೊಂದು ಹೊಸ ಹುಟ್ಟು ಮುಂಗಾರಿನಿಂದ...ಎಲ್ಲೆಲ್ಲೂ ಹಸಿರು, ಹೊಸ ಹುರುಪು, ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿ ಕೂಡ ನೀರು. ಜೀವ ಸೆಲೆಗೆ ಆಸರೆ ಮುಂಗಾರು...ಹೆಣ್ಣೂ ಪೃಕೃತಿ ತಾನೆ, ಆಕೆಯ ಗೆಜ್ಜೆ ಕಾಲುಗಳು ಹೃದಯ ಜಲ್ಲೆನಿಸುತ್ತೆ.. ಜೀವಗಳು ಸೆಲೆಯಾಗಿ ಹರಿಯಲು ಬೇಕವಳ ತಂಪು, ಹೊಸ ಹುಟ್ಟಿಗೆ ಅವಳೇ ಸಾಕ್ಷಿ..ಅವಳೇ ಮಾದರಿ.. ಅವಳಿದ್ದಲ್ಲೆಲ್ಲ ಹಸಿರು, ಕೆಂಪುಗಳ ಆಟ...ಅವಳಾಗಮನವೇ ತುಂಬುವಿಕೆ... ನೀರೇನೀರು...

ಪೃಕೃತಿ, ಬೆಚ್ಚಗಿನ  ಕನಸು, ರೈತನ ಬೆವರು... ಜೀವಗಳ ಹೋರಾಟ, ಇನ್ನೊಂದು ಹುಟ್ಟು... ಎಲ್ಲಾ ಮುಂಗಾರಿಗೆ.. ಜೊತೆಗಿಹಳು ಅವಳು, ಅವಳ ಕನಸು..ಅಲ್ಲಿಂದಲೇ ಇನ್ನೊಂದು ಜೀವ..ಮತ್ತೊಂದು ಜೀವನ..

ಹೆಣ್ಣಿನ ಬದುಕು ಹಣ್ಣಾಗುತ್ತೆ... ಕನಸುಗಳು ಬಣ್ಣ ಕಳೆದುಕ್ಕೊಳ್ಳುತ್ತೆ.. ಕಣ್ಣು ಮಂಜಾಗೋಕು ಮುಂಚೆ, ಟಿಪ್ಪ್..ಟಿಪ್ಪ್ ಅಂತ ನಂತರ ಧೋ..ಧೋ ಬರುವ ಮಳೆಯಲ್ಲಿ ನೆನಪುಗಳು ಹುಟ್ಟುತ್ತವೆ.. ಹಣ್ಣಾದ ಬದುಕಿನಲ್ಲಿ ಪುನಃ ಬಣ್ಣಗಳ ಕೊಡೆ ಹೊಸ ಕನಸ ಹುಟ್ಟಿಸುತ್ತೆ... ಆಗಲೇ.. ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿನ ನೀರಿಗೆ ಆಕೆಯ ಗೆಜ್ಜೆ ಕಾಲ್ಗಳ ಹಿತಾನುಭೂತಿ..ನೀರಿನಾಸೆ ಎಂದಾದರೂ ಪೂರೈಸುವೆಯಾ ಗೆಳತಿ, ಕೇಳಿದ ಗೆಳಯ ಈಗಿಲ್ಲ ... ಆದರೆ ಅನುಭೂತಿ ಜೀವಂತ...

ಮುಂಗಾರು ನಿರಂತರ.. ಹೆಣ್ಣು, ಪ್ರೀತಿ ನಿಲ್ಲದ ಮಳೆ.. ಮಳೆಯಲ್ಲೇ ಬದುಕು, ಆಕೆ ತಾಯಿ..ಬದುಕು ತುಂಬುತ್ತಾಳೆ..

ಇನ್ನು ಮುಗಿಯಲ್ಲಿಲ್ಲ ನನ್ನ ಮಳೆಯ ಹಂಬಲ... ಇನ್ನೂ ಇದೆ ಬರೆಯಲು ಮಳೆಯ ಹಾಗೆ..ಮಳೆಯ ಬಗ್ಗೆ.... ಆದರೀಗ ಹೆಣ್ಣಾಗಿ ಕಾಯುತ್ತಿರವೆ ಮುಂಗಾರು ಹ್ಯೊಯಲು.... ಬರಲಿ ಬರಲಿ ಮಳೆ..ಮುಂಗಾರು‌ ಬರಲಿ..ಕನಸ ಅಂತ್ಯದಲ್ಲೇ ಹುಟ್ಟಲಿ ನೆನಪು..

Monday, 22 May 2017

Vivaha....Preeti....Vodethana (ವಿವಾಹ....ಪ್ರೀತಿ...ಒಡೆತನ)

ಕನಸಿನ ನಂತರ ಇನ್ನು ನಾನು ಬದುಕಿನ ನೋಟದಿಂದ ಮಾತನಾಡಲು ಶರುವಿಟ್ಟು ಕೊಳ್ಳುವ ಅಂತ.... ಇದೀಗ ವಿವಾಹ ಕಾಲ... ಅದನ್ನೇ ಮಾತನಾಡೋಣವೇ

ಸರಳ ವಿವಾಹ ಅದ್ದೂರಿ ವಿವಾಹ...ಇದೆರಡೂ ಇವತ್ತಿನ fashion....  ಬುದ್ದಿಜೀವಿ ಅನ್ನಿಸಿಕೊಂಡವರದು ಸರಳ ವಿವಾಹ.. . ಸಮಾಜದ ಪ್ರಮುಖ ವ್ಯಕ್ತಿ ಅನ್ನಿಸಿಕೊಂಡವರದು ಅದ್ದೂರಿ ವಿವಾಹ...

ವಿವಾಹದ ಸಂಪ್ರದಾಯದಲ್ಲೇನಾದರೂ ಬದಲಾವಣೆ? ಊಹಂ.. ಎರಡೂ ಪದ್ದತಿ ಒಂದೇ, ಹೆಣ್ಣಿಗೆ ತಾಳಿ ಕಟ್ಟು, ಆಕೆಯನ್ನ ತನ್ನ ಒಡೆತನಕ್ಕೆ ಒಪ್ಪಿಸಿಕೋ.. ಮನುಷ್ಯನ ಒಡೆತನಕ್ಕೆ ಅಂತ ಇರುವುದು...ಮನೆ,ದುಡ್ಡು, ಹೆಂಡತಿ, ಮಕ್ಕಳು...

ಅಲ್ಲಾ ಒಡೆತನ ಹೊಂದುವಿಕೆ ಇವುಗಳಿಲ್ಲದೇ ಪ್ರೀತಿ, ಬದುಕು ಸಾಧ್ಯವಿಲ್ಲವೇ??.. ನಾನು ನೀವು ಎಲ್ಲಾ ಒಪ್ಪುತ್ತೇವೆ, ಪ್ರೀತಿಗೆ ಚೌಕಟ್ಟಿಲ್ಲ ಅಂತ, ಹಾಗೆಂದಮೇಲೆ ಅದಕ್ಕೆ ಒಡೆತನವೂ ಇರಬಾರದಲ್ಲ... ವಿವಾಹ ಅನ್ನೋದು ಪ್ರೀತಿಯೆಂಬ ಕನಸಿನ ತೇರು ತಾನೇ, ಇಲ್ಲೇಕೆ ಒಡೆತನ? ಇಲ್ಲೇಕೆ ತಾಳಿ?? ತಾನು ಒಡೆತನಕ್ಕೆ ಒಪ್ಪಿಸಲ್ಪಟ್ಟವಳು ಅನ್ನೋ ಕುರುಹು??ಕೈಯ ಹಿಡಿದು ಜೊತೆ ನಡೆಯುವ ಪ್ರೀತಿಗೆಂತಹ ಪ್ರಮಾಣ?

ಹಣೆಯ ಕುಂಕುಮ, ಕಾಲಂದುಗೆ,ಕತ್ತಿನ ಸರ... ಅಲಂಕಾರಕ್ಕಲ್ವೇ... ಕೃಷ್ಣ ಹಾಕಿ ನಡೆದಾಗ, ಓಡಿ ಬಂದ ಗೋಪಿಯರಿಗೆ, ಕೃಷ್ಣ ಮುಖ್ಯವಾದ ಅವನ ಅಂದ ಮೋಡಿ ಆಯಿತು.... ಅದೇ ರುಕ್ಮಿಣಿಯ ಹಣೆಯ ಕುಂಕುಮ, ಕಾಲಂದುಗೆ, ಕತ್ತಲ್ಲಿನ ತಾಳಿಗೆ ಕೃಷ್ಣನ ಒಡೆತನ ಯಾಕೆ??.. ಅವಳಂದಕ್ಕದು ಮೋಡಿ ಅನಿಸಬಾರದೇಕೆ??

ಪ್ರೀತಿಯ ಕನಸು, ವಿವಾಹದ ಬಂಧ..ಇಲ್ಲೆಲ್ಲ ಮನಸ್ಸು ಖಷಿ ಅನ್ನಿಸುವ ಒಬ್ಬರಿಗೊಬ್ಬರು ಅನ್ನೋ ಸಮಾನತೆಯ ಸಮನ್ವಯದ ಮಾತು..... ಜಗತ್ತಿಗೆ ಪರಿಚಯಿಸುವಾಗ ಹೆಣ್ಣಿಗೆ ಮಾತ್ರ ಒಡೆತನದ ಕುರುಹಗಳು.. ತಾಳಿ, ಕಾಲುಂಗುರ, ಹಣೆಯ ಕುಂಕುಮ...

ಬಂಧ..ಎಂದು ಬಂಧನವಾಯ್ತೋ ತಿಳಿಯಲಿಲ್ಲ. ಹೆಂಡತಿ ಒದೆಯಬೇಕಾಗಿರುವುದು ಹೊಸ್ತಿಲ ಸೇರಕ್ಕಿಯನ್ನಲ್ಲ: ಪರಂಪರೆ, ಸಂಪ್ರದಾಯಗಳ 'ಸುರಕ್ಷಿತ ಗುರಾಣಿ'ಯ ಹಿಂದಿರುವ ಪುರುಷಾಹಂಕಾರಕ್ಕೆ... ಒಡೆತನದ ಸಂಕುಚಿತೆಯ ಆಚೆಯೂ ಬದುಕಿದೆ..ಕನಸಿದೆ..

ಅಯ್ಯೋ ಈ ಸ್ತ್ರೀವಾದಿಗಳ ಗೋಳು ಅಂತ ಮೂಗು ಮುರಿಬೇಡಿ, ಎಡಪಂಥೀಯ ಅಂದುಕೊಂಡವರೆ ಒಮ್ಮೆ ನಿಮ್ಮೊಳಗೆ ಇಣುಕಿ ನೋಡಿ...ಪದ್ದತಿ ಏನಾದರೂ ಬದಲಾಯಿಸಿದ್ದೀರಾ??.. ಬುದ್ದಿಜೀವಿಗಳೇ... ವಿವಾಹ ಪದ್ದತಿಗಳಿಗೆ ಕಾರಣ ಕೊಡುವುದರ ಬಿಟ್ಟು ಬೇರೇನಾದರೂ ನಡೆದಿದೆಯಾ??.ಪ್ರತಿಷ್ಟರೇ... ಹೊಸತನ ಸಂಪ್ರದಾಯದಲ್ಲಿ ಬರಬೇಕು.. ತೋರಣಗಳಲ್ಲ...

ಜಾತಿ ಮತಗಳ ಕಟ್ಟೆ ಒಡೆದು ನಡೆವ ನಾವು ಒಡೆತನದ ಬಂಧನವನ್ನೂ ಒಡೆದು ನಡೆಯಬೇಕಲ್ಲವೇ??
    

Friday, 19 May 2017

Aatha...Aake....Kanasu (ಆತ ....ಆಕೆ ...ಕನಸು)

 ಕಡು ಕಪ್ಪಿಗೆ
ಬಂಗಾರದ ಅಂಚು
ಸೀರೆ ನೋಡಲೊ
ಸೀರೆಯೊಡತಿಯ ನೋಡಲೊ? ಆತನ ಕವನ

ತುಂಬಾ ಸುಂದರವಾಗಿದೆ..ಕನಸಿನ ಉತ್ತರ..

ನೀನು ತುಂಬಾ ಚಂದ  ಅದಕ್ಕೆ ನನಗೆ ಭಯ...ಆತನ ಹಂಬಲ

 ಅಯ್ಯೋ...ನಾನೇನು ಮಾಡಿದೆ
ನಾನೆಲ್ಲಿ ಚೆಂದ... ಸುಂದರತೆ ನೋಡುಗನ ಕಣ್ಣಲ್ಲಿ..ಕನಸಿನಲ್ಲೂ ಚಂಚಲತೆ..

ನೀನೇನೂ ಮಾಡಲಿಲ್ಲ
ನಾನೇ ಏನಾದರೂ ಹೇಳಿಬಿಟ್ಟರೆ ಅಂತ..ಆತನ ಹಿಂಜರಿಕೆ

ಅಂದೆಂತ ಹೇಳೋಣ.... ಕವಿಗಳು.. ಏನು ಹೇಳಿದರೂ ಚೆಂದ..ಕನಸಿಗೆ ಬಿನ್ನಾಣ

ಹೊನ್ನ ಸಂಜೆಯೊಂದು ಸುಮ್ಮನೆ ಸರಿದು ಹೋಯಿತಲ್ಲ!
ನಿನ್ನ ಬಿಸುಪಿಲ್ಲದೆ...ಆತನ ತಳಮಳ

ಸಂಜೆಗಳು ಹೊನ್ನವಾಗುವುದು....ನೆನಪಿನ ಅಂಗಳದಲ್ಲಿ..ಕನಸಿನ ತಿರುಗುತ್ತರ

ಕನಸು ಚೆಲ್ಲಾವೆ ಗೆಳತಿ
ಮನದಂಗಳದ ತುಂಬಾ...ಆತನ ಹಪಹಪಿ..

 ಕನಸುಗಳು ಜೀವಿತದ ಸಂಖ್ಯೆ..
ಮನಸ್ಸಿನ ಬಿಸುಪು..ಕನಸುಗಳಿಂದ..ಆಕೆಯ ಮುಗ್ದತೆ?!?!

ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ..ಆತ ಕಂಡ ಕನಸು

ಕಣ್ಣ ತುಂಬಾ ಕನಸು..ಮುಚ್ಚಲೂ ಬಾರವಾಗುತಹ ಕನಸು... ಹಾರಿಹೋದೀತು ಜೋಕೆ.. ಎಚ್ಚರಿಕೆ ಆಕೆಯಿಂದ

ರೆಕ್ಕೆಗಳನು ನಿನ್ನ ಮಡಿಲಲಿ ಮರೆತಿರುವಾಗ
ಹಾರಿ ಹೋದೇನಾದರೂ ಹೇಗೆ?..ಆತನ ಬೇಡಿಕೆ..

 ಮಡಿಲು ಬರಿದಾಗಿ ವರ್ಷಗಳೇ ಆದವು.... ಕನಸುಗಳ ಹುಟ್ಟಿ ಮಡಿಲು ಬರಿದಾಗಿಸಿದವೋ ಗೆಳೆಯ...ಕನಸಿಗೊಂದು ಬಿಗಿಮಾನ

ಒರತೆಗಳ ಮೇಲಡರಿದ ಮಣ್ಣ ಸರಿಸಿ
ಜೀವ ಜಲವ ಸ್ಪುರಿಸಬೇಕು...ಪುನಃ ಒರೆತ

ಮಣ್ಣುಗಳ ಆ ಕಂಪಿಗೇ ಜೀವ ಜಲ ಸ್ಪುರಿಸುತ್ತದೆ....ಬಿಡಲ್ಲೊಳು ತನ್ನ ಬಿಗು

ಭಾವನೆಗಳಿಗೆ ಎಷ್ಟು ಚಂದ ಸ್ಪಂದಿಸುತ್ತೀಯಾ ನೀನು...ಕೊನೆಗೂ ಆತ ಸೋತ

 ಮಾತಿನಲ್ಲರಮನೆ... ಕನಸಿನಲ್ಲಿ ಸೂರ್ಯೋದಯ...ಇವೆರಡೂ ಸುಲಭ...ಸೋಲು ತನ್ನದಲ್ಲ ಅನ್ನುತ್ತಾಳೆ ಕನಸು....

ಆತ..ಮೌನ..ಕನಸಿನ ಕವನ ಹಾಡಾಗಿ ಹರಿಯಲು ಕಾಯುತ್ತಾ....

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...