Sunday, 29 October 2017

Gandhi a gunginalli -3 (ಗಾಂಧಿಯ ಗುಂಗಿನಲ್ಲಿ-೩)

ವಾರ್ದಾದ ಆಶ್ರಮದ ಸುತ್ತೆಲ್ಲ ತಿರುಗುವಾಗ ಹೆಮ್ಮೆಯಾಗುತ್ತಿತ್ತು...ಇದೂ ನಮ್ಮ ದೇಶದ ಸಂಸ್ಕೃತಿಯ ಅಂಗ ಅಂತ... ಇನ್ನೂ ಇಪತ್ತು ವರ್ಷದ ಹುಡುಗಿ ಆಕೆ ಸವಿಸ್ತಾರವಾಗಿ ಗಾಂಧಿಯನ್ನ ವಿವರಿಸುತ್ತಾಳೆ.... ಕಣ್ಣಲ್ಲಿ ಮಿನುಗುವ ಹೆಮ್ಮೆ.. ಸ್ವರದಲ್ಲಿ ಆತ್ಮೀಯತೆ... ಗಂಟಲುಬ್ಬಿ ಬರುತ್ತದೆ ಆಕೆಗೆ.. ನನಗೋ ಆಶ್ಚರ್ಯ ಗಾಂಧಿಯ ಬಗ್ಗೆ ಆಕೆಗೇಕೆ ಅಕ್ಕರೆ??? ತಾನೆಂದೂ ಕಾಣದ ವ್ಯಕ್ತಿ ವ್ಯವಸ್ಥೆ ಬಗ್ಗೆ ಇಷ್ಟೊಂದು ಸಂವೇದನೆ?? ಅದು ಅರ್ಥ ಆದವಳಂತೆ ಅಂದಳು ಅವಳು... ಇಲ್ಲೇ ಹುಟ್ಟಿ ಆಡಿದ ನನಗೆ ಗಾಂಧಿ ಮನಸ್ಸು ತುಂಬಾ ಎಂದಳು... ನಿಜ ಆಶ್ರಮದಲ್ಲಿ ಗಾಂಧಿ ಪ್ರತಿ ಉಸಿರಿನಲ್ಲಿದ್ದಾರೇನೋ ಅನ್ನುವಷ್ಟು ಶಾಂತತೆ, ಸರಳತೆ... ಅದು ನಿಜವೆನೆಸಿದ್ದು...ಅಲ್ಲೆಲ್ಲಾ ನಡೆದಾಡುವಾಗ... ಕಾಡಿದ್ದು ಮನುಷ್ಯ ಸಹಜವಾದ ಲೋಭಗಳಿಂದ ಸ್ವಯಂ ಪರಿಕಲ್ಪನೆಯಲ್ಲಿ ತಡೆಗಟ್ಟಬೇಕಾದರ ವ್ಯಕ್ಕಿಗಿರಬಹುದಾದ .... ಸ್ವಂತಿಕೆ, ಹಾಗೆಯೇ ಬದ್ದತೆ...
   ಗಾಂಧಿಯಲ್ಲಿ ಕೆಲವೊಮ್ಮೆ ಕಾಣಿಸುವುದು ಬರೀ ಜಿದ್ದು... ಸಾಧಿಸಬೇಕೆಂಬ ಜಿದ್ದು. ನಿಜ ಕೆಲೊಮ್ಮೆ ಅತೀ ಅನಿಸುವ ಈ ಜಿದ್ದು ಸ್ವಂತದ್ದೇನೋ ಅನ್ನಿಸಿ ಬಹಳ ಜನ ಕಟುವಾಗಿ ಟೀಕಿಸುತ್ತಾರೆ.. ಆದರೆ ಇದೇ ಜಿದ್ದನಿಂದಲ್ಲವೇ ದಂಡಿ ನಡುಗೆ ಆದದ್ದು... ಆ ಸಮಯದಲ್ಲಿ ಬ್ರಿಷರಿಗೆ ಭಯ ಹುಟ್ಟಿಸಿದ್ದು ಇದೇ ಜಿದ್ದು... ಬೇರಾರಿಗೂ ಭಯ ಪಡದ ಫಿರಂಗಿಗಳಿಗೆ ಭಯ ಇದ್ದದ್ದು ಈ ಸಂತನ ಜೊದ್ದಿನ ಮೇಲೆ ತಾನೇ!!!..
     ತನಗೆ ಬೇಕ್ಕಾದ್ದು ಏನು ಎನ್ನುವಷ್ಟು ಸ್ಪಟಿತ ಮನಸ್ಥಿತಿ...ಸಾಧಾರಣವರಿಂದ ಸಾದ್ಯವಿಲ್ಲ.. ಸ್ಪಷ್ಟತೆ ಯಾವುದೇ ಒಂದು ಹೋರಾಟಕ್ಕೆ ತುದಿ ಮುಟ್ಟಲು ಪ್ರೇರಣೆ ನೀಡುತ್ತದೆ... ಅಂತಹ ಸ್ಪಷ್ಟತೆ ಎಲ್ಲರಿಂದ ಸಾಧ್ಯವಾಗುವಂತಹದಲ್ಲ...ಅದು ಕೇವಲ , ದೂರದೃಷ್ಟಿ,ಯ ನಾಯಕನಿಂದ ಮಾತ್ರ ಸಾಧ್ಯ.. ನಾಯಕತನ ಎನ್ನುವುದು ಒಬ್ಬ ತನ್ನೊಳಗೆ  ಹುಟ್ಟಿಸಿಕೊಂಡ ಧ್ಯೇಯವನ್ನ ಗೌರವಿಸಲು ನಡೆದುಕೊಳ್ಳುವ ರೀತಿಯೂ ಮುಖ್ಯವಾದ್ದ ‌ದ್ದು... ಅಂತಹ ಕೊಡುಗೆ ಗಾಂಧಿ ಈ
 ದೇಶದಲ್ಲಿ ತರಸಿಬಿಟ್ಟರಲ್ಲ..ವಿಚಿತ್ರ ಆದರೂ ಸತ್ಯ.
    ಒಂದು ಕಾಲಗಟ್ಟದಲ್ಲಿ ಸರಿ ಅನ್ನಿಸುವ ನಂತರ ಕಾಣ ಸಿಗುವ ನೂರಾರು ತಪ್ಪುಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳವ ಸಿನಿಕರಿಗೆ..ಗಾಂಧಿಯ ಈ ಎಲ್ಲಾ ‍ಜಿದ್ದುಗಳು..ಹೊಸ ಚೈತನ್ಯ ನೀಡಿದ್ದು ಸುಳ್ಳಲ್ಲ ತಾನೇ...
     
  ಇರಬಹುದು...ತಾತನಲ್ಲಿನ ಎಲ್ಲಾ ಜಿದ್ದುಗಳಿಂದ ನಮಗೆನಿಸ್ಸಿದ್ದು ನಾವು ಪಡೆಯಲು ಸಾಧ್ಯವಾಯಿತು ಎಂಬುದಂತೂ ಸುಳ್ಳಲ್ಲ..
     

Wednesday, 25 October 2017

Indoo Deepavali (ಇಂದೂ ದೀಪಾವಳಿ)


ಇವತ್ಯಾಕೋ ಕನಸು ಗೂಡು ಕಟ್ಟಿದೆ....
ಮನದ ಮೌನದಲ್ಲಿ ನಿನ್ನ ನಗೆಯ ಕಾಂತಿ...
ಕಾಡಿದ್ದು ನಾನೋ...ನೀನೋ..
ಕಾಡಿಸಿದ್ದು ಮಾತ್ರ ಪ್ರೀತಿ....
ಗೂಡು ಕಟ್ಟಿದ ಕನಸಿನಲ್ಲಿ ಹೊಸ ಮೊರೆತ
ಬದುಕಿನ ರಾಮನಿಗೆ ನಾನು ಕಟ್ಟಿಟ್ಟವಳು
ಹೃದಯದ ಶಿವನಿಗೆ ನನ್ನ ಮನಸ್ಸ ಅರ್ಪಿಸಿದರೆ
ಕಾಣದ ಕತ್ತಲ್ಲಲ್ಲಿ ನಿಟ್ಟುಸಿರು ಯಾಕೆ???

ಹುಟ್ಟು ನೂರಾದೀತು... ಕನಸು ಪುನಃ ಒಡೆದೀತು...
ಚೆಲುವ,ಚೆನ್ನಿಗ ಕೃಷ್ಣ: ಹೊಸ ಕನಸ ಕೊಡುತ್ತಾನೆ
ಕೊಟ್ಟವನೇ ಅಲ್ಲಿಂದ ಮಾಯ ಆತ...
ನಾನೂ ನನ್ನ ಶಿವ... ಗಣಗಳ ಮಧ್ಯೆ ಹುಡುಕುತ್ತೇವೆ...
ಬೂದಿಯಲ್ಲೂ ಬದುಕನ್ನ...
ರಾಮ ಬಂದಾಗ ದೀಪಾವಳಿ..ಸಡಗರ ನೂರು ತರಹ
ಬೂದಿಗೆ, ಶಿವನಿಗೆ ಕತ್ತಲೆಯೇ ಪ್ರೀತಿ...

ನಾನು ಕಾಣುವ ಜಗತ್ತು ...
ರಾಮನ ದೀಪಾವಳಿಗೆ ಮೀಸಲಲ್ಲ...
ಶಿವನ ಮೂರನೆಯ ಕಣ್ಣಿನ ಬೆಳಕು ಸದಾ ನನ್ನೊಂದಿಗೆ
ಹೇಗೆ ಹೇಳಲಿ..ನಾನು
ಮೀಸಲು ನಾ  ನಿನಗೆ ರಾಮ..
ಮನಸ್ಸ ಶಿವನಿಗೆ ನಾನೆಂದರೆ ಪಂಚ ಪ್ರಾಣ
ಅವನಿಲ್ಲದೆ ನಾನಿಲ್ಲ‌‌..‌.‌

ಇವಲ್ಲದರ ಮಧ್ಯೆ ಆತ ಕಾಡುತ್ತಾನೆ..
ಕಾಡಿ ಮಾಯವಾಗುತ್ತಾನೆ...‌
ಪ್ರೀತಿಸಲಾರೆ... ಕಾರಣ ರಾಮನಿಗೆ ನಾನು ಮೀಸಲು
ಶಿವನು ನನ್ನ ಕಾಯತ್ತಾನೆ....
ಆದರೆ ಆತನ ಕಾಟ ಖುಷಿ ಕೊಡುವುದು ಸುಳ್ಳೇ..‌.??
ಕೃಷ್ಣನ ಕಾಟವಿಲ್ಲದೆ ಬದುಕಿದ ಸ್ತ್ರೀ ಉಂಟೇ...
ಕೃಷ್ಣನಲ್ಲವೇ ಪ್ರೀತಿಯನ್ನ ಸಂಪೂರ್ಣವಾಗಿಸಿದಾತ...!!

ಮೂರನೇ ಜಾವಕ್ಕೇ ಇಂದು ಬೆಳಕು...
ದೀಪಾವಳಿಯ ಸಂಭ್ರಮ...
ಅಯೋಧ್ಯೆಯಲ್ಲಿ ರಾಮ...
ನರಕಾಸುರನ ಕೊಂದ ಕೃಷ್ಣನ ನೆನಪಿಗಾಗಿ...
ಮನಸಿನ ಗೂಡುದೀಪದ ತುಂಬಾ ಶಿವನ ಮೂರನೆಯ ಕಣ್ಣು...
ಇಂದೂ ದೀಪಾವ

Wednesday, 11 October 2017

ಗಾಂಧಿಯ ಗುಂಗಿನಲ್ಲಿ -೨( Gandhiya gunginalli -2)

ಅವತ್ತು ಉರಿ ಬಿಸಿಲು.... ಸಾಬರಮತಿ ಆಶ್ರಮಕ್ಕೆ ಕಾಲಿಟ್ಟಾಗ..‌ ಆಶ್ರಮದ ಒಳಗೆ ಕಾಲಿಡುತ್ತಿದ್ದಂತೆ ಮನದಲ್ಲಿ ಏನೋ ತುಂಬಿ ಬಂದ ಭಾವ... ಬ್ಯಾರಿಷ್ಟರ್ ಗಾಂಧಿಯ ಕಥೆ...ದಂಡಿ ಕುಟೀರದಲ್ಲಿ ಕಂಡಾಗ ಉಂಟಾದ ಕೆಚ್ಚು ಇಲ್ಲಿ ತಣಿದು ಸಾತ್ವಿಕ ಹೋರಾಟಕ್ಕೆ ಎಡೆ ಮಾಡಿಕೊಡುವ ಆ ಗಟ್ಟಿತನವನ್ನ ನೆನಪಿಸಿಕೊಂಡರೆ "ವ್ಹಾವ್" ಅನ್ನೋ ಉದ್ಗಾರ ತಾನೇ ತಾನಾಗಿ ಮೂಡಿ ಬರುವುದು...
  ಗಾಂಧಿಗಿದ್ದದ್ದು ಕನಸಲ್ಲ.‌.ಕೇವಲ ಛಲ, ಜಿದ್ದು ಅನ್ನಿಸುತ್ತೆ ನಿಜ... ಆದರೆ ಛಲ ಜಿದ್ದು ಕನಸಿಗಿಂತಲೂ ಮುಖ್ಯವಾಗಿ ಒಂದು ಹೋರಾಟ ಆಗಬೇಕಾದರೆ ಆ ಛಲಕ್ಕೆ ಜಿದ್ದಿಗೆ ಒಂದು ಪ್ರಮಾಣದಲ್ಲಿ ವ್ಯವಸ್ಥಿತ ಕೆಲಸಗಳನ್ನು ಮಾಡುವ ಬುದ್ದಿವಂತಿಕೆಯೂ ಬೇಕು...ಇಲ್ಲವಾದರೆ ಅದು ಕೇವಲ ಕೆಲವು ಉಗ್ರರಂತೆ ಕ್ಷಣ ಮಾತ್ರದ ದಂಗೆಯಾಗಿ ಉಳಿಯುತ್ತಿತ್ತು...
   ಬ್ಯಾರಿಷ್ಟರ್ ಗಾಂಧಿ...ನಮ್ಮ ನಿಮ್ಮಂತೆ ತನ್ನನ್ನ ಪ್ರೀತಿಸಿದ್ದು ನಿಜ.... ಆದರೆ ಆ ಸ್ವಪ್ರೀತಿ..ಸ್ವಾಭಿಮಾನ ಕೇವಲ ಸ್ವಂತದ್ದಾಗಿಸದೆ...ಅದು ಪ್ರತಿಯೊಬ್ಬರ ಹಕ್ಕು ಆ ಹಕ್ಕು ಸಿಗದವರಿಗಾಗಿ ಪ್ರತಿಭಟಿಸಬೇಕೆಂದು ಹೊರಟನಲ್ಲ ಅಲ್ಲಿ ಫಕೀರಪ್ಪನ ಉದಯವಾಯಿತು... ನಾನೊಬ್ಬನೇ ಮುಖ್ಯವಾಗದೆ...ನನಗಾದ ದುಃಖ,     ಅವಮಾನ..ತನ್ನಂತಿರುವ ಇತರರಿಗೂ ಆಗಬಾರದು ಅಂತ ಹೊರಡುವವ ನಾಯಕ..‌ತನ್ನ ಮಾನ ಅವಮಾನಗಳನ್ನ ಬೇರೆಯವರದಷ್ಟೇ ಸಮನಾಗಿ ಕಾಣುವವ ಫಕೀರ... ಕೇವಲ ಆ ಕ್ಷಣದ ಗೆಲುವನ್ನ ನಂಬದೇ ದೊಡ್ಡ ಗೆಲುವಿಗೆ ಸೋಲನ್ನ ನಗುತ್ತಾ ಸ್ವೀಕರಿಸುವ ಗಾಂಧಿ "ಸತ್ಯಾಗ್ರಹ" ಎಂಬಂತ ಹೊಸ ಯುದ್ಧ ಉಪಕರಣ ಸೃಷ್ಟಿಸಿದ್ದು ಸಾಧಾರಣ ಮಾತಸಗಿರಲಿಲ್ಲ...
    ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮೇಲಿನ ದಬ್ಬಳಿಕೆಗೆ ಯಾವುದೇ ಉದ್ರೇಕಗಳಿಲ್ಲದೆ...ನಗುತ್ತಾ ಎದುರಿಸಿದ ವ್ಯಕ್ತಿ ಜಗತ್ತಿಗೆ ಶಾಂತಿಯೂ ಯುದ್ಧ ಗೆಲ್ಲುವ ತಂತ್ರ ಅನ್ನುವ ಹೊಸ ಪರಿಕಲ್ಪನೆ ನೀಡುತ್ತಾನೆ...ಅಲ್ಲಿಯವರಿಂದ ಬೇಡವೆನಿಸಿಕೊಂಡೂ... ಅಪೇಕ್ಷೆ ಇಲ್ಲದೆ ತನ್ನ ಅಹಂ ಅನ್ನ ಮಧ್ಯೆ ತರಿಸದೆ.‌...ಕೇವಲ ಒಂದು ಸಾಮಾಜಿಕ ನ್ಯಾಯಕ್ಕಾಗಿ ಹೊಸ ಹೊಸ ಪ್ರಯೋಗ ಮಾಡುವ ಈತ ಸಾಮಾಜಿಕ ವಿಜ್ಞಾನಿ ಆಗಿ ಬೆಳೆಯುತ್ತಾನೆ... ಯಾರೂ ಯೋಚಿಸದ ಆಶ್ರಮಗಳಿಂದ ಹೊರ ಹೊಮ್ಮಬಹುದಾದ ಶಾಂತಿ, ಯುದ್ಧ ಕಹಳೆ ಎರಡನ್ನೂ ಒಳಗೊಂಡು ಮಾಡುವ ಪ್ರಯೋಗ ಇವತ್ತಿಗೆ ಬಹಳ ಸಣ್ಣದು ಅನ್ನಿಸಬಹುದು... ಆದರೆ ಆ ಯೋಚನೆಯ ತಳ ಬುಡವಿಲ್ಲದ ಆ ಕಾಲಕ್ಕೆ ಅದು ಹೊಸ ಆವಿಶ್ಕಾರವೇ...
    ತಂತ್ರಗಾರಿಕೆಯಿಂದ ಮಾತ್ರ ಯುದ್ಧ ಎಂದುಕೊಂಡ ಕಾಲದಲ್ಲಿ ಮಾತು ಕತೆ... ಜಿದ್ದು..ಛಲ ಇವೂ ಕೂಡ ಯುದ್ಧ ಕೌಶಲ್ಯಗಳಾಗಬಹುದು ಎಂದು ತೋರಿಸಿದ ಮಹತ್ಮನನ್ನ... ಬೇರೆಯವರಿಗೆ ಹೋಲಿಸುವುದು ಎಷ್ಟು ಸರಿ..???
     ಸ್ವಾತಂತ್ರ್ಯ ಹೋರಾಟಕ್ಕೆ ಸಣ್ಣ ವಯಸ್ಸಿನಲ್ಲಿ ಪ್ರಾಣ ಕೊಟ್ಟವರ ಸಂಖ್ಯೆ ಬಹಳ ಇದೆ... ಸ್ವಾತಂತ್ರ್ಯ ಚಳುವಳಿಯನ್ನ ಸಾವಿರಾರು ಯೋಧರು ನಡೆಸಿದರು..‌..ಗಾಂಧಿ ಮಾತ್ರವೇ ಸ್ವಾತಂತ್ರ್ಯ ತರಲಿಲ್ಲ ನಿಜ ಆದರೆ ಗಾಂಧಿ..‌ ತಂದಿದ್ದು ಹೊಸ ಯುದ್ಧ ಕೌಶಲ್ಯಗಳನ್ನ... ಹೊಸ ಜೀವನ ರೀತಿಗಳನ್ನ "ಅಹಿಂಸೆ", "ಸತ್ಯಾಗ್ರಹ" ಎಂಬ ಗೆಲುವಿನ ಮಂತ್ರಗಳನ್ನ...
    ಸ್ವಾತಂತ್ರ್ಯ ಕೇವಲ ಸಾವನ್ನ ಬೇಡುತ್ತೆ ಅಂದಾಗ ಒಂದಾಗದ ಯಾರೂ... ಬದುಕಿಯೂ ಸ್ವಾತಂತ್ರ್ಯ ಹೊರಾಟ ಮಾಡಬಹುದೆಂದಾಗ ಒಟ್ಟಾಗ ತೊಡಗಿದರು...ಪ್ರತಿ ಮನೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸ ತೊಡಗಿತು... ಇದು ಗಾಂಧಿಯ ವಿಶೇಷತೆ...
  ಗಾಂಧಿಯ ಬಗ್ಗೆ ಸಾವಿರಾರು ಟೀಕೆ ಟಿಪ್ಪಣಿಗಳನ್ನು ಕೇಳಬಹುದು...ಅದೇ ಆ ವ್ಯಕ್ತಿಯ ವಿಶೇಷತೆ...ಎಲ್ಲದಕ್ಕೂ ತೆರೆದುಕೊಳ್ಳುವ ಮುಕ್ತತೆ... ಇದು ದೇಶದ ಯಾವ ನಾಯಕನೂ ತನ್ನೊಳಗೆ  ಪಡೆಯದ ಮುಕ್ತತೆ... ತನ್ನನ್ನ ಎಲ್ಲರೆದುರು...ತನ್ನ ನ್ಯೂನತೆಯೊಂದಿಗೇ ಬತ್ತಲಾಗಿಸುವುದು ಮಹತ್ಮರಿಂದ ಮಾತ್ರ ಸಾಧ್ಯ... ಎಲ್ಲರೂ ತಮ್ಮ ಒಳ್ಳೆಯತನವನ್ನ ಬಿಚ್ಚಿಡಬಹುದು... ಕೆಟ್ಡದ್ದು ಅಲ್ಲಲ್ಲಿ ಇಣುಕಿದರೂ ಮುಚ್ಚಲು ಪ್ರಯತ್ನ ಮಾಡುತ್ತಾರೆ ಎಲ್ಲರೂ... ಈ ವ್ಯಕ್ತಿ ಬತ್ತಲಾಗಿ ನಿಂತ..ಮುಕ್ತತೆ ಎಲ್ಲರೊಡನೆ ಹಂಚಿ...ಟೀಕೆಗಳಿಗೆ ಗುರಿಯಾದ.... ಅದು ನಮ್ಮ ಗಾಂಧಿ...

ಇನ್ನೂ ಇದೆ..ಮಾಹತ್ಮನ ಮಾತು ಇಷ್ಟಕ್ಕೇ ಆದೀತೆ??.. ಇನ್ನಷ್ಟು ಆತನ ಬಗ್ಗೆ ತಿಳಿದುಕೊಳ್ಳೋಣ‌..ಪುನಃ ಓದೋಣ...
      
   

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...