Thursday, 27 July 2017

Baduka mithi sakenisida krishne.... Baduka nadesuva krishnanondige (ಬದುಕ ಮಿತಿ ಸಾಕೆನಿಸಿದ ಕೃಷ್ಣೆ... ಬದುಕ ನಡೆಸುವ ಕೃಷ್ಣ ನೊಂದಿಗೆ)

ಕನಸುಗಳು ಕರಕಲಾಗಿದೆ ಗೆಳೆಯ, ಈಗ ಬೇಕೆನಿಸುವುದು...ಪಕ್ಕದಲ್ಲಿದ್ದವರ ಆಹಾ ಕಾರ ಮಾತ್ರ ಎಂದಳು ಇಂದಿನ ದ್ರೌಪದಿ.

 ಸಂವೇದನೆಗಳನ್ನು ಹೆಣ್ಣಾಗಿ ನೀನೇ ಕಳೆದುಕೊಂಡರೆಂತು? ಜಡವಾಗಬೇಡ. ಜಗದ ಗೊಡವೆಗೆ ಬೆನ್ನು ಹಾಕಿದರೆ ನಾವು ಜೊತೆಯಾದ ಸಂಭ್ರಮಕ್ಕೇನು ಸುಖವಿದೆ? ಎಂಬುದು ಆಕೆಯ ಯಾವತ್ತೂ ಸ್ನೇಹಿತ ಕೃಷ್ಣ ಉವಾಚ.

ಸಂವೇದನೆಗಳಿಗೂ ಹೆಣ್ಣು ಗಂಡೆಂಬ ಭೇದವೇ ಕೃಷ್ಣ??

"ಸಹಜ ಕಣೇ..ನಿನಗೆ ಬೇಸರವಾಗಿದೆ ನಿಜ... ಆದರೆ, ಮಗುವಿನ ನವಿರು ಹೆಣ್ಣು ಅನುಭವಿಸಿದಷ್ಟು ಉತ್ಕಟವಾಗಿ ಗಂಡನ್ನು ಸೋಂಕೀತೆ? ಸ್ಪಲ್ಪ ಯೋಚಿಸು... ನೀನು ಬೆನ್ನು ಹಾಕಿ ನಡೆದರೆ ಸೃಷ್ಟಿಗೆಲ್ಲಿ ಕನಸಿದೆ ಗೆಳತಿ???!!" ಕೃಷ್ಣನಿಗೆ ಜಗ ನಡೆಸಬೇಕು.. ದ್ರೌಪದಿ ಇಲ್ಲದ ಮನುಕುಲ ಆತನ ಮನಸ್ಸಿಗೆ ಬಾರದು.

ಮಗುವಿನ ನವಿರು ಅನುಭವಿಸುವ ಅನಿವಾರ್ಯತೆ ಹೆಣ್ಣಿಗಲ್ಲವೇ..ನೀನದನ್ನ ಬೇಕೆಂದೇ ನನ್ನ ಮೇಲೆ ಹೇರಿರುವೆಯಾ ಜಗದೊಡೆಯಾ?? ದ್ರೌಪದಿಯ ಪ್ರಶ್ನೆ ಸಮಯೋಚಿತ

ಇಲ್ಲ ದ್ರುಪದ ಕುವರಿ ನಿನ್ನದು ಬಹಳ ದೊಡ್ಡ ಸ್ಥಿತಿ.... ಗುಣಮಟ್ಟದ ಮನುಷ್ಯರ ಯಾದಿಯಲ್ಲಿ ನಿನ್ನ ಹೆಸರಿದೆ. ಸ್ವಹಿತವನ್ನು ಮೀರಿ ನೆರೆಹೊರೆ ನಿನ್ನಿರವನ್ನು ಬೇಡುತ್ತದೆ. ನಿನ್ನ ಸಂವೇದನವಿಲ್ಲದೆ ನಾವು ಉಸಿರಾಡಲೂ ಸಾಧ್ಯವಿಲ್ಲ ಕಣೇ... ಕೃಷ್ಣನಿಗೆ ಪ್ರೇಯಸಿಯರ ಸಾಲೇ ಇದ್ದರೂ ಕೃಷ್ಣೆ ಇಲ್ಲದೆ ಆತ ಯೋಜನೆಗಳ ಯೋಚಿಸಲಾರ.

ತಾನಿನ್ನೂ ಬದುಕ್ಕಿದ್ದೇನೆ ಎಂದು ನೀರೂಪಿಸಲು ಬೇಕು ಹೆಣ್ಣಾದ ನನಗೆ ಮಗುವೆಂಬ ಕವಚ....ಅದ್ದಕ್ಕಲ್ಲವೇ ಪ್ರತಿ ಹೆಣ್ಣು ಮಗುವನ್ನ ಪುರ್ಣ ನವಿರಾಗಿ ಅನುಭವಿಸುವುದು

ಕೃಷ್ಣ ಬಹಳ ಬುದ್ದಿವಂತ..ಅದಕ್ಕೆ ಅವನು ಸೋಲುತ್ತಾನೆ.... "ಹೋಗಲಿ ಬಿಡು. ನಾನೇ ಪಟ್ಟು ಸಡಿಲುಸುತ್ತೇನೆ ಅಥವಾ ನೀನೆ ಸಡಿಲಿಸಿದೆ ಎಂದು ಬೀಗು. ನಾಳೆ ತರಾತುರಿಯಲ್ಲಿ ಸೀರೆ ನೆರಿಗೆ ಸಿಕ್ಕಿಸಿಕೊಳ್ಳುವಾಗ ನನ್ನನೊಂಚೂರು ನೆನಪಿಸಿಕೊಳ್ಳೆಯಾ? ನಿನ್ನ ಸೀರೆಗೂ ನನಗೂ ನಂಟುಂಟು ಗೆಳತಿ..‌"

ಸೀರೆಗೆ ನೆರಿಗೆ ಹಾಕುವಾಗ ನೆನಪಾಗುವುದು, ಸೀರೆ ಜಗ್ಗಿ ತನ್ನಡೆ ಸೆಳೆದ ಪುಟ್ಟ ಕಂದಮ್ಮ...ನಾನೂ ಎಲ್ಲರಂತೆ...ದೇವರಾಗಬಯಸುತ್ತೇನೆ... ಅದಕ್ಕೆ ಎಡೆ ಮಾಡಿದ್ದು ನನ್ನ ಆ ಕಂದಮ್ಮ ನೀನಲ್ಲ... ನೀನು ನನ್ನ ದೀನಳಾಗಿಸಿದೆ ಜಗದೊಡೆಯ.. ಅದಕ್ಕೇ ನನ್ನ ಮನಸ್ಸ ತುಂಬಾ ನನ್ನ ದೇವರಾಗಿಸಿದ ಕಂದಮ್ಮ ತುಂಬಿರುತ್ತದೆ ..‌ ಅನ್ನುತ್ತಾಳೆ ಇಂದಿನ ದ್ರೌಪದಿ. ಗಂಡಸು ಯಾರೇ ಆದರೂ, ಯಾಕೇ ಆದರೂ,  ಪಟ್ಟು ಸಡಲಿಸಿದಾಗ ಸಿಗುವುದು .. ಇನ್ನೂ ಬದುಕಬೇಕೆಂಬ ತುಡಿತವಲ್ಲ.‌..ಮುಗಿದು ಹೋಗಲಿ ಎಂಬ ಹತಾಶೆ..

 ದ್ರೌಪದಿಯ ಹತಾಶೆ ಸಹಿಸದಾದ ಜಗದೊಡೆಯ‌.‌‌ ಅನ್ನುತ್ತಾನೆ ಆತ, ನಾನೂ ಮಗುವಾಗುತ್ತೇನೆ. ನೀನು ಹೊರದೆ, ಹೆರದೆ. ಆದರೆ ನೀನು ನನ್ನ ತೊದಲನ್ನೇ ‌‌ಅರ್ಥೈಸಿಕೊಳ್ಳುತ್ತಿಲ್ಲವಲ್ಲ ಗೆಳತಿ...

"ಇದೇ ನೋಡು..ಹೆಣ್ಣಿನ ಸಂಕಟ, ಪ್ರತಿಯೊಬ್ಬರೂ ಆಕೆಯಲ್ಲಿ ಮಗುವಾಗ ಬಯಸುತ್ತಾರೆ...ಆದರೆ..ನನ್ನ ಕಂದಮ್ಮನಂತೆ..ನನ್ನಲ್ಲಿ ಬೆಳೆದು...ನನ್ನ ಬೆಳೆಸುವುದಿಲ್ಲ...ತೊದಲ ಆಡುತ್ತಾ ನನ್ನ ಮಾತನ್ನ ಕಸಿಯಲಷ್ಟಕ್ಕೇ ಗಂಡಸರ ಮಗುತನ ಮೀಸಲು. ನಾನು ಎತ್ತಹೋದರೇನು!! ಸಾಕಾಗಿದೆ ಕೃಷ್ಣ, ನನ್ಯಾಕೆ ಬದುಕಾದೆ..ನಾನ್ಯಾಕೆ ಹೆಣ್ಣಾದೆ ಅನ್ನಿಸುವಷ್ಟು....ಕಾಡುತ್ತವೆ ಈ ತೊದಲುಗಳು ನನ್ನ.. ಬಿಡಿಸಯ್ಯ ನನ್ನ ಬಂಧ" ದ್ರೌಪದಿ ಕನಲಿ ಕೇಳುತ್ತಾಳೆ ಕೃಷ್ಣನನ್ನ.

ಏನು ಮಾಡೋಣ ಹೇಳು. ಅದು ಗಂಡಿನ ಮಿತಿ ಗೆಳತಿ. ಇವತ್ತೂ ನೀನಲಿಯುವ ಲಕ್ಷಣಗಳಿಲ್ಲ. ಹೋದ ಜೀವಗಳ ಅರೆಕ್ಷಣ ನೆನೆದು ಮನುಕುಲವನ್ನೊಮ್ಮೆ ಪ್ರಾರ್ಥಿಸೋಣ: ಸಾಯಬೇಡಿ, ಸಾವು ತಾನಾಗಿ ಬರುವವರೆಗೂ. ಕೃಷ್ಣನಿಗೆ ಬದುಕನ್ನ ಬೆಳೆಸುವ ಯೋಚನೆ ಮಾತ್ರ...‌

ಮಿತಿಗಳಿಗೆ ಮೀರಿದ ಬದುಕಿದೆ ಎಂದಾದರೆ ಮಾತ್ರ ಸಾಯಲು ಓಡಬಾರದೆಂಬ ತುಡಿತ ಸಾಧ್ಯ, ಗೆಳೆಯ...ಇಲ್ಲವಾದರೆ, ಬದುಕಿನಾಚೆಯ ಮಿತಿಯಿಲ್ಲದ ಬದುಕಿಗೇ ತುಡಿತ..ಆಗಲೆಲ್ಲ ಸಾವು ಅಪಮಾನ್ಯ. ಸಾವು ತಾನಾಗಿಯೇ ಬರುವವರೆಗಿನ ಮಿತಿಯ ಜೀವನಕ್ಕೆಲ್ಲಿ ಅರ್ಥ??. ಸಾವಲ್ಲಾದರೂ ನನ್ನತನವಿರಲಿ, ಮಿತಿ ಇಲ್ಲದಿರಲಿ ಎಂಬ ತುಡಿತ ತಪ್ಪೇ.. ದ್ರೌಪದಿ ಸೆಟೆದು ಕೇಳುತ್ತಾಳೆ ಜಗದೊಡೆಯನ್ನನ್ನ.

ಇಲ್ಲ ಕೃಷ್ಣೆ ಗಂಡಸರಲ್ಲಿ ಹೆಚ್ಚಿನವರು ಬದುಕಿಗೆ ಬೆನ್ನು ಹಾಕಿದವರು, ಬದುಕ ಓಟ್ಟಕ್ಕೆ ಹೆದರಿ ನಿನ್ನಲ್ಲಿ ಮಗುವಾಗ ಬಯಸಿದವರು. ನಾನು ಮಾತ್ರ ನೀನು ಎಂದಿಗೂ ಬೆನ್ನು ಹಾಕಿದರೂ ಅದರಲ್ಲೂ ನನಗೇನೊ ತೋರಿಸಹೊರಟಿರಬೇಕಿವಳು ಎಂದು ನಂಬಿರುವ ಆಶಾವಾದಿ. ಬದುಕ ಮನ್ನಿಸು ಹುಡುಗಿ...ನಡೆ ಮುಂದೆ..ನಡೆ ಜಗದೊಡೆಯನ ಜೊತೆ... ನೀನಲ್ಲದೆ ಇನ್ಯಾರು ಬದುಕ ಪ್ರೀತಿಸ ಬಲ್ಲರು ಕೃಷ್ಣೆ... ಬಾ ನನ್ನೊಡನೆ ಇದೆ ಆಸೆ..

ಎಳೆದು ನಡೆಯುತ್ತಾನೆ ಜಗದೊಡೆಯ....ಕೃಷ್ಣ ನಲ್ಲದೆ ಇನ್ಯಾರು ಪ್ರಿಯ ಸ್ನೇಹಿತರಿದ್ದಾರೆ?! ಹೆಣ್ಣು ಮಗಳು ಆಕೆ ದ್ರೌಪದಿ.. ಕರೆದಾಗೆಲ್ಲ ಓಗೊಟ್ಟ ಆತನ್ನನ್ನ ಬಿಟ್ಟು ನಡೆಯಲಾದೀತೆ?! ಜಗದೊಡೆಯನೊಂದಿಗೆ ಜಗಳ ಸಾಧ್ಯ.. ಆದರೆ ಕೈ ದೂಡಿ ನಡೆದರೆ ಇನ್ಯಾರು ಇರುವರು ಆಕೆಗೆ??? ನಿಟ್ಟುಸಿರಿನೊಂದಿಗೆ ಆಸೆಯ ಕನಸನ್ನ ಪುನಃ ಒಗ್ಗೂಡಿಸುತ್ತಾ ನಡೆಯುತ್ತಾಳೆ ಕೃಷ್ಣೆ, ಜಗದೊಡೆಯ ಕೃಷ್ಣ ನೊಂದಿಗೆ...‌

Tuesday, 18 July 2017

ಆಶಾವಾದವೆಂಬ ಹಮ್ಮು...

ಈ ವಾರ ಬದುಕಿನ ಬಗ್ಗೆ...ಹೊರಾಟದ ಬಗ್ಗೆ ಬರೆಯೋಣ ಅಂದುಕೊಳ್ಳುತ್ತಿರುವಾಗಲೇ... ಸ್ನೇಹಿತರೊಬ್ಬರ SMS ಬಂತು "ನನ್ನ ನೆರೆಯೂರಲ್ಲಿ ಕುಟುಂಬಕ್ಕೆ ಕುಟುಂಬವೇ ತನ್ನನ್ನು ತಾನು ಕೊಂದುಕೊಂಡಿದ್ದರ ವಿಷಾದ ನನ್ನೆದೆಯಲ್ಲಿನ್ನೂ ಪಸೆಯಾರದೆ ಉಳಿದಿದೆ. ಯಾರ ಬದುಕಾದರೂ ಬದುಕಲಾರದಷ್ಟು ಕಷ್ಟವೇನೇ ಗೆಳತಿ?"
     ನನ್ನೊಳಗಿನ ಲಾವಾರಸ ಉಕ್ಕ ತೊಡಗಿತು...
     ನೆಲೆ ಸಿಗದ ಹೋರಾಟ...ಅದರ ವಿಷವೇ ಹೆಚ್ಚು ಎಲ್ಲರ ಜೀವನದಲ್ಲಿ...  ಬದುಕಲು ಬೇಕು ಎಲ್ಲರಿಗೂ ಒಂದು ಕನಸು..ಅದೇ ಗೋಜಲಾದರೆ!!!??!
      ಇತ್ತೀಚಿಗಂತೂ ಜೀವನಕ್ಕೇನು ಬೇಕು ತಿಳಿಯದ ದಡ್ಡತನ ಎಲ್ಲರಲ್ಲೂ.. ಸುಮ್ಮನೆ ಕಾಣದ ಜಿಂಕೆಯ ಹಿಂದೆ ಎಲ್ಲರ ಓಟ, ಯಾವ ಸೀತೆಯ ಆಸೆಗೆ ಯಾವ ರಾಮನ ಹೋರಾಟವೋ ಒಂದೂ ತಿಳಿಯದು ??
      ಬದುಕಿನ ಸಿಕ್ಕು ಸಿಕ್ಕಾದ ದಾರದುಂಡೆಗೆ ಬೇಕು ಸಂತೋಷವೆಂಬ ಬೆರಳುಗಳ ಮಾಂತ್ರಿಕ ಸ್ಪರ್ಶ ಹಾಗು ಅದರಿಂದ ಒಂದು ಸುಂದರ ಕಸೂತಿಯಾಗಬೇಕು...ಇವೆಲ್ಲ ಬೆಳಗು ಹರಿಯುವುದರೊಳಗೆ ಆದೀತೆ‌??....ಖಂಡಿತ ಇಲ್ಲ... ಕಸೂತಿ ಆಗಲು ಕಾದಂತೆ ಕಾಯಬೇಕು ನಾಳೆಗಳ ಸೌಂದರ್ಯದ ನಿರೀಕ್ಷೆಯಲ್ಲಿ....
         ಆದರೆ ನಾವೀಗ ಜಡವಾಗಿದ್ದೇವೆ ಯಾರ ಸಾವೂ ಕಲಕಲಾರದಷ್ಟು..... ಯಾರ ಕೂಗೂ ಯಾರಿಗೂ ಕೇಳದು... ಅದೆಲ್ಲೋ ಪರ..ಪರ, ಶಬ್ದದ ನಡುವೆ ಹಸಿ ಬಿಸಿ ನೋಟುಗಳದೇ ಅಟ್ಟಹಾಸ. ಪ್ರತಿಯೊಬ್ಬರಿಗೂ ಬರೀ ನಾನು, ನಾನೆಂಬ ತುಡಿತ....ಬೇಕು ಬೇಕೆಂಬ ಕಾಮನೆಗಳು
        ಇವೆಲ್ಲದರ ಮಧ್ಯೆ ಕಾಣದಾದದ್ದು.. ಕೇಳದಾದದ್ದು..ಮಾತ್ರ ನಮ್ಮವರ ಕನಸುಗಳು, ಕರಕಲಾದ ನೋಟ..ನೋವು.‌ ಹೊಸ ಕನಸಿನ ಆಸೆಗೆ, ಕೇಳಿಸಿದ್ದು ಪಕ್ಕದಲ್ಲಿದ್ದವರ ಆಹಾಕಾರಗಳು ಮಾತ್ರ... ನಾಳೆಗಳ ಸೌಂದರ್ಯ ಇವತ್ತಿನ ಬೇಕುಗಳ ಮಧ್ಯೆ ಕಾಣೆಯಾಗಿದೆ
         ಜಗದ ಗೊಡವೆಗಳೆಲ್ಲ ಮನುಷ್ಯನ ಸ್ವಂತ ವಿಕೃತಿಗಳಿಂದಲ್ಲವೇ...ಪ್ರತಿ ಮನೆ ಸರಿಯಾದರೆ, ಜಗದ ಗೊಡವೆ ಯಾರಿಗೆ ಬೇಕು?? ನನ್ನ ಮನೆಯ ಗೋಜಲಗಳಿಗೆ ಉತ್ತರ ಹುಡುಕಲು ಸಮಯವಿಲ್ಲ....ಸಮಾಜಕ್ಕೆ ಮುಖ ಮಾಡಿ ದೊಡ್ಡವರೆನಿಸಿಕೊಳ್ಳುವ ಹಂಬಲ...
           ಸ್ವಹಿತ ಮರೆತ ರಾಕ್ಷಸರೊಂದಿಗಲ್ಲವೇ ಇಂದು ಜಗದೊಡೆಯ ಜಗಳಕ್ಕಿಳಿಯಬೆಕ್ಕಾದ್ದು. ಮನುಷ್ಯ ತನ್ನಲ್ಲಿ ಕಾಣದ ಸುಖ ಬೇರೆಯವರಲ್ಲೂ ಇರಬಾರದೆಂದಲ್ಲವೇ ರಾಕ್ಷಸನಾಗ ತೊಡಗಿದ್ದು...
           ‌ಅಲ್ಲೆಲ್ಲೋ ದೂರದ ಊರಿನ ರಾಜಕೀಯಕ್ಕೆ ತನ್ನ ಮನೆ ಬಿಟ್ಟು, ತನ್ನ ಕನಸನ್ನ ಮಾರಿ ಹೊರಟ ಜನರಿರುವ,....ಬರೀ "ನಾನೇ ನಾನು" ಎಂದೆಣಸಿಕೊಳ್ಳಲು, ಇಸಂಗಳ ದಾಸರಾದ ಜಂಗುಳಿಯಲ್ಲಿ...ಬದುಕು ಸಹ್ಯವಾಗುವುದೆಂತು??...ನಿಜ ಪ್ರೀತಿ, ಕನಸು, ಸಂತೋಷ ಹುಟ್ಟುವುದೆಂತು???..ಅದಕ್ಕಲ್ಲವೇ ಇಂದಿನ ಪ್ರತಿಯೊಬ್ಬರಿಗೂ ಬದುಕು ಸಲಭವಾಗದೆ, ಖಷಿಯಾಗದೆ..ಬದುಕಬೇಕಾದ ದುಸ್ತರವಾಗಿರುವುದು...
           "ನನಗೆ ಯಾವೂರ ದಾಸಯ್ಯನೂ ಬೇಡ...ನನ್ನ ಮಗುವಿಗೆ ಹೊಟ್ಟೆ ತುಂಬಲು ಒಂದಿಷ್ಟು ಧಾನ್ಯ... ನನ್ನ ಕನಸಿಗೆ ಖುಷಿ ಕೊಡಲು ಒಂದಷ್ಟು ಹಾಡು....ಇಷ್ಟು ಕೊಡು ದೇವ‌ ನಿನ್ನೂರಿನಲ್ಲಿ...‌ ಆದರೆ ಇವ್ಯಾವವೂ ಬೇಡವೆಂಬಂತೆ ಕೆಂಪು, ಕೇಸರಿ, ಹಸಿರೆಂಬ ಬಣ್ಣಗಳಿಗೆ ಜಗಳವಾಡುವ ನನ್ನೂರಿನ ಈ ಜಂಗುಳಿಗಿಂತ... ಕಾಣದ ಕತ್ತಲೆಯೇ ಒಳಿತು ದೇವ" ಎಂದು ಪ್ರಾರ್ಥಿಸಿರಬಹುದೇ ಸಾವಿನಂಚಿಗೆ ನಡೆದ ನೆರೆಯೂರ ಕುಟುಂಬ.
      ಆಸೆಗೂ ಆಶಾವಾದಕ್ಕೂ ಅಜಗಜಾಂತರ ವತ್ಯಾಸ ....ಚೆಂದದ ಬದುಕಿಗೆ ಇರಬೇಕ್ಕಾದ್ದು  ಹಾಡುವಾಸೆ...ಆದರೆ ಇಂದಿನ ಜನರಿಗಿರುವುದು....ಆಶಾವಾದ ಎಂಬ  ಹಮ್ಮು.!!!!

ಬರೆಯಲು ವಸ್ತು ಸಿತ್ಥಿಯನ್ನ ನನ್ನೊಳಗೆ ಪರಿಚಯಿಸಿದ ಸ್ನೇಹಿತರಿಗೆ ಅರ್ಪಣೆ.

Wednesday, 12 July 2017

Brangada Asege Akeya Gojala (ಭೃಂಗದ ಆಸೆಗೆ ಆಕೆಯ ಗೋಜಲ)

ಕನಸುಗಳು, ಹಾರಿ ಹೋದಾವು ಅಂತ ಆಕೆಗೆ ಭಯ..ಕಣ್ಣು ತಾಕಿತೆಂದು ತಡೆ,ತಡೆದರೂ ಮುಗುಳು ನಗೆ ಉಕ್ಕಿ ಹರಿಯುತ್ತಿತ್ತು. ಸತ್ಯವೇ, ಕಣ್ಣ ತುಂಬ ಆತನೇ .‌‌‌..ವಯಸ್ಸಾದ ಹೆಣ್ಣಾದರೇನಂತೆ, ಮಕ್ಕಳಿದ್ದರೇನಂತೆ, ಮನಸ್ಸು ಮರ್ಕಟವೇ ತಾನೇ.... ಆಶ್ಚರ್ಯವಾಗಿತ್ತು ಆಕೆಗೆ, ಎಲ್ಲಿಂದ ಬಂತೀ ಭೃಂಗ? ಕಪ್ಪು ಬಿಳುಪಾಗಿದ್ದ ಜೀವನ...ಬಣ್ಣ ಬಣ್ಣದ ಚಿಟ್ಟೆಯಾಗಿತ್ತು...‌.ಬದುಕ ಬಯಲಲ್ಲಿ, ಚಿಮ್ಮಿತ್ತು ಹೊಸತನ, ಹೊಸತನದ ಆಸೆ ತನಗಿತ್ತೋ ಇಲ್ಲ ಬದುಕೇ ಹೊಸತನ ನೀಡಿತ್ತೋ ಆಕೆ ತಿಳಿಯದಾದಳು. ಮನದ ಕನಸುಗಳಿಗೀಗ ಕಸುವು...ಇದು ಕೇವಲ ಎರಡು ದಿನದ ಮಾತು.. ಮಾತುಕತೆಗಳು ಕವಿತೆಗಳಾದವು.. ಹುಚ್ಚುಕೋಡಿಯಾಗಿತ್ತು ಮನ...ಏನು ಕೇಳಿದರೂ ಮಾಡುವ ಆಸೆ. ಮಾಡುವ ಕೆಲಸದಲ್ಲಿ ಹೊಸ ಹುರುಪು. ಏನಿತ್ತಲ್ಲಿ ತಿಳಿಯದು ಆದರೆ ಆ ಎಲ್ಲಾ ಕನಸುಗಳು ಬೇಕಿತ್ತವಳಿಗೆ....ಆಕೆಯ ಕನಸು ಹಾರಡುತ್ತಿದ್ದಾಗಲೇ ಬಂತು ಭೃಂಗದ ಆಸೆಯ ಇಂಗಿತ...
ಆಕೆಗೋ ಇನ್ನಿಲ್ಲದ ತಳಮಳ ರಾತ್ರಿ ಹಗಲು ಪ್ರಶ್ನೆಗಳ ಗೋಜಲ...
 ವ್ಯಕ್ತಿಯ ಬಗ್ಗಿನ ಆಸಕ್ತಿ ಅತನ್ನನ್ನು/ ಅಕೆಯನ್ನ ಒಂದೆರಡು ನಿಮಿಷದ ಬಿಸುಪಿಗೇ ಸ್ಥೀಮಿತವಾಗಿಸಬೇಕೆ?
 ಗಂಡು ಹೆಣ್ಣಿನ ಸಂಬಂಧ ಹಾಸಿಗೆಯ ಎರಡು ನಿಮಿಷಕ್ಕೆ ಸ್ಥೀಮಿತವಷ್ಟೇಯಾ?
ಆಸಕ್ತಿಗಳೆಲ್ಲ ಬಯಕೆಗಳೇ.. ವ್ಯಕ್ತಿ ಬಯಕೆ ಅಗಬೇಕಾದರೆ... ಆತ/ಆಕೆ ನಮ್ಮನ್ನ ಪೂರ್ಣವಾಗಿ ಆವರಿಸುವ ಅಗತ್ಯತೆ ಇಲ್ಲವೇ?
ಕನಸುಗಳಿಗೆ ಕಾಲಿದೆ ಅದು ಓಡುತ್ತದೆ... ಬಿಸಿ ನಿಂತ ಮೇಲೆ ಅಲ್ಲೇನಿರುತ್ತೆ ಬರೀ ಬೂದಿ...
 ಬದುಕಿನ ತೋಟದಲ್ಲಿರುವ ಸೌಂದರ್ಯವನ್ನ ಪ್ರೀತಿಸಿದರೆ ಅದು ಒಂಟಿತನದ ಹಪಹಪಿಯೇ?
            ಕನಸುಗಳು ಇನ್ನೂ ಬಣ್ಣ ಬಣ್ಣದ್ದಾಗೇ ಇದೆ, ಪ್ರಶ್ನೆಯ ಗೋಜಲಗಳೂ ಅಲ್ಲೇ ಇವೆ... ಆಸೆಗಳಿಲ್ಲದ ಬದುಕಿಲ್ಲ ನಿಜ ಆದರೆ ಕನಸುಗಳು ಆಸೆಗಳಾಗಬೇಕಾದರೆ ಹೆಣ್ಣಿಗದು ಜೀವನವಾಗಬೇಕಾದ ಅನಿವಾರ್ಯತೆ, ಗಂಡಿನ ಕನಸುಗಳೆಲ್ಲ ಅದ್ಹೇಗೆ ಆಸೆಗಳಾಗಿ ಹರಿದಾಡಿಬಿಡುತ್ತೆ, ಅಂತ ಆಕೆಗೆ ಸೋಜಿಗ.




     ‌  ಹೆಣ್ಣು ನದಿಯಾಗಿ ಹರಿಯಬೇಕು.... ಉಬ್ಬು ತಗ್ಗುಗಳಲ್ಲಿ ಬೊರ್ಗೆರದು...ಅಡೆತಡೆಗಳನ್ನು ಕೊಚ್ಚಿ ಹರಿಯಬೇಕು ಆಗಲೇ ತಂಪು... ನದಿಯಾಗಿ ಹರಿಯಲು ಬೇಕು ಉಗಮದ ಉನ್ಮಾದ.... ಅಲ್ಲಿ ಬಂಡೆಯಾಗಿ ನಿಲ್ಲಬೇಕವನು...ಆಗಲೇ ಕನಸು ಆಸೆ ಅದೀತು.

Tuesday, 4 July 2017

Manasemba markatadalli kasemba hucchu kodi....... (ಮನಸೆಂಬ ಮಾರ್ಕಟದಲ್ಲಿ ಕನಸೆಂಬ ಹುಚ್ಚುಖೋಡಿ.......)....


ಮನಸುಗಳು ಮುಖ್ಯವಾದವೋ, ಕನಸುಗಳು ಮುಖ್ಯವಾದವೋ?!?! ಈ ಪ್ರಶ್ನೆ ಬಂದದ್ದು ಜೀವನ ಈಗಿನ್ನು ಶುರುಮಾಡಿದ ಜೋಡಿಗಳಿಂದ.. ಕನಸುಗಳು ಮನಸ್ಸ ಮುಖ ಮಾಡಿ ನಡೆಯುತ್ತದೋ... ಮನಸ್ಸು ಕನಸ ಬೆನ್ನೇರಿ ನಡೆಯುತ್ತದೋ ಬಲ್ಲವರು ಯಾರು?!?!
      ಪ್ರತಿಯೊಬ್ಬರೂ ಕನಸ ಬಗ್ಗೆ ಮಾತನಾಡುತ್ತಾರೆ, ಅವರವರ ಕನಸು ಅವರವರಿಗೆ ಮುಖ್ಯವಾದರೆ, ಸಂಸಾರದ ಸಾಮರಸ್ಯವೆಂತಯ್ಯ ಅನ್ನುತ್ತಾರೆ ಹಿರಿಯರು... ಬದುಕಿ ಬೆಳೆಯಲು ಮನಸ್ಸು ಕೂಡಬೇಕು, ಮನಸ್ಸು ಕೂಡಿದರಷ್ಟೇ ಬದುಕು ಬಂಗಾರ...ಇದು ನಮಗೆಲ್ಲ ತಿಳಿದಿದೆ... ಹಾಗಾದರೆ ಕನಸು ಕಟ್ಟು, ಕನಸ ನನಸಾಗಿಸಲು ದುಡಿ ಅನ್ನುವಿರೇಕೆ?!?!
       ಚಿನ್ನದ ಜಿಂಕೆ ಬಯಸಿದ ಸೀತೆಗೆ, ರಾಮನೇ ಮನದ ತುಂಬೆಲ್ಲಾ..ರಾಮನಿಲ್ಲದ ಬದುಕೇ ಕಾಣದ ಆಕೆ, ಹುಚ್ಚುತನ ಎಂದು ತಿಳಿದು ಕೂಡ, ಕನಸ ಬೆನ್ನೆತ್ತಿದಳಾಕೆ, ಮನ ಕೂಡಿದಾಕ್ಷಣ ಒಂದೇ ಕನಸು ಚಿಗುರೊಡೆಯಬೇಕಂಥೇನಿಲ್ಲ.... ಆದರ್ಶದ ಸಂಸಾರದಲ್ಲೂ ಕನಸುಗಳು ಬೇರೆ ಬೇರೆ ಆಗಿ ಚಿಗುರೊಡೆದೀತು...
      ಮನಸ್ಸೆಂಬ ಮರ್ಕಟದಲ್ಲಿ ಕನಸ್ಸೆಂಬ ಹುಚ್ಚು ಖೊಡಿಯೋ ಇಲ್ಲ ಕನಸ ಹುಚ್ಚಿನಲ್ಲಿ ಮನಸ್ಸು ಮಾರ್ಕಟವಾಯಿತೋ....ಬಲ್ಲವರು ಯಾರಯ್ಯ?!?
   ಇನ್ನು ಕನಸು ಹೇಗೆದ್ದೀತು ಯಾರಿಗೇನು ತಿಳಿದೀತು? ಕನಸ ಕಂಡ ಮನಸ್ಸಿಗೆ ಬಿಟ್ಟು.... ಆಕಾಶದ್ದೆತ್ತೆರದ ಕನಸೋ, ಇಲ್ಲ ಬೇಲಿಯಾಚೆಯ ಕನಸೋ.. ಯಾರು ಹೇಳಿಯಾರು?? ಬೇಲಿಕಟ್ಟಿದವರೇ ಇಲ್ಲ ಆಕಾಶದ ಅಳತೆ ಅಳೆದವರೇ?!?! ಕನಸು, ಕನಸೇ.... ಮನಸ್ಸುಗಳ ಒಳಗೆಲ್ಲ ಹೊಸ ಒರೆತ, ಹೊಸ ಉತ್ಸಾಹ, ಕನಸುಗಳ ಹರಿಯುವುಕೆಯಿಂದ ತಾನೇ!!
       ಮನಸುಗಳ ಒಡಂಬಡಿಕೆಯೊಂದಿಗೆ, ಕನಸುಗಳು ಜೊತೆಗೇ ಉಕ್ಕಿ ಹರಿಯಬೇಕೆಂಬ ಹಠವೇಕೆ? ಇನ್ನೊಬ್ಬರ ಕನಸುಗಳೆಡೆಗೊಂದು ಕೌತುಕ, ಪ್ರೀತಿ, ಗೌರವ ಇಷ್ಟು ಸಾಕಲ್ಲವೇ ಮನಸ್ಸು ಕೂಡಲು.....
         ಬೇಡವೆನಿಸಿದರೂ, ಸಾಗಲ್ಲಿಲ್ಲವೆ ರಾಮ ಬಂಗಾರದ ಜಿಂಕೆ ತರಲು ಸೀತೆಯ ಕನಸನ್ನ ಗೌರವಿಸಿ...ರಾಮನ ವಚನಗಳು ಸೀತೆಯ ಕೌತುಕವಾದಂತೆ...ಇಲ್ಲೆಲ್ಲೂ ಬೇಲಿಯಾಚೆಯ ಬಯಕಗಳೆಂದು ಹೀಗಳಿಸಿಲ್ಲ...ಆಕಾಶದೆತ್ತರ ಕನಸೆಂದು ಉದ್ಧರಿಸಿಲ್ಲ...ಕನಸುಗಳಿಗೆ ರೆಕ್ಕೆ ಕೊಟ್ಟ ಮನಸುಗಳು ಸದಾ ಒಂದಾಗಿ ನಡೆದವಷ್ಟೇ....
          ಕನಸು ಮನಸುಗಳು ಒಂದರೊಳಗೊಂದು ಸೇರಬೇಕು... ಕನಸುಗಳಾಗಲಿ ಮನಸುಗಳಾಗಲಿ ಒಂದಾಗಲೇಬೇಕಿಲ್ಲ.. ಹೊಸ ಕನಸು, ಕನಸ ಕಟ್ಟಲು ಹೊಸ ಹೊಸ ಒರೆತಗಳು ಮನದಲ್ಲಿ ಮೂಡದ್ದಿದ್ದರೆ ಅದೆಂತಹ ಜೇವನ‌.‌..ಕನಸು ನನಸಾಗಲು ಇರುವ ತುಡಿತವೇ ಜೀವನ..  ಪ್ರತಿ ಜೀವನ ಹೊಸದಾಗಬೇಕಾದರೆ ಕನಸುಗಳ ಸಾಲುಗಳು ನಿರಂತರವಾಗಿರಬೇಕು... ಅದಕ್ಕೇ ಗೌರವ, ಸೋಜಿಗ, ಸೌಹಾರ್ದ, ಇಬ್ಬರ ಕನಸು, ಮನಸುಗಳ ಬಗ್ಗೆ ಮೂಡಿ.... ಪ್ರೀತಿ ಅನ್ನೋ ಹಠ, ಹೃದಯದಲ್ಲಿ ಮುಖ್ಯವಾಗಬೇಕು...ಅಷ್ಟೇ...

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...