Friday, 24 November 2017

ಸಾವು ಬದುಕಿನ ನಡುವೆ ( Savu Badukina naduve)

ಸಾವು ಬದುಕಿನ ನಡುವೆ...ಕನಸು ವಾಸ್ತವದೊಂದಿಗೆ ಹೊಯ್ಯದಾಡುವ ಮನಗಳು ಗಂಡು ಹೆಣ್ಣಿನದೇ?

ಸಾವಿನಲ್ಲೂ ಸುಖವಿದೆ
ಸತ್ತು ಬದುಕುವ ಪ್ರೀತಿಗೆ ಅದರದೇ ಕಂಪು
ಸಾವಿನ ಸುಖ... ಹೃದಯದಲ್ಲಿ ಉಳಿದು ಹೋಗುವ ಸುಖ... ಇದು ಸತ್ಯವಾಗುವುದು ಹೆಣ್ಣಿಗೋ ಹೆಣ್ಣಿನೊಳಗಿನ ತಾಯಿಗೋ.. ಅಂತೂ ಸಾವೂ ಸುಖವಾಗುವ ಕನಸು ಮಾತ್ರ ಆಕೆಗೆ ಸದಾ

 ನೀನು ಸಾವಿನಾಚೆಯ ಮೌನ
ಬೆಳಕಿಯಾಚೆಯ ಆ ಬೆಳಕು
ದಟ್ಟ ಉಸಿರಿಗೆ ಪುಟಿದೇಳುವ
ಕೂದಲಿನ ನವಿರು ನೀನು..ಎಂದು ಕನಸುಗಳನ್ನ ಹೆಣ್ಣಿಗೆ ಕೊಡುವ ಉತ್ತಮ ಜೀವಿಗೆ ಸಾವಿನ ಸುಖದ ಅರಿವಾದರೂ ಇದೆಯೇ????

ಬದುಕಿನುದ್ದಕ್ಕೂ ಸಾವಿನ ಚಿಂತೆಯಲ್ಲಿ ಕಳೆಯುವುದು ಗಂಡಿಗೆ ಅನಿವಾರ್ಯವೋ.. ಅಥವಾ ಸಾವಿನಲ್ಲೂ ಬದುಕ ಕಲಿಸಿ ಅಂತರ್ಗಂಗೆಯಾಗುವ ಕಲೆ ಬರೀ ಹೆಣ್ಣಿಗೋ.. ಅಂತೂ ಸಾವಿನ ಚಿಂತೆ ಗಂಡಿಗಾದರೆ...ಸಾವಿನ ಕನಸು ಹೆಣ್ಣಿಗೆ..
ಬದುಕಿನಲ್ಲಿ ಸಾವ ಕಾಣುವುದು ಗಂಡಸಿನ ಅಹಂ..
ಸಾವಿನಲ್ಲಿ ಬದುಕು ಹುಡುಕುವುದು ಹೆಣ್ಣಿನ ಅಂತಃಕರಣ

ಅಷ್ಟು ಕನಸು ಕಂಡರೂ ಎಲ್ಲಾ ಕನಸಿನ ಮಾತು ಕಟು ವಾಸ್ತವದಲ್ಲಿ ಕೊನೆಯಾಗುವುದರ ಹಿಂದೆ ಬದುಕಿನ ಮರ್ಮ ಅಡಗಿದೆಯೇ

 ಬದುಕಿನ ವಾಸ್ತವ ಇರುವುದೇ ಕನಸು ಕಾಣುವ ವಾಸ್ತವದಲ್ಲಿ...
ಹೆಣ್ಣು ಬಯಸುವ ಪ್ರೀತಿ ಕೃಷ್ಣನ ಕನವರಿಕೆಯಂತಾದರೆ..
ಗಂಡು ಬದುಕುವ ನೀತಿ ರಾಮನಂತೆ..ವಾಸ್ತವತೆಯ ಪ್ರತೀಕ..... ಅದಕ್ಕೆಲ್ಲಾ ಒಂದು ಚೌಕಟ್ಟು...
 ಯುಗಗಳಿಂದ ಹೆಣ್ಣು ಕಾಯುತ್ತಾಳೆ ಭವಿಷ್ಯವನ್ನು
 ಸಾವಿನಾಚೆ ಮೌನವಿಲ್ಲದ.. ಬದುಕಿಗೆ
 ಬೆಳಕು ಕಾಣದ ಜಗವೇ ಇಲ್ಲ‌..ಅಂತೆಯೇ ಎಲ್ಲರೊಳಗೂ
ಉಸಿರು ಸದಾ ಹೊಮ್ಮುತ್ತಿರುತ್ತದೆ...
ಕೈಬೆರಳುಗಳ ಮಧ್ಯೆಯ ನವಿರಿನಂತೆ....
ಹೆಣ್ಣು ಬದುಕೆಂದು ತಿಳಿವ ಗಂಡಿಗೆ ಸಾವಿಲ್ಲ

Sunday, 12 November 2017

Indoo‌ Deepavali- upasamharada mathu.. ( ಇಂದೂ ದೀಪಾವಳಿ ಉಪಸಂಹಾರದ ಮಾತು)

ಇಂದೂ ದೀಪಾವಳಿಗೆ... ಭಾಷ್ಯ ಬರೆಯಹೊರಟ್ಟದ್ದೇ ಕವಿತೆಯಾದಾಗ.....

ಶಿವರಾಮಕೃಷ್ಣ ನಾನು ....ಬೆಳಕು ಮಾತ್ರ ಕಂಡೆನಾದರೆ ಬೆಳಕು ನನ್ನದಾಗುವುದೋ ಗಂಡಿನ ಮಾತು

 ಬೆಳಕಿಗೆ ಹೆಸರಿಲ್ಲ... ಅದು ಯಾರದ್ದೂ ಆಗಬಹುದು.. ನನ್ನದು ಎಂಬ ಮೀಸಲು ಕೇಳಲು ನೀನ್ಯಾರು ರಾಮ??..ಈಕೆಯೋ ಕಾಡ ಹೆಣ್ಣು, ಕೈಅಂಚಿಗೆ ಸಿಗದ ಜಿಂಕೆ

 ಅದು ಬರಿ ಬೆಳಗಲ್ಲೋ ಹೆಣ್ಣೇ... ಕಾಡುವ ಕನಸ ಬೆಳಗು.. ನನ್ನದಾಗಬಾರದೆಂಬ ಹಠ ನಿನಗ್ಯಾಕೋ ಅನ್ನುತ್ತಾನೆ ಆತ ಸುಸಂಸ್ಕೃತ...

 ಬೆಳಕಿನೊಳಗೇ ಬದುಕು ಕಟ್ಟಿಕೊಂಡ ನಿನ್ನ ತಪ್ಪಿಗೆ ನಾನ್ಯಾಕೆ ನಲುಗಲಿ... ನನಗೆ ಬೂದಿಯಲ್ಲೂ ಕತ್ತಲಲ್ಲೂ ಬದುಕಿದೆ.... ಕಠಿಣತೆಗೆ ಇನ್ನೊಂದು ಹೆಸರು ಕಾಳಿ... ಅದು ಆಕೆ..

 ನೀನು ಬೆಳಗನ್ನು ನನ್ನಲ್ಲೇ ಬಿಟ್ಟು ಕತ್ತಲೆಯ ದಾರಿ ಹಿಡಿದಿರುವೆ
ನೀನು ಈಗ ಬದುಕ್ಕುತ್ತೇನೆ ಎಂದು ಕೊಂಡಿರುವುದು ನನ್ನನ್ನೇ ಸುಟ್ಟ ನಿನ್ನ ಬೆಳಕಿನ ಬೂದಿಯಲ್ಲಿ
ನಿನ್ನ  ಬೆಳಕು ನನ್ನ ಸಂಪೂರ್ಣ ಭಸ್ಮವಾಗಿಸುವ  ಮುನ್ನ ತಂಪೆರೆಯ ಬಾ ...
ಕತ್ತಲೆ ದಾರಿ ದೂರ.... ಹೋಗಬೇಡ ಅಲ್ಲಿಗೆ ತಿರುಗಿದರೆ ಕಾಣುವುದು ನನ್ನ ಕೈ ಚಾಚುವಿಕೆ... ಅಲ್ಲಿದ್ದದ್ದು ಗಂಡಸಿನ ಅಹಂ ಅಲ್ಲ.. ಜಗತ್ತನ್ನ ಜಗದೊಡತಿಯನ್ನ ಪ್ರೀತಿಸುವ ಪರಿ...

ಬೆಳಕು ಕರಕಲಾಗಿಸುವ ಶಿವನು ನನ್ನ ಸದಾ ಕಾಯುವಂತೆ ಮಾಡಿದ ರಾಮ ನೀನಲ್ಲವೇ..
ಶಿವನು ನನ್ನೊಳಗೆ ಹೊಕ್ಕು ಮೂರನೆಯ ಕಣ್ಣಿನ ಬೆಳಕ ಹೊರಹೊಮ್ಮಿಸಿದರೆ..
ಗೊತ್ತು ನೀನು ಭಸ್ಮ ಎಂದು..ಆದರೆ ತಂಪೆರೆಯಲು..ನಾನೆಲ್ಲಿಂದ ಹುಟ್ಟಲಿ..
ಗಂಗೆ ನಡೆದಾಯ್ತು ಭುವಿಗೆ..
ಓಡಿ ಹೋದ ಕೃಷ್ಣ ಬರಲಿ ತಾಳು..
ಅವನ ತಂಪು ನನ್ನ ಜೀವಿತದ ಜೊತೆ ನಿನ್ನ ಭಸ್ಮವ ತಂಪರೆದೀತು..
ರಾಮಾsssss... ಮೂರನೆಯ ಕಣ್ಣಿನ ಬೆಳಕ ಹೊತಸೂಸುವ ಶಿವ ಹೊಕ್ಕ ಮನೆ ಸ್ಮಶಾನ...
ಆದರೆ  ಅಲ್ಲೂ ಬದುಕಿದೆ... ಈಕೆ ಕಾಡ ಹೆಣ್ಣಲ್ಲ.. ಹಠದ ಕಾಳಿಯೂ ಅಲ್ಲ, ಅದಕ್ಕೂ ಮೀರಿ ಜಗದೋದ್ಧಾರಕನ ಪಡೆದ ತಾಯಿ ಈಗ...

 ದೀಪದ ಸುತ್ತಲೇ ಕತ್ತಲು ..
ನಿನ್ನ ನೀನರಿಯದೆ ರಾಮ , ಕೃಷ್ಣ , ಗಂಗೆಯರ ಸುತ್ತ ಬದುಕ ಕಟ್ಟಬೇಡ ಹೆಣ್ಣೇ
ನಿನ್ನ ಸ್ಪೂರ್ತಿಯ ಛಾಯೆ ವಿಸ್ತರಿಸೆ
ನಿನಗ್ಯಾರು ಸಾಟಿ
ವಿಶ್ವವೇ ಎದ್ದು ನರ್ತಿಸೀತು ನಿನ್ನ ಮುಂದೆ... ಆತ ವಿಶ್ವ ಮಾನವ...ಜಗದ ಜವಾಬ್ದಾರಿ ಹೊತ್ತ ದೇವರಲ್ಲ ಬದಲಿಗೆ ತಾಯಿಯ ಒಡಲಿನಿಂದ ಹೊರಬರಲಾರದ ಕನಸಿನ ಒಡೆಯ...

 ದೀಪವಲ್ಲ ರಾಮ..
ನಾನು ಬೆಳಕು...ದೀಪ ತರುವ ಬೆಳಕು
ನಿನ್ನ ಅಯೋಧ್ಯೆಯ ಬೆಳಗುವ ಬೆಳಕು...
ನನಗಿಲ್ಲ ಛಾಯೆ...
ಪ್ರಕರತೆ ಮಾತ್ರ ನನ್ನ ಸತ್ಯ...
ರಾಮನಿಲ್ಲದೆ ಅಯೋಧ್ಯೆಯಲ್ಲಿ ದಿಪವಿಲ್ಲ ಬೆಳಕೂ ಇಲ್ಲ‌‌...
ಶಿವನಿಲ್ಲದ ಸ್ಮಶಾನಕ್ಕೆ ದಿವ್ಯ ಮೌನ...
ಕೃಷ್ಣನಂತಹ ಕಚಕುಳಿ ಇಲ್ಲದೆ ನನ್ನ ನಗುವಾದರೂ ಚಲ್ಲೀತೆ???
ಬೆಳಕಿಗೆ ಬೇಕು ನೀವೆಲ್ಲಾ...
ನೀವು ನನ್ನವರಾದಾಗ ವಿಶ್ವಮಾನ್ಯೆ ನಾನು.... ಕಾಡ ಹೆಣ್ಣಾದರೂ, ತಾಯಿ..ಅದಕ್ಕೂ ಮಿಗಿಲಾಗಿ ಹೆಣ್ಣಾಕೆ.. ಗಂಡಸನ್ನ ದ್ವೇಶಿಸಲು ಸಾಧ್ಯವೇ... ಸಿಟ್ಟಾಕೆಗೆ ಅಷ್ಟೇ...

ಗುಟ್ಟೊಂದ ಹೇಳುವೆ ಕೇಳು
ನನ್ನೊಳಗಿನ ರಾಮ ಕಾಣೆಯಾದದ್ದು
ಸೀತೆಯ ಬೂದಿಯಲ್ಲಿ
ನೀನೋ ಶಿವನ ಮೂರನೆ ಕಣ್ಣಿನ ಗೆಳತಿ
ಭಸ್ಮವಾಗದಿದ್ದೀತೆ ಅದಕ್ಕೂ
ಕೃಷ್ಣನ ಚಾಳಿ
ಕೊನೆಗೂ ಹರಿದಿದ್ದೇ ನೀನು
ಬೆಳಕಿನ ಗಂಗೆಯಾಗಿ
ದಟ್ಟ ಕಾನನದಲ್ಲೆಲ್ಲಾ
ಎಲ್ಲೆಲ್ಲೂ ಹಸಿರಿನ ಸ್ಪರ್ಶ
ಹೊಸ ಚಿಗುರು...
ಕವಿಯಾದ ಗಂಡಿಗೆ ಹೆಣ್ಣು ಸ್ಪರ್ತಿಯ ಜೊತೆಗೆ ಆಪ್ತಳೂ ಹೌದು.. ಹೆಣ್ಣಿಲ್ಲದ ವ್ಯಕ್ತಿ ಕವಿಯಾದನೇ????...ಕವಿ ಆತ

ಕೃಷ್ಣ ನನ್ನಲ್ಲಿ ಲೀನಾವಾದಾರೆ
ಶಿವನ ಮೂರನೆಯ ಕಣ್ಣೂ ಮುಚ್ಚಿತು..
ನಾನಾಗುವೆ ಆಗ ಹೊಸ ಚಿಗುರು..
ಕೃಷ್ಣ ನನ್ನೊಳಗಿನ ಲವಲವಿಕೆ ಆದಾಗ...
ಬೂದಿಯಾದ ರಾಮನ ಕನಸಿಗೇ ಹೊಸ ಬೆಳಕು ನಾನು
ಬೆಳಕಿನ ಗಂಗೆ ...ಶಿವನ ಗಂಗೆಯಾದಾಗ...
ಸ್ಮಶಾನದಲ್ಲೂ ಹೊಸ ಜೀವ..
ಇನ್ನು ಸಾವಿಲ್ಲ...ಬದುಕಿಗಿದೆ ಗಂಗೆಯ ಸುರಪಾನ....
ಬರುತ್ತಿದೆ ಹೊಸ ದೀಪಾವಳಿ.... ಆಕೆಗೆ ದೀಪಾವಳಿಯ ಕನಸು...

ಗಂಡಿನ ಜೊತೆಗಿನ ಕನಸು ಹೊಸತನದ ಬಿಸುಪು ಇವಿಲ್ಲದೆ ಹೆಣ್ಣು ಹೆಣ್ಣದಾಳೇ...ಸಿಟ್ಟಾದ ಹೆಣ್ಣೂ ಗಂಡಿನ ಪ್ರೀತಿಗೇ ಕರಗುವುದು...

ಸೂಚನೆ- ನನ್ನ "ಇಂದೂ ದೀಪಾವಳಿ", ಮೆಚ್ಚಿ..ಉಪಸಂಹಾರದ ಮಾತು ಮುಂದುವರೆಸಿದ್ದು...ನನ್ನ ಆತ್ಮೀಯ ಶಿಕ್ಷಕರಾದ..ನನ್ನ ಕನ್ಬಡ ಪ್ರೀತಿಗೆ ಗುರುಗಳಾದ ಮೋಹನ್ ಭಂಕೇಶ್ವರರು.. ಅವರು ಸಂವೇದನೆಯ ಗಂಡಾಗಿ ಬರೆದಾಗ... ಉಚ್ಚತನದ ಹಂಬಲದಲ್ಲಿ.. ಕಾಡುವ ಹೆಣ್ಣಾಗಿದ್ದು ನನ್ನ ಸೌಭಾಗ್ಯ..
ಇದು ಮೋಹನ್ ಭಂಕೇಶ್ವರರು ಮತ್ತು ರಶ್ಮಿ ಕುಂದಾಪುರರ ಉಪಸಂಹಾರ.. ಇಂದೂ ದೀಪಾವಳಿ ಕವಿತೆಗೆ...

Wednesday, 1 November 2017

Kanasa Mathu....Manasa Nadige (ಕನಸ ಮಾತು...ಮನಸ ನಡಿಗೆ...)

ಕನಸು ಮಾತಾಡ ಬಯಸಿತ್ತು ಮನಸ್ಸಿನೊಂದಿಗೆ...
ಮನಸ್ಸಿನ ಹತಾಷೆ ಕನಸ್ಸನ್ನ ಬಡಿದೆಚ್ಚರಿಸಿತ್ತೋ ಇಲ್ಲ ಮನಸ್ಸೇ ಬದಲಾಯಿತೋ....

ಮನಸ್ಸು ಮುಚ್ಚಿಡಬಹುದು ಮನದ ಭಾವವನ್ನು
ಕಣ್ಣು ಮುಚ್ಚಿಟ್ಟೀತೇ .....
ಹಾಗೆ ಅಡಗಿಸಿ ರೆಪ್ಪೆ ಮುಚ್ಚಿದರು ಕಣ್ಣೀರ ಹನಿಯೊಂದು ಜಾರದಿದ್ದೀತೇ ....
ಹಾಗೆ ಕೆನ್ನೆ ಮೇಲೆ ಇಳಿಯುವ ಒಂದೊಂದು ಹನಿಯು ನೀರಲ್ಲ
ಎದೆಯೊಳೆಗಿನ ಭಾವವದು .....
ಹಗುರಾಗು ಅನ್ನುತ್ತಿದೆ ಕನಸು..

 ಮನದ ಬಾವವೀಗ ಎಷ್ಟು ಜಡಗಟ್ಟಿದೆಗೊತ್ತಾ..‌
ಕಣ್ಣುಗಳಲ್ಲಿನ ಜೀವಂತಿಕೆಯೇ ಕಣ್ಮರೆಯಾಗಿದೆ...
ಕಣ್ಣೀರ ಸಲೆ ಬತ್ತಿ ವರ್ಷಗಳೇ ಆದವು..
ಎದೆ ಬಡಿತ ಈಗಿರುವುದು ಪ್ರಾಣವಾಯುವಿಗೆ
 ಜೀವಿಸುವ ಆಶಯವೇ ಬತ್ತಿಹೋಗಿದೆ...
ಅವನಿಲ್ಲದ ಉಸಿರಿಗೆ ಬಿಸುಪಿದೆಯೇ
ಕನಸುಗಳಲ್ಲೆ ಬಣ್ಣ ಕಳೆದುಕೊಂಡು ಮಲಗಿದೆ...
ಯಾಂತ್ರಿಕತೆ ನನ್ನ ಹೊತ್ತು ನಡೆದದ್ದು ಅವನು ನನ್ನೊಳೆಗೆ ಸತ್ತ ಮರುಕ್ಷಣದಿಂದ...
ಮನಸ್ಸು ನಿಟ್ಟುಸಿರಿಡುತ್ತಿದೆ...

ಅವನೆಂಬ ಕನಸ್ಸಿಗೆ ಇಲ್ಲದ ಚಿಂತೆ..ನಿನಗ್ಯಾಕೆ ಮನವೇ
ನಾನು ಬಂದಿದ್ದೇನೆ....ಹೊಸತನದ ಅಲೆಯಲ್ಲಿ..
ಆತನ ನೆನಪು ನಿನ್ನ ನುಣುಪಿನ ಕಂಬನಿ ಆಗಿ...
ನಿನ್ನೊಳಗಿನ ಮಿತಿಗೆ ಅಂತ್ಯ ಕಾಣಲಿ...
ಮನದ ಭಾವವನ್ನ ಹೊಳೆಯುವ ಕಣ್ಣು ಹೊರಹಾಕಿದರೆ...
ಜೀವಂತಿಕೆಗೆ ಕೊರತೆಯೇ???
ಎದೆಯ ಬಡಿತದ ಯಾಂತ್ರಿಕತೆಗೆ ನನ್ನನ್ನ ಜೋಡಿಸು ಗೆಳತಿ...
ಅಲ್ಲೋಲ ಕಲ್ಲೋಲವಾದೀತು...
ರಾತ್ರಿಯ ನೀರವತೆಯೂ ಹೊಸ ಹುರುಪು ತಂದೀತು...
ಕನಸ್ಸಿಗೆ ತುಂಬಾ ಆಶಯ...ಬದಲಾವಣೆಯ ಬಯಕೆ

 .... ನೀನು ಜೀವಸಲೆ ಆದರೆ ನಾನು ಹತಾಷೆ...ನನ್ನ ಹತಾಷೆಗೆ ಕನಸುಗಳ ಬಯಕೆ...ಇದೇ ಅಲ್ಲವೆ ಬದುಕಿನ ವೈಪರೀತ್ಯಗಳು???
ಮನಸ್ಸಿಗೆ ಇನ್ನೂ ಕಾಣದ ಸಂಶಯ...

ನಿನ್ನ ನಿದ್ದೆಗೆಟ್ಟ ಕಣ್ಣುಗಳಲ್ಲಿ ಬಯಕೆಯ ಕಾಮನೆ...
ಹತಾಷೆ ನೀನುಲಿದಿಟ್ಟ ಕರಾಳತನ...
ಕೆಂಪಾದ ಕೆನ್ನೆಗಳಲ್ಲಿ ನಾನು...
ನಿನ್ನ ಸುಕ್ಕಾದ ತುಟಿಗಳಲ್ಲಿ ಹೊಸ ಭಾವ...
ಇವೆಲ್ಲಾ ಸುಳ್ಳೆಂದರೂ ಆಗಾಗ ಪಳ್ಳೆಂದು ಹೊರಬರುವ..
ಮನಸ್ಸಿನ ಕನ್ನಡಿ...ಕಂಬನಿ..ಹತಾಷೆಯನ್ನ ಮರೆತು ನಕ್ಕಿದ್ದು ಸುಳ್ಳೇ.......
ಬದುಕಿನ ವೈಪರೀತ್ಯಗಳನ್ನ ಬಿಡೇ ಗೆಳತಿ...
ಕುಂಟೆಬಿಲ್ಲೆ ಆಡಲು ವಯಸ್ಸೇಕೆ...
ಮೂರನೆಯ ಮನೆಯ ನನ್ನೆಡೆಗೆ ಹಾರಿ ಬಾ...

ನಿನ್ನ ಸೆಳತಕ್ಕಿಂತ ಹೆಚ್ಚಾದದ್ದು ಕುಂಟೆ ಬಿಲ್ಲೆ...
ಮೆರೆತ ಸಳೆತಗಳನ್ನ ವಯಸ್ಸಿನ ಏರಿತಗಳಲ್ಲಿ ಮರೆತೇ..
ನೀನು..ಕಾಡಿದ ಹೊಸ ಬದುಕಿಗಿಂತ..
ನೀನು..ನೆನಪಿಸಿದ ಹಳೆ ನೆನಪುಗಳಿಗೆ ಜೀವ ಉಂಟು..
ಹಾರುವ ಕನಸಿನಲ್ಲಿ ಹೊಳೆಯುವ ನೆನಪುಗಳು...
ನಾನು ಮರೆತದ್ದು‌...ನನ್ನನ್ನೋ (ಮನಸ್ಸನ್ನೊ) ಇಲ್ಲ
ನಿನ್ನನ್ನೋ (ಕನಸನ್ನೋ)...
ನೀನು ತಂದಿಟ್ಟ ನೆನಪಿನಲ್ಲಿ... ನಾನು ನೀನು ಒಂದಾದದ್ದು
ಹೊಸ ಹುರುಪೋ ಇಲ್ಲ ಹೊಸ ಕನಸೋ...

           ರಶ್ಮಿ ಕುಂದಾಪುರ ಮತ್ತು ಅಶ್ವಥಾ ಶೆಟ್ಟಿ
       (ಇಬ್ಬರು ಸ್ನೇಹಿತೆಯರ ಮಾತುಗಳು ಕವನವಾದ ಮನಸ್ಥಿತಿ)



ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...