ಅವತ್ತು ಉರಿ ಬಿಸಿಲು.... ಸಾಬರಮತಿ ಆಶ್ರಮಕ್ಕೆ ಕಾಲಿಟ್ಟಾಗ.. ಆಶ್ರಮದ ಒಳಗೆ ಕಾಲಿಡುತ್ತಿದ್ದಂತೆ ಮನದಲ್ಲಿ ಏನೋ ತುಂಬಿ ಬಂದ ಭಾವ... ಬ್ಯಾರಿಷ್ಟರ್ ಗಾಂಧಿಯ ಕಥೆ...ದಂಡಿ ಕುಟೀರದಲ್ಲಿ ಕಂಡಾಗ ಉಂಟಾದ ಕೆಚ್ಚು ಇಲ್ಲಿ ತಣಿದು ಸಾತ್ವಿಕ ಹೋರಾಟಕ್ಕೆ ಎಡೆ ಮಾಡಿಕೊಡುವ ಆ ಗಟ್ಟಿತನವನ್ನ ನೆನಪಿಸಿಕೊಂಡರೆ "ವ್ಹಾವ್" ಅನ್ನೋ ಉದ್ಗಾರ ತಾನೇ ತಾನಾಗಿ ಮೂಡಿ ಬರುವುದು...
ಗಾಂಧಿಗಿದ್ದದ್ದು ಕನಸಲ್ಲ..ಕೇವಲ ಛಲ, ಜಿದ್ದು ಅನ್ನಿಸುತ್ತೆ ನಿಜ... ಆದರೆ ಛಲ ಜಿದ್ದು ಕನಸಿಗಿಂತಲೂ ಮುಖ್ಯವಾಗಿ ಒಂದು ಹೋರಾಟ ಆಗಬೇಕಾದರೆ ಆ ಛಲಕ್ಕೆ ಜಿದ್ದಿಗೆ ಒಂದು ಪ್ರಮಾಣದಲ್ಲಿ ವ್ಯವಸ್ಥಿತ ಕೆಲಸಗಳನ್ನು ಮಾಡುವ ಬುದ್ದಿವಂತಿಕೆಯೂ ಬೇಕು...ಇಲ್ಲವಾದರೆ ಅದು ಕೇವಲ ಕೆಲವು ಉಗ್ರರಂತೆ ಕ್ಷಣ ಮಾತ್ರದ ದಂಗೆಯಾಗಿ ಉಳಿಯುತ್ತಿತ್ತು...
ಬ್ಯಾರಿಷ್ಟರ್ ಗಾಂಧಿ...ನಮ್ಮ ನಿಮ್ಮಂತೆ ತನ್ನನ್ನ ಪ್ರೀತಿಸಿದ್ದು ನಿಜ.... ಆದರೆ ಆ ಸ್ವಪ್ರೀತಿ..ಸ್ವಾಭಿಮಾನ ಕೇವಲ ಸ್ವಂತದ್ದಾಗಿಸದೆ...ಅದು ಪ್ರತಿಯೊಬ್ಬರ ಹಕ್ಕು ಆ ಹಕ್ಕು ಸಿಗದವರಿಗಾಗಿ ಪ್ರತಿಭಟಿಸಬೇಕೆಂದು ಹೊರಟನಲ್ಲ ಅಲ್ಲಿ ಫಕೀರಪ್ಪನ ಉದಯವಾಯಿತು... ನಾನೊಬ್ಬನೇ ಮುಖ್ಯವಾಗದೆ...ನನಗಾದ ದುಃಖ, ಅವಮಾನ..ತನ್ನಂತಿರುವ ಇತರರಿಗೂ ಆಗಬಾರದು ಅಂತ ಹೊರಡುವವ ನಾಯಕ..ತನ್ನ ಮಾನ ಅವಮಾನಗಳನ್ನ ಬೇರೆಯವರದಷ್ಟೇ ಸಮನಾಗಿ ಕಾಣುವವ ಫಕೀರ... ಕೇವಲ ಆ ಕ್ಷಣದ ಗೆಲುವನ್ನ ನಂಬದೇ ದೊಡ್ಡ ಗೆಲುವಿಗೆ ಸೋಲನ್ನ ನಗುತ್ತಾ ಸ್ವೀಕರಿಸುವ ಗಾಂಧಿ "ಸತ್ಯಾಗ್ರಹ" ಎಂಬಂತ ಹೊಸ ಯುದ್ಧ ಉಪಕರಣ ಸೃಷ್ಟಿಸಿದ್ದು ಸಾಧಾರಣ ಮಾತಸಗಿರಲಿಲ್ಲ...
ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮೇಲಿನ ದಬ್ಬಳಿಕೆಗೆ ಯಾವುದೇ ಉದ್ರೇಕಗಳಿಲ್ಲದೆ...ನಗುತ್ತಾ ಎದುರಿಸಿದ ವ್ಯಕ್ತಿ ಜಗತ್ತಿಗೆ ಶಾಂತಿಯೂ ಯುದ್ಧ ಗೆಲ್ಲುವ ತಂತ್ರ ಅನ್ನುವ ಹೊಸ ಪರಿಕಲ್ಪನೆ ನೀಡುತ್ತಾನೆ...ಅಲ್ಲಿಯವರಿಂದ ಬೇಡವೆನಿಸಿಕೊಂಡೂ... ಅಪೇಕ್ಷೆ ಇಲ್ಲದೆ ತನ್ನ ಅಹಂ ಅನ್ನ ಮಧ್ಯೆ ತರಿಸದೆ....ಕೇವಲ ಒಂದು ಸಾಮಾಜಿಕ ನ್ಯಾಯಕ್ಕಾಗಿ ಹೊಸ ಹೊಸ ಪ್ರಯೋಗ ಮಾಡುವ ಈತ ಸಾಮಾಜಿಕ ವಿಜ್ಞಾನಿ ಆಗಿ ಬೆಳೆಯುತ್ತಾನೆ... ಯಾರೂ ಯೋಚಿಸದ ಆಶ್ರಮಗಳಿಂದ ಹೊರ ಹೊಮ್ಮಬಹುದಾದ ಶಾಂತಿ, ಯುದ್ಧ ಕಹಳೆ ಎರಡನ್ನೂ ಒಳಗೊಂಡು ಮಾಡುವ ಪ್ರಯೋಗ ಇವತ್ತಿಗೆ ಬಹಳ ಸಣ್ಣದು ಅನ್ನಿಸಬಹುದು... ಆದರೆ ಆ ಯೋಚನೆಯ ತಳ ಬುಡವಿಲ್ಲದ ಆ ಕಾಲಕ್ಕೆ ಅದು ಹೊಸ ಆವಿಶ್ಕಾರವೇ...
ತಂತ್ರಗಾರಿಕೆಯಿಂದ ಮಾತ್ರ ಯುದ್ಧ ಎಂದುಕೊಂಡ ಕಾಲದಲ್ಲಿ ಮಾತು ಕತೆ... ಜಿದ್ದು..ಛಲ ಇವೂ ಕೂಡ ಯುದ್ಧ ಕೌಶಲ್ಯಗಳಾಗಬಹುದು ಎಂದು ತೋರಿಸಿದ ಮಹತ್ಮನನ್ನ... ಬೇರೆಯವರಿಗೆ ಹೋಲಿಸುವುದು ಎಷ್ಟು ಸರಿ..???
ಸ್ವಾತಂತ್ರ್ಯ ಹೋರಾಟಕ್ಕೆ ಸಣ್ಣ ವಯಸ್ಸಿನಲ್ಲಿ ಪ್ರಾಣ ಕೊಟ್ಟವರ ಸಂಖ್ಯೆ ಬಹಳ ಇದೆ... ಸ್ವಾತಂತ್ರ್ಯ ಚಳುವಳಿಯನ್ನ ಸಾವಿರಾರು ಯೋಧರು ನಡೆಸಿದರು....ಗಾಂಧಿ ಮಾತ್ರವೇ ಸ್ವಾತಂತ್ರ್ಯ ತರಲಿಲ್ಲ ನಿಜ ಆದರೆ ಗಾಂಧಿ.. ತಂದಿದ್ದು ಹೊಸ ಯುದ್ಧ ಕೌಶಲ್ಯಗಳನ್ನ... ಹೊಸ ಜೀವನ ರೀತಿಗಳನ್ನ "ಅಹಿಂಸೆ", "ಸತ್ಯಾಗ್ರಹ" ಎಂಬ ಗೆಲುವಿನ ಮಂತ್ರಗಳನ್ನ...
ಸ್ವಾತಂತ್ರ್ಯ ಕೇವಲ ಸಾವನ್ನ ಬೇಡುತ್ತೆ ಅಂದಾಗ ಒಂದಾಗದ ಯಾರೂ... ಬದುಕಿಯೂ ಸ್ವಾತಂತ್ರ್ಯ ಹೊರಾಟ ಮಾಡಬಹುದೆಂದಾಗ ಒಟ್ಟಾಗ ತೊಡಗಿದರು...ಪ್ರತಿ ಮನೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸ ತೊಡಗಿತು... ಇದು ಗಾಂಧಿಯ ವಿಶೇಷತೆ...
ಗಾಂಧಿಯ ಬಗ್ಗೆ ಸಾವಿರಾರು ಟೀಕೆ ಟಿಪ್ಪಣಿಗಳನ್ನು ಕೇಳಬಹುದು...ಅದೇ ಆ ವ್ಯಕ್ತಿಯ ವಿಶೇಷತೆ...ಎಲ್ಲದಕ್ಕೂ ತೆರೆದುಕೊಳ್ಳುವ ಮುಕ್ತತೆ... ಇದು ದೇಶದ ಯಾವ ನಾಯಕನೂ ತನ್ನೊಳಗೆ ಪಡೆಯದ ಮುಕ್ತತೆ... ತನ್ನನ್ನ ಎಲ್ಲರೆದುರು...ತನ್ನ ನ್ಯೂನತೆಯೊಂದಿಗೇ ಬತ್ತಲಾಗಿಸುವುದು ಮಹತ್ಮರಿಂದ ಮಾತ್ರ ಸಾಧ್ಯ... ಎಲ್ಲರೂ ತಮ್ಮ ಒಳ್ಳೆಯತನವನ್ನ ಬಿಚ್ಚಿಡಬಹುದು... ಕೆಟ್ಡದ್ದು ಅಲ್ಲಲ್ಲಿ ಇಣುಕಿದರೂ ಮುಚ್ಚಲು ಪ್ರಯತ್ನ ಮಾಡುತ್ತಾರೆ ಎಲ್ಲರೂ... ಈ ವ್ಯಕ್ತಿ ಬತ್ತಲಾಗಿ ನಿಂತ..ಮುಕ್ತತೆ ಎಲ್ಲರೊಡನೆ ಹಂಚಿ...ಟೀಕೆಗಳಿಗೆ ಗುರಿಯಾದ.... ಅದು ನಮ್ಮ ಗಾಂಧಿ...
ಇನ್ನೂ ಇದೆ..ಮಾಹತ್ಮನ ಮಾತು ಇಷ್ಟಕ್ಕೇ ಆದೀತೆ??.. ಇನ್ನಷ್ಟು ಆತನ ಬಗ್ಗೆ ತಿಳಿದುಕೊಳ್ಳೋಣ..ಪುನಃ ಓದೋಣ...

No comments:
Post a Comment