ಇವತ್ಯಾಕೋ ಕನಸು ಗೂಡು ಕಟ್ಟಿದೆ....
ಮನದ ಮೌನದಲ್ಲಿ ನಿನ್ನ ನಗೆಯ ಕಾಂತಿ...
ಕಾಡಿದ್ದು ನಾನೋ...ನೀನೋ..
ಕಾಡಿಸಿದ್ದು ಮಾತ್ರ ಪ್ರೀತಿ....
ಗೂಡು ಕಟ್ಟಿದ ಕನಸಿನಲ್ಲಿ ಹೊಸ ಮೊರೆತ
ಬದುಕಿನ ರಾಮನಿಗೆ ನಾನು ಕಟ್ಟಿಟ್ಟವಳು
ಹೃದಯದ ಶಿವನಿಗೆ ನನ್ನ ಮನಸ್ಸ ಅರ್ಪಿಸಿದರೆ
ಕಾಣದ ಕತ್ತಲ್ಲಲ್ಲಿ ನಿಟ್ಟುಸಿರು ಯಾಕೆ???
ಹುಟ್ಟು ನೂರಾದೀತು... ಕನಸು ಪುನಃ ಒಡೆದೀತು...
ಚೆಲುವ,ಚೆನ್ನಿಗ ಕೃಷ್ಣ: ಹೊಸ ಕನಸ ಕೊಡುತ್ತಾನೆ
ಕೊಟ್ಟವನೇ ಅಲ್ಲಿಂದ ಮಾಯ ಆತ...
ನಾನೂ ನನ್ನ ಶಿವ... ಗಣಗಳ ಮಧ್ಯೆ ಹುಡುಕುತ್ತೇವೆ...
ಬೂದಿಯಲ್ಲೂ ಬದುಕನ್ನ...
ರಾಮ ಬಂದಾಗ ದೀಪಾವಳಿ..ಸಡಗರ ನೂರು ತರಹ
ಬೂದಿಗೆ, ಶಿವನಿಗೆ ಕತ್ತಲೆಯೇ ಪ್ರೀತಿ...
ನಾನು ಕಾಣುವ ಜಗತ್ತು ...
ರಾಮನ ದೀಪಾವಳಿಗೆ ಮೀಸಲಲ್ಲ...
ಶಿವನ ಮೂರನೆಯ ಕಣ್ಣಿನ ಬೆಳಕು ಸದಾ ನನ್ನೊಂದಿಗೆ
ಹೇಗೆ ಹೇಳಲಿ..ನಾನು
ಮೀಸಲು ನಾ ನಿನಗೆ ರಾಮ..
ಮನಸ್ಸ ಶಿವನಿಗೆ ನಾನೆಂದರೆ ಪಂಚ ಪ್ರಾಣ
ಅವನಿಲ್ಲದೆ ನಾನಿಲ್ಲ...
ಇವಲ್ಲದರ ಮಧ್ಯೆ ಆತ ಕಾಡುತ್ತಾನೆ..
ಕಾಡಿ ಮಾಯವಾಗುತ್ತಾನೆ...
ಪ್ರೀತಿಸಲಾರೆ... ಕಾರಣ ರಾಮನಿಗೆ ನಾನು ಮೀಸಲು
ಶಿವನು ನನ್ನ ಕಾಯತ್ತಾನೆ....
ಆದರೆ ಆತನ ಕಾಟ ಖುಷಿ ಕೊಡುವುದು ಸುಳ್ಳೇ...??
ಕೃಷ್ಣನ ಕಾಟವಿಲ್ಲದೆ ಬದುಕಿದ ಸ್ತ್ರೀ ಉಂಟೇ...
ಕೃಷ್ಣನಲ್ಲವೇ ಪ್ರೀತಿಯನ್ನ ಸಂಪೂರ್ಣವಾಗಿಸಿದಾತ...!!
ಮೂರನೇ ಜಾವಕ್ಕೇ ಇಂದು ಬೆಳಕು...
ದೀಪಾವಳಿಯ ಸಂಭ್ರಮ...
ಅಯೋಧ್ಯೆಯಲ್ಲಿ ರಾಮ...
ನರಕಾಸುರನ ಕೊಂದ ಕೃಷ್ಣನ ನೆನಪಿಗಾಗಿ...
ಮನಸಿನ ಗೂಡುದೀಪದ ತುಂಬಾ ಶಿವನ ಮೂರನೆಯ ಕಣ್ಣು...
ಇಂದೂ ದೀಪಾವ
No comments:
Post a Comment