Thursday, 29 June 2017

Yendu nannavaladeyo kanase!! ಎಂದು ನನ್ನವಳಾದೆಯೋ ಕನಸೇ!!

 ನಾ ಹಾಡಲು ನೀ ಆಡಬೇಕು.... ತೂಗಾಡುತಾ ತಾಳ ಹಾಕಬೇಕು....ಆತನ ಬಯಕೆ ತುಂಬಾ ಚಿಕ್ಕದ್ದು.

 ನೀ ಹಾಡಲು, ಮನ ತುಂಬಿ ಮಿಡಿಯಲು.. .
ಮನದಲ್ಲಿ ಮೌನ, ಅದರೆ ಕನಸಲ್ಲಿ ಸಂಚಲನ...
 ಹಾಡಿನ ಪರಿಯೋ.... ಪರಿಸರದ ಅನುಭೂತಿಯೋ..
ನಾನಾಗಬೇಕು ಕನಸ ಮೈದುಂಬಿ.. ತೂಗ್ಯಾಲೆ...ತುಂಬೆಲ್ಲ ಪಸರಿಸಿ.....
 ಹಾಡು ಗೆಳೆಯ ಅಂತಹ ಹಾಡನ್ನ....ಗೆಳತಿಯ ಹಾಡು ಮುಂದುವರಿಯಿತು..

 ಎಂತಹ ಮಾತಂದೆ ಗೆಳತಿ, ನನ್ನ ತುಂಬೆಲ್ಲ ನೀನೆ....ಆತ ಬಿಟ್ಟೂಬಿಡ

 ನಾನೆಷ್ಟರವಳು...ಆಕೆ ಚಿಪ್ಪಿನಿಂದ ಹೊರಬರಳು.

 ನಾನೆಷ್ಟರವಳು?!?! .........ಗೊತ್ತಗಾಲಿಲ್ಲ
 ನನ್ನ ಬದುಕಿನ ಬಂಡಿಯಲ್ಲಾ...ಆತನ ಆಸೆಯ ಕುದರೆಗೆ ಓಟದ ತೆವಲು

 ಅವರವರ ಬದುಕಿಗೆ, ಅದರದರದೇ ಓಟ....
 ಅಲ್ಲಲ್ಲೆ ಎಡತಾಕುವ ಬಳ್ಳಿ ‌...
ನಾನ್ಯವ ಎಡತಾಕುವಿಕೆಗೂ ಇಲ್ಲದವಳು..
 ನಿನ್ನ ಬದುಕಂತೂ ಕೇಳಲೇ ಬಾರದು
 ಅದು... ಹಾರುವ ಕುದುರೆ
 ಧೂಳಿನ ಮಧ್ಯದಲ್ಲಿ... ಅಲ್ಲೆಲ್ಲೋ...
ಎಡತಾಕುವಿಕೆಗೆ ನಾನಿಲ್ಲ, ಹಾರುವ ಕುದರೆ ನೀನು... ಓಡುವ ಬಂಡಿಗಳು ತಾಗುವುದಾದರೂ ಎಲ್ಲಿ ಹುಚ್ಚ..........
 ಗೆಳತಿಯ ಒರೆತ ಮುಂದುವರಿಯಿತು...

 ಅದು ಅವರವರ ಸ್ವಾತಂತ್ರ್ಯವು ಕೂಡ ಅಲ್ವೆ?
 ಬಯಸುವುದು ಸಹಜ..
ಪೃಕೃತಿಯನ್ನು ಬಯಸದ ಕವಿ, ಕವನ ಉಂಟೆ.... ಸ್ಪಂದಿಸುವುದು ಮಾತ್ರ ಅವರವರ ಆಯ್ಕೆ
ಪೃಕೃತಿಯನ್ನ ಒತ್ತಾಯಿಲಾದೀತೆ!! ಏನಂತೀಯಾ..ಆತ ಕೇಳಿಯೇ ಬಿಟ್ಟ

ಯಾರ ಬಯಕೆ.?? ನೀನೀಗ?😀😀... ನಗು ಗೆಳತಿಯದು

ನಿನ್ನ ಅಭಿಪ್ರಾಯ ಏನು? .ನಿನ್ನದೇ ವಿಷಯ ದಲ್ಲಿ...ಬಿಡಲೊಲ್ಲ ಆತ

 ನಾನ್ಯಾರ ಕನಸೂ ಕದಿಯಲಿಲ್ಲ ಗೆಳೆಯ...ಆಕೆಗೋ ಹೆದರಿಕೆ

 ನೀನಲ್ಲದೇ ಇನ್ಯಾರ ಮನ ಕಲಕಲಿ?!?
 ನನಗೋ ಪೃಕೃತಿಯ ಕನಸು, ನಿನ್ನ ಮನ ಬಿಟ್ಟು ಇನ್ಯಾವುದೂ ಕಚಗುಳಿ ನೀಡದೇ ಹುಡುಗಿ.‌..ಪುನಃ ಕನಲಿದ ಆತ

 ಬಯಕೆಯ ತೋಟದ ಹಣ್ಣುಗಳೆಲ್ಲ..ನಮ್ಮದಾಗದು...
ಆದರೆ ಬಯಸೋದು ತಪ್ಪಲ್ಲ ಅಲ್ಲವೇ ಅಲ್ಲ
ಬಯಕೆಯನ್ನು ಮೀರಿ ನಿಂತರೆ ಜೀವನೋತ್ಸಾಹ...ಎಲ್ಲಿದೆ ...ಪೃಕೃತಿ ಬಯಕೆಯಿಂದ ಬೇರಾದರೆ ವಸಂತ ಮೂಡೀತೆ?? ಬಿಸಿಲು, ಮಳೆಗಳಿಂದ ಜೀವಿಗಳ ಮುಗಳ್ನಗೆಗಳು ಉಳಿದಾವೇ?? ಬಯಕೆಯಿಂದ ಹುಡುಗಿ ಹೇಗೆ ಹೊರತಾದಳು.

 ವಾಹ್ಹ ಕ್ಯಾ ಬಾತ ಹೇ.. ಉದ್ಗಾರವದು...

 ಸರಿ...ಈಗೆಷ್ಟು ಬಯಕೆಗಳಿವೆ..ಸ್ಪಂದನಕ್ಕೆ ಕಾದು..ನಿನ್ನಲ್ಲಿ?.‌..ವಸಂತ ಬರಲು ಇನ್ನೂ ವರುಷ ಕಾಯಬೆಕಾದೀತು!! ಬಿಗುಮಾನದ ಗೆಳತಿ.

 ಇಷ್ಟು ಹೇಳಿದ ಮೇಲೆಯೂ ಮತ್ತೆ ಪ್ರಶ್ನೆ ಕೇಳಿದರೆ ಎನೆನ್ನಲಿಯೇ. ಹತಾಶನಾದ ಆತ....

ಕನಸು ಕಾಣುತ್ತಾ ಗೆಳತಿಯ ಮನ ಗೆಲ್ಲಲೇ... ಕಾಯುತ್ತಾಳಾಕೆ ಏನ್ನನ್ನ?!?! ಆತನಲ್ಲಿ ಗೊಂದಲ.. ಎಲ್ಲಾ ಗಂಡಿನಂತೆ...

ಪೃಕೃತಿ ಆಕೆ.. ಪುರಷ  ಆಕೆಯೊಳಗೆ ಲೀನವಾಗಿಸಿದಾಗ ಮಾತ್ರ ಅವನೊಳಗೆ ತಾನು ಇಳಿಯಬಲ್ಲಳು ...ತನ್ನತನದೊಂದಿಗೆ ಪೃಕೃತಿಯ ಸುವಾಸನೆ ಸೇರಿದಾಗಷ್ಟೇ ಪುರಷನ ಕನಸುಗಳನ್ನ ವಿಸ್ತರಿಸುವಳಾಕೆ....

ಪೃಕೃತಿ ಪುರುಷ ಒಂದಾಗಲು.. ಪುರಷನಲ್ಲಿರಬೇಕು ಬಯಕೆಯ ಹಪಹಪಿ.. ಕನಸುಗಳ  ಪೊಟ್ಟಣ..ಕರಗಿ ಒಂದಾಗುವ ಜೀವಂತಿಕೆ....

ಗೆಳತಿಗೆ ಆತ ಬೇಕು, ಪುರುಷನಿಲ್ಲದ ಪೃಕೃತಿ ಇದೆಯೇ... ಪೃಕೃತಿ ಆಕೆ ಆದರವನು ಸಂಪೂರ್ಣ ಪುರಷನಾದಾಗಷ್ಟೇ....ಆಕೆಯೊಳ ಸೇರಬಲ್ಲ‌‌‌....

Monday, 19 June 2017

Putta Prapanchada Prashnegalu (ಪುಟ್ಟ ಪ್ರಪಂಚದ ಪ್ರಶ್ನೆಗಳು..‌.)

ಸ್ವಲ್ಪ ಕಷ್ಟ ಕಣ್ರೀ..ನನ್ನಂತವರಿಗೆ..ಕರಾವಳಿಯ ವತಾವರಣದ ದೋಷವೋ..ಇಲ್ಲಾ ಹುಟ್ಟಿನಿಂದ ಬಂದ ದೋಷವೋ.. ಒಂದೋ ಮಳೆ ಇಲ್ಲಾ ಬಿಸಿಲು...ಇದು ಬಿಟ್ಟು ಇನ್ನೊಂದು ನನಗೆ ತಿಳಿದಿಲ್ಲ... ಮಳೆಯ ತಂಪಿನೊಂದಿಗೆ..ಕರಾವಳಿಯಲ್ಲಿ ಬಿಸಿಲು ಕಾಣಿಸಿದೆ...ಹಾಗೇ ಮನಸ್ಸಿನಲ್ಲೂ ಬಿಸಿಲು....

ಬಹಳ ದೊಡ್ಡ ವಿಷಯವೇನಲ್ಲ.. ನನ್ಯಾರು ದೇಶದ ಉದ್ಧಾರದ ಬಗ್ಗೆ ಮಾತಾಡಲು.. ನನ್ನದೆನಿದ್ದರೂ.‌‌‌.ಪುಟ್ಟ ಪ್ರಪಂಚ, ಇವತ್ತಿನ ಮಾತು..ಈ ಪುಟ್ಟ ಪ್ರಪಂಚದ್ದೇ.. ನನ್ನ ನಿಮ್ಮ ಮನೆಗಳಲ್ಲಿ ಓಡಾಡುವ ಈ ಪುಟ್ಟರದ್ದು....

ನಮಗೆಲ್ಲ"ನಾನು, ನನ್ನ ಮಗ/ಮಗಳು" ಬದ್ಧಿವಂತರು.. ಒಳ್ಳೆಯವರು.. ಆದರೆ ಈಗಿನ ಪ್ರಪಂಚ, ಸಮಾಜ ..‌ಅವಿವೇಕಿ ಸಮಾಜ,.. ನಾವುಗಳಿಲ್ಲದ ಸಮಾಜವುಂಟೇ?!?!?  ಇದ್ಯಾರನ್ನ ದೂಷಿಸ ಹೊರಟ್ಟಿದ್ದು ನಾವು??..

ಸಮಾಜೀಕರಣ, ನಾಗರೀಕರಣ, ಬದಲಾವಣೆಯ ಗಾಳಿ, ಬೆಳವಣಿಗೆ.‌‌...ಇವೆಲ್ಲ ನಮ್ಮ ಕಾಲದವರೆಗೂ ಬೇಕಿತ್ತು..‌ ಈಗ ನೋಡಿ..."ಎಂತಹ ಕೆಟ್ಟ ಬೆಳವಣಿಗೆ, ನಾಗರೀಕರಣ ನಮ್ಮ ಮಕ್ಕಳನ್ನು ತಿಂದು ಹಾಕುತ್ತಿದೆ"  ನಾವೆಲ್ಲ ಅಡುವ ಮಾತೇ ... ಹಾಗಾದರೆ ನಮ್ಮ ಮನಸ್ಸಿನ ಭೃಮೆಯ ಮೇಲಷ್ಟೆ ನಾಗರೀಕರಣ, ಸಮಾಜೀಕರಣ ಬೇಕೆ??!? ..ನಾವು ಯೋಚಿಸಲಾಗದ್ದೆಲ್ಲ ಕೆಟ್ಟದ್ದೇ???

ಕಳೆದು ಹೋಗುತ್ತಿರುವ ನಮ್ಮ ಮನಸ್ಸಿನಾದಾರದ ಸೃಜನಶೀಲತೆ ಬಗ್ಗೆ, ಕಳೆದು ಹೋಗುತ್ತಿರುವ ನಾವಂದುಕೊಂಡ ಶಿಸ್ತಿನ ಬಗ್ಗೆ‌..‌ ನಮಗೆ ನಾವೇ ಇಲ್ಲ ನಮ್ಮ ಹಿರಿಯರು ಹಾಕಿದ ಸಾಮಾಜಿಕ ಚೌಕಟ್ಟು ಮುರಿದು ಬೀಳುತ್ತಿರುವ ಬಗ್ಗೆ ನಮಗೆಲ್ಲ ವಿಪರೀತ ಆತಂಕ... ವಿಕಾಸ ವಾದದ ಪ್ರಕಾರ ವಿಕಸನ, ಬದಲಾವಣೆ ನಿರಂತರ... ಹಾಗಿದ್ದ ಮೇಲೆ, ನಾವಂದುಕೊಂಡಿದ್ದೇ ಸತ್ಯವಾ?? ನಮ್ಮ ಚೌಕಟ್ಟುಗಳೂ, ಹಿಂದಿನದರಂತೆ ಮುರಿಯಲೇಬೇಕಲ್ಲ... ನಮಗ್ಯಾಕೆ ಆತಂಕ?!?!?

ನವೆಂದೂ ತಿಂದು ನೋಡದ, ನಾವೆಂದೂ ಆ ವಯಸ್ಸಿನಲ್ಲಿ ಬದುಕಿ ನೋಡದ, ಆಡಿ ನೋಡದ, ತಿಂಡಿ, ಬದುಕು, ಆಟ ಇವುಗಳ ಬಗ್ಗೆ ನಮಗೇಕೆ ಮುನಿಸು?!?!.. ನಮಗಿಂತ ಹೆಚ್ಚು ಸಮಾಜೀಕರಣಗೊಂಡ ನಮ್ಮ ಚಿಣ್ಣರನ್ನ.. ನಮ್ಮ ಹಿರಿಯರಿಗಿಂತ ಹೆಚ್ಚು ನಾಗರೀಕರಣಗೊಂಡ ನಮ್ಮನ್ನ ಒಪ್ಪಿಕೊಂಡಂತೆ ಗೊಣಗದೆ ಒಪ್ಪಿಕೊಳ್ಳಲಾರೆವೇಕೆ??!?!

ಸಮಾಜ ಬದಲಾಗುತ್ತೆ... ಸಾಮಾಜಿಕ ಚಿಂತನೆಗಳೂ ಕೂಡ, ಇಂದಿನ ಕನಸು, ನಾಳೆಗೆ ಬರೀ ಗೋಳಾದೀತು... "ನಾನು, ನನ್ನದು" ಇವತ್ತಿಗಷ್ಟೇ... ನಾವ್ಯಾರು ನಾಳಿನ ನಮ್ಮ ಪುಟ್ಟ ಕಂದಮ್ಮಗಳಿಗೆ ಬದುಕ ಕಟ್ಟಿ ಕೊಡಲು, ನಾಳಿನ ಸಮಾಜ ಕಟ್ಟಿ ನಿಲ್ಲಿಸಲು?!?!?

ನಾವು ಹೇಳುವುದೆಲ್ಲ ಸರಿಯಾದರೆ... ಪ್ರಶ್ನಿಸಲು ಅಧಿಕಾರವೇ ಯಾರೀಗೂ ಇಲ್ಲ.. ಸನಾತನತೆಯೂ ಸರಿಯೇ... ಇಂದಿನ ಬದುಕನ್ನ ಒಪ್ಪಿಕೊಳ್ಳದೆ... ನನ್ನ ಬಾಲ್ಯವೇ ಅತ್ಯಬ್ಧುತ, ಅಷ್ಟೂ ಸಂತೋಷ ನಿನಗೆ ಕಟ್ಟಿಕೊಡುತ್ತೇನೆ...ನನ್ನಂತೆ ನಡಿ ಅನ್ನೋದು.. ಸನಾತನತೆಯಲ್ಲವೇ?!?!?

ನಮ್ಮ ಹಿಂದಿನ ಸಮಾಜಕ್ಕೆ ಸವಾಲೊಡ್ಡಿ ನಾವೆಲ್ಲ ಚಿಂತಕರು ಅನ್ನೋ ನಾವು, ನಮ್ಮ ಚಿಣ್ಣರನ್ನ ಮಾಹಾನ್ ಚಿಂತಕರನ್ನಬೇಕೆ?!?! (ಚಿಂತಕರ ಮಕ್ಕಳು).. ಹಾಗಾದರೆ ಮಾಹಾನ್ ಚಿಂತಕರ ಸಮಾಜವೇಕೆ ಹಳಸಲಾದೀತು?!?!?

ಪ್ರಶ್ನೆಗಳು ನೂರಾರು..ನಾನು ಹೀಗೇರೀ... ಕಡಿಮೆ ಯೋಚನೆಯವಳು... ಅದಕ್ಕೇ ನನ್ನಲ್ಲಿ ಬರೀ ಪ್ರಶ್ನೆಗಳೇ ಇವೆ ರೀ...ಆದರೆ ನನ್ನ ಬದುಕು ಸುಲಭಾ ರೀ...ಯಾಕೆ ಕೇಳಿದ್ರಾ?!?! ನಾನು ತಿರುಗುವ ಕಲ್ಲು...ಬದಲಾವಣೆ ಒಂದೇ ಸತ್ಯ ಅಂತ ನಂಬಿದೋಳು ಕಣ್ರೀ.... 

Sunday, 11 June 2017

Maleya munisu......ಮಳೆಯ ಮುನಿಸು

ಮಳೆ ಬಂತು, ಜೊತೆಗೆ ತಂತು ಅವರಿಬ್ಬರಲ್ಲಿ ಮುನಿಸು... ಹೆಣ್ಣು ಹೆಣ್ಣಾಗಿರಲು, ನಾನಿರಬೇಡವೇ? ಕೇಳಿದ ಆತ. ಯಾಕೋ ಅಲ್ಲೇ ಮುನಿಸಾದಳು ನಮ್ಮ ಪುಟ್ಟಿ...

ಎದೆ ಗಾಯದ ಮೇಲೆ ಸುರಿಯೆ ನೀ ಮಳೆಯಾಗಿ...ಆಕೆ ಇಲ್ಲದೆ ಅದ್ಹೇಗೆ ಆತ ಮಳೆಯನ್ನ ಬರಮಾಡಿಕೊಂಡಾನು!

ಆಕೆಗೋ ಮುನಿಸು ಮೂಗು ಕೆಂಪಾಗಿಸುವಷ್ಟು.... ಗಾಯಕ್ಕೆ ಸುರಿದ ಮಳೆ ಎದೆಯನ್ನೇ ಗೋರಿಯಾಗಿಸೀತು ಜೋಕೆ!!!!

ಮಳೆಗಾಲದಲ್ಲೂ ಚಿಗುರುವ ಮಾತಾಡದ ನೀನೆಷ್ಟು ನಿಷ್ಕರುಣಿ...ಆತನ ಮಾತು ತುಂಬಾ ಭಾರ...

ಚಿಗುರಲು ಬೇಕಾ ಹ್ಯೊಯುವ ಮಳೆ?!?!.. ಕಾದ ನೆಲದಲ್ಲೆಲ್ಲ..ಬರೀ ಮುಳ್ಳು... ..ಮುನಿಸಷ್ಟೇ ಅಲ್ಲ ಆಕೆಯ ಮನದಲ್ಲೇನೋ ಕೊರಗು, ತಿಳಿಯಲ್ಲೊಲ್ಲ ಯಾಕೆ ಅಂತ ಸಿಡಿಮಿಡಿ..

ಪಾಪ..ಆತನೇನು ಸರ್ವಜ್ಞನೇ?...ಆಕೆಯ ಕೊರಗು ಕಾಣಿಸಲ್ಲಿಲ್ಲ...‌ ಬರೀ ಸಿಡಿಮಿಡಿಗೆ, ತಮಾಷೆ ಆತನದು... "ಮುಳ್ಳು ಬೇಲಿಯ ತಬ್ಬಿ ಚಿಗುರು ಹಬ್ಬಿ ನಗಬಾರದೆ? ನೀನಂತೂ ನೀರು ಹನಿಸಲೊಲ್ಲೆ
ಮಳೆಯಾದರೂ ಮುಳ್ಳ ಚಿಗುರಿಸಲಿ ಬಿಡು".. ಇಲ್ಲ ಆತ ಆಕೆಯನ್ನ ಇನ್ನೇನೋ ಕೇಳುತ್ತಿದ್ದಾನೆ

ಪುಟ್ಟಿ ಬೆಳೆದು ಬಿಟ್ಟಿದ್ದಾಳೆ...ಮುಗ್ದತೆಯ ಮೀರಿ ವಾಸ್ತವತೆ ಅಕೆಯನ್ನ ಕಠೋರವಾಗಿಸಿದೆ...ಅನ್ನುತ್ತಾಳೆ " ಮಳೆಗೆ ಕರುಣೆ ಉಂಟೆ?!.. ಸಿಡಿಲಬ್ಬರ...ಗುಡುಗುಗಳ ಮಧ್ಯೆ... ಸುರಿವ ಮಳೆಗೆ ಮುಳ್ಳೊಂದು ಲೆಕ್ಕವೇ
ತನ್ನ ತಾನು ಕಾಪಾಡಿಕೊಂಡರೆ..ಮುಳ್ಳಿಗುಂಟು ಚಿಗುರುವ ಭಾಗ್ಯ"

ಪ್ರೀತಿ ಆತ್ಮ ಗೌರವವನ್ನು ಕೊಲ್ಲುತ್ತದೆ ಕಣೆ, ಹಸಿವಿನ ಹಾಗೆ:
ಸ್ವಭಾವತ ಮುಳ್ಳೇ ಆದರೂ ಆಸೆಯ ಬೆನ್ನು ಬಿದ್ದು ಸ್ವಭಾವ ಮರೆತಿದೆ..... ಈಗವನಿಗೆ ಅವಳ ನೋವು ಅರ್ಥವಾದಂದಂತಿದೆ, ಸಂತೈಸಲು ಬೆನ್ನ ಮೇಲೆ ಕೈ ..ಮಾತಿನಲ್ಲಿ ಅಕ್ಕರೆ

ಆಸೆಗೂ ಮಿತಿ.. ಮುಳ್ಳಿಗೂ ಹುಟ್ಟು ಗುಣ..ಮಳೆ ನಿರಂತರವಾದಾಗಲೇ ಎಲ್ಲಾ ಬದಲಾವಣೆ.... ಕರಗುತ್ತಿದೆಯೇ ಆಕೆಯ ಎದೆಯ ನೋವು..ಇಲ್ಲ ಎಲ್ಲಾ ಇನ್ನೂ ಗೋಜಲೇ??

ನೀನು ಬದಲಾಗಬಹುದೆಂಬ ನಿರೀಕ್ಷೆ ಈ ಮಳೆಗಾಲದಲ್ಲೂ ಚಿಗುರುತ್ತಿಲ್ಲ
ಬದಲಿಗೆ ಬೇರೆ ಯಾರನ್ನೊ ಹುಡುಕಿಕೊಳ್ಳೋಣವೆಂದರೆ ಈ ಮಳೆಯೂ ನಿಲ್ಲುತ್ತಿಲ್ಲ!.... ಆತನದು ತಮಾಷೆಯೋ, ಕುಹುಕವೋ ಇಲ್ಲ ತನ್ನವಳಾಗದ ಆಕೆಯ ಮೇಲೆ ಮುನಿಸೋ...ಆತನಿಗೇ ತಿಳಿಯದು

 ಬದಲಾವಣೆಗೆ... ಮಳೆ ನಿಲ್ಲುವ ಕಾಲ ಬರಬೇಕು... ಆಗ ಹಸಿರೆಲೆ ಒಣಗೀತು... ಮಳೆಗಾಲದಲ್ಲಿ ಇಡೀ ನೋಟ ಒಂದೇ..ನಾನು..ಅವಳು.. ಎಲ್ಲಾ ಧೋ ಅಂತ ಸುರಿಯುತ್ತಲೇ ಇರುವೆವು..... ಪುಟ್ಟಿ ಕಳೇದೇ ಹೋಗಿದ್ದಾಳೆ..ಇಲ್ಲ ಇದು ಬರೀದೆ ಮುನಿಸಲ್ಲ, ಕನಸೆಲ್ಲೋ ಒಡೆದು ಹೋಗಿದೆ..ಇಂತಹ ತತ್ವಜ್ಞಾನದ ಮಾತು, ಪುಟ್ಟಿಯ ಬರೀ ಪ್ರೀತಿಯಿಂದ ಹುಟ್ಟಲು ಸಾಧ್ಯವೇ

"ನೀನು ಹೇಳುವುದೂ ನಿಜ. ನೀವಿಬ್ಬರು ಸುರಿಯುವ ರಭಸಕ್ಕೆ ಒಡ್ಡಿದ ಬೊಗಸೆಗೂ ನೋವು. ಮಳೆ ನೋಯಿಸಬಾರದಲ್ಲ, ಹುಡುಗಿ
ಮಳೆ ಮತ್ತು ನೀನು ಸುರಿದರೆ ಖುಷಿ.......
ಸುರಿಯುತ್ತಲೇ ಇದ್ದರೆ ಆತಂಕ......
ಸ್ರಷ್ಟಿಸಬಹುದಾದ ಅನಾಹುತಗಳ ನೆನೆದು,"..... ಹುಡಗನಲ್ಲೀಗ ಆತಂಕ, ಪ್ರೀತಿಗೂ ಮೀರಿ ತಾನೇನು ಮಾಡಲಿ ಎಂದು, ಗೊತ್ತವನಿಗೆ... ಮುನಿಸಿನ ಹಿಂದೆ ಇದೆ ನೋವು...ಕೇಳಲು ಭಯ...ಹೆಣ್ಣು ಅರಗಿಸಿಕೊಂಡಂತೆ ಗಂಡಿಗೆ ಆದೀತೆ...ಗಟ್ಟಿ ಗುಂಡಿಗೆ ಆದರೂ ಅರಗಿಸಿಕೊಳ್ಳಲು ಬೇಕು ಹೆಣ್ತನ...

ಅವನ ಮೇಲ್ಲಲ್ಲ ಆಕೆಯ ಕೋಪ...ಆಕೆಗೋ ಹಣ್ತನದ ಭಾರ...ಅದಕ್ಕನ್ನುತ್ತಾಳೆ ಆಕೆ........" ಅದಕ್ಕಲ್ಲವೇ ಮುಂಗಾರಿಗೂ ಒಂದು ಲಯ...ಒಂದು ಮಿತಿ, ನನ್ನ ಓಘಕ್ಕೂ ಸಾಕಾಗುವ ಗುತ್ತು.. ನಾನು ಮುಖ ತಿರುಗಿಸಿ ನಡೆದರೆ...ಅದಕ್ಕೂ ಕಾರಣ ಮಿತಿ"

 ಮುಂಗಾರೆ ಈ ಋತುವಲ್ಲಿ ಮಿತಿಯಾಗಬೇಡ
ನಿನ್ನನ್ನೇ ನಂಬಿ ಕನಸುಗಳನ್ನು ಬಿತ್ತಿದ್ದೇನೆ.... ಆತ ಪುನಃ ಆತನಾಗ ಹೊರಟ... ಗೋಗರೆದರೆ ಕೇಳದ ಹೆಣ್ಣುಂಟೆ?!?

ಮುಂಗಾರಿಗೆ ಮಿತಿ ಇಲ್ಲ..ಓಘಕ್ಕೆ ಮಿತಿ ಇದೆ.. ಮುಂಗಾರು  ಮಿತಿಯಾದರೆ..ಕಾರಣ ನೀನಲ್ಲವೇ..ಕನಸು ಬಿತ್ತೀದ್ದಿಯಾ!... ನೆನಪುಗಳ ಕಡಿದ್ದದ್ದು ಮರೆತೇ ಹೋಯಿತೇ ನಿನಗೆ!!... ಆಕೆಯ ಕೋಪ ಈಗ ಹೊರ ಬಂತು..ಅದು ಬರೀ ಮುನಿಸಲ್ಲ

ಓ ನೀನಿನ್ನೂ ಅದನ್ನೆಲ್ಲ ಮರೆತಿಲ್ಲವೇ? ಇಷ್ಟೆಲ್ಲ ಮಳೆ ಸುರಿದರೂ ಅದ್ಯಾಕೆ ನೆನೆದು ಅಳಿಸಿ ಹೋಗಿಲ್ಲ?.. ಊಹುಃ ಆತ ಆದ್ರನಾಗಿರಲ್ಲಿಲ್ಲ.. ಈಗ ಬಂತವನ ಸೆಡವಿನ ಮಾತು.

ಪುಟ್ಟಿ ಹೆಣ್ಣಾಗಿ ಬೆಳದಾಯಿತು....ಅದರ ಮೇಲೆ ಮುಗ್ದತೆ ಹುಡುಕಲಾದೀತೆ??......." ಮಳೆಯ ಧೋ ನನ್ನ ಮನಸ ಹಸಿಯಾಗಿಸೀತು.. ಆ ಹಸಿಬಿಸಿಯಲ್ಲಿ..ಕಾರಣಗಳು ಮರೆತು ಹೋದಾವು.. ಆದರೆ ಹೃದಯಕ್ಕೆ ಹಸಿಯಾಗುವ, ನೆನೆವ ಪುಣ್ಯ ಎಲ್ಲಿ??...ಅದ್ಯವಾಗಲೂ ಬಿಸಿಯೇ.. ನೆನಪ ಬಿಸಿ..ಹೃದಯದಲ್ಲಿ‌.. ಕನಸ ಹಸಿ ಮನದಲ್ಲಿ"

ಇಷ್ಟೆಲ್ಲ ಮುನಿಸಿನ ಮಧ್ಯೆ..ಗಂಡಲ್ಲವೇ ಆತ.. ತುಂಟತನ ಸಹಜ ಆತನಿಗೆ...ಅನ್ನುತ್ತಾನೆ‌.." ಹಸಿ ಹಸಿ ಬಯಕೆಗಳು ಮಳೆಗೆ ಮೊಳೆಯುತ್ತಿವೆ ನನ್ನೊಳಗೂ. ನೀ ಸ್ಪಂದಿಸುವುದಿಲ್ಲವೆಂಬ ಖಾತರಿಯಿಂದ ಅದುಮಿಟ್ಟಿದ್ದೇನೆ ಒಳಗೇ"..

ಯಾಕದು?! ಸುರಿವ ಮಳೆಯ ಮಧ್ಯೆ ಕಳೆದು ಹೋದೀತೆಂಬ ಭಯವೇ?.. ಸ್ಪಂದನ ಬರೀ ಅರಿವಿನಿಂದಾದೀತೆ? ಅದಕ್ಕೆ ಬೇಕು...ಹುಚ್ಚು ಆವೇಶ.. ಕನಸ ಬಿತ್ತುವವರಲ್ಲೆಲ್ಲಿ ಅದು?!?!... ಆವೇಶ ಯಾವತ್ತೂ ಕನಸ ಹಾರಾಡಿಸುವ ಹೆಣ್ಣಿನಲ್ಲಿ...
ಅದಕ್ಕೇ ಅವಳು ಆವೇಶ...ಅವಳು ಪೃಕೃತಿ!!!!.......‌ ಪುಟ್ಟಿ ಗುಡುಗು ಸಿಡಿಲಿನೊಂದಿಗೆ ಭೋರ್ಗರೆಯುತ್ತಾಳೆ...ಕಣ್ಣು ಮೂಗೆಲ್ಲ ಕೆಂಪು.,..ಹನಿಗಳ ಆರ್ಭಟ...

ನಿನ್ನೊಲುಮೆಯಾಗಸದಲ್ಲಿ ಮಳೆ ಬಿಲ್ಲೊಂದನ್ನು ಮೂಡಿಸುವ ನನ್ನಾಸೆ ಕನಸಾಗಿಯೆ ಉಳಿಯಿತು. ಸೋಲುವುದರಲ್ಲೂ ಸುಖವಿದೆ.
ಮಳೆಗೊ ಹಲವು ಮುಖವಿದೆ...  ಎಷ್ಟಾದರೂ ಆತ ಪುರಷ, ಪೃಕೃತಿ ಎದುರು ನಿಲ್ಲಲ್ಲುಂಟೇ...ಎಷ್ಟೇ ಸೆಡವಿದ್ದರೂ, ಪುರುಷನದೇ ಸೋಲು, ಪೃಕೃತಿಯದೇ ಗೆಲುವು....

ಪುಟ್ಟಿ ಪೃಕೃತಿಯಾದರೇನು ...ಕನಸಾದರೇನು..ಚಿಟ್ಟೆಯಾದರೇನು...ಹುಟ್ಟಿನಿಂದ ಬಂದ ತಾಯ್ತನ ಬಿಟ್ಟು ಹೋದೀತಾ??!... ಎಲ್ಲದನ್ನ ಎಲ್ಲರನ್ನ ತನ್ನೊಳೆಗೇ ಒಯ್ದು ಕರಗುವ ಆಕೆ..‌ಅನ್ನುತ್ತಾಳೆ...... "ಬಿತ್ತಿದ ಕನಸು ಉತ್ತ ಮೇಲೆ ಮಳೆಬಿಲ್ಲು ತಾನಾಗಿಯೇ ಮೂಡೀತು... ಸೋಲು ಗೆಲುವು ಮಳೆಯ ಮುಖಗಳೇ".

ಹೊರಗೆ ಧೋ ಎಂದು ಸುರಿಯುವ ಮಳೆ... ಒಳಗಿನ ಮಳೆಯೂ ಸುರೀದೀತು.... ಮನಸ ದುಗುಡಗಳು ಮೋಡದಂತೆ ಕರಗಿ ಮಳೆಗಾಲ ಮುಗಿಯುವುದರ ಆಚೆ ಈಚೆ, ಹೃದಯ ಆಕಾಶದಂತೆ ತಿಳಿಯಾದೀತು.... ಪುಟ್ಟಿಯ ಕಣ್ಣಿನಲ್ಲೂ ನಗು ಕಂಡೀತು.... ಬಾ ಮಳೆ ಬಾ, ಪುಟ್ಟಿ ಮನದಲ್ಲಿ ಚಿಗುರು ಮೊಳೆಕೆಯೊಡಯಲಿ.... ಅವಳೇ ಪೃಕೃತಿ ಪುರುಷನಲ್ಲಿ ಚಿಗುರು... ಸಂಸಾರದಲ್ಲಿ ಚಿಗುರು ಅವಳಿಂದಲೇ... ಬಾ ಮಳೆ ಬಾ

Sunday, 4 June 2017

Samudra..... Kanasu ( ಸಮುದ್ರ ಕನಸು)

ನೀರೇ ನೀರು... ಸಮುದ್ರದ ತುಂಬಾ ನೀರು, ಕುಡಿಯಲಾಗದ ನೀರು ಆದರೂ ಜೀವರಾಶಿಗಳಿಗೆ ಜನುಮ ಕೊಡುವ ಜಲರಾಶಿ... ಜಲರಾಶಿಯ ಅನುಭೂತಿಯೇ ಅದ್ಭುತ....ಹೆಣ್ಣಿನ ಕನಸಿನಂತೆ.. ಕನಸಿನ ಅನುಭೂತಿಗಾಗಿಯೇ ಬದುಕುವ ಬಯಕೆ.
ಕನಸು ನನಸಾಗುವ  ಬಯಕೆ.. ಸಮುದ್ರದ ನೀರನ್ನ ಕುಡಿಯಲು ಪ್ರಯತ್ನಸಿದಷ್ಟು ಕಷ್ಟ..

ಸಮುದ್ರ ಅದು ಬರೀ ಶಬ್ದವಲ್ಲ... ಆಗಾಧತೆ, ಸಂತಸ...ಆಟ,ಸ್ಪೂರ್ತಿ,ಸ್ಪರ್ಧೆ... ಇನ್ನೇನು..??.. ಸಮುದ್ರವೇ ಜೀವನ .. ನಮ್ಮ ಮೀನುಗಾರರಿಗೆ, ಸಮುದ್ರ ತಾಯಿ, ಸಮುದ್ರ ಬದುಕು, ಅಂತೆಯೇ ಸಮುದ್ರ ಜೀವರಾಶಿ ಎಷ್ಟೋ ಕನಸುಗಳಿಗೆ..ಇನ್ನೆಷ್ಟೋ ಕೌತುಕಗಳಿಗೆ..ಮತ್ತೇಷ್ಟೋ ಚಪಲಗಳಿಗೆ... ಸಮುದ್ರವೇ..ಸಮುದ್ರ

ಹೆಣ್ಣಿನ ಕನಸೂ ಅಂತೆಯೇ... ಅದು ಬರೀ ಆಶಯವಲ್ಲ.. ಅದೊಂದು ಹರಹು, ಸಮಾಧಾನ... ಅದು ಇಡೀ ಕುಟುಂಬಕ್ಕೆ ಸ್ಪೂರ್ತಿ..ಅದಿಲ್ಲದೆ ಆಟವಿಲ್ಲ, ಸ್ಪರ್ಧೆಯೂ ಇಲ್ಲ.. ಅದರೊಳಗೇ ಅಡಗಿದೆ ಬಂಡಾಯ. ಅದರಲ್ಲಿದೆ ಜೀವ ಪ್ರೀತಿ...ಇಡೀ ಜೀವಮಾನದ ಇನ್ನೇಷ್ಟೋ ಕೌತುಕಗಳು.. ಹೆಣ್ಣಿನ ಚಪಲಗಳಿಗೆ ಕನಸೇ ಆಧಾರ..

ಸಮುದ್ರದ ಆಳ.. ಅದರ ಅಳತೆ ಸಧ್ಯಕ್ಕೆ ಸಾಧ್ಯವಾಗದ ಮಾತು.‌ ಇಲ್ಲೆಲ್ಲೋ ಕಾಲಿಕ್ಕಬಹುದು ಅನ್ನಿಸಿದರೆ ಇನ್ನೆಲ್ಲೋ ಮುಳುಗಿಯೇ ಹೋದೆ ಅನ್ನಿಸುತ್ತೆ... ಸಮುದ್ರ ತಟದಲ್ಲಿ ನಿಂತರೆ ಕಣ್ಣ ಹಾಯಿಸಿದಷ್ಟೂ ನೀರೇನೀರು... ತನ್ನೊಳಗೆ, ಬದುಕು ಹೋರಾಟ ಇಷ್ಟಕ್ಕೆ ಮಾತ್ರ ಜಾಗ ಅನ್ನುತ್ತೆ... ಒಣಗಿದ ಪ್ರತಿ ಸರಕೂ ತಟಕ್ಕೇ...

ಹೆಣ್ಣಿನ ಕನಸಿಗೊಂದು ಅಡೆಯೇ...ಅದಕ್ಕೊಂದು ಅಂತ್ಯವೇ?!?!.. ಮನಸ್ಸ ತುಂಬಾ ಇರುವ ಪ್ರೀತಿ, ಕನಸತುಂಬಾ ಪಸರಿಸುತ್ತೆ. ಕಣ್ಣೀರಿನ ಓಗಕ್ಕೆ..ಕನಸಲ್ಲಿ ಮುಳುಗೆದ್ದ ಕರುಣೆ, ಪ್ರೀತಿ ಕಾರಣ.. ಕನಸು ನಿಂತದ್ದು, ಕೈಗೆ ಸಿಕ್ಕಿದ್ದು ನೋಡಿದ್ದೀರ?? ಅದಕ್ಕೊಂದು ಗಡುವೂ ಇಲ್ಲ..ಅದು ಓಡುತ್ತೆ, ಅದೇ ಜನುಮ ನೀಡುತ್ತೆ ಹೊಸ ಕನಸಿಗೆ, ನನಸಾಗುವ ಕನಸೇ ಹೆಣ್ಣಿಗಿಲ್ಲ...

ನೊರೆನೊರೆಯ ನೀರು... ಎದ್ದೆದ್ದು ಅಬ್ಬರದ ತೆರೆ...ತೊರೆಗಳ್ಳೆಲ್ಲ ಬಂದು ಸೇರಿ ಸಮುದ್ರ ನಗುತ್ತೆ, ಸಮುದ್ರದಂತೆ ಎಲ್ಲೆಲ್ಲೂ ಪಸರಿಸುವ ಕನಸು. ಹೆಣ್ಣ ಮಕ್ಕಳ ಕನಸೇ ಹಾಗೆ, ಸಮುದ್ರದಂತೆ ಅಬ್ಬರಿಸುವ, ಪ್ರೀತಿಸುವ ಆಗಾಧತೆ. ನಿಂತಲ್ಲಿ ನಿಲ್ಲದೆ... ಅದಕ್ಕೊಂದು ಸಮಯದ ಕೊನೆಯೂ ಇಲ್ಲದೆ, ಆದಿ, ಅಂತ್ಯಗಳಿಲ್ಲದ ಬರೀ ತನ್ನದಾಗಿಸಿಕೊಳ್ಳುವ ಕನಸುಗಳು... ಹೆಣ್ಣಿನ ಕನಸುಗಳು, ಸ್ಪೂರ್ತಿ, ನಿಜ....ಅವುಗಳೇ ಅವಳ ಜೀವನಾಡಿ.... ಆದರೆ ಆಕೆಗೊಂದು ಕುಡಿ ಆಸೆ... ಕನಸು ನನಸಾದೀತೆ? !?!.. ಸಮುದ್ರದ ನೀರು ಕುಡಿಯುವಂತಾದೀತೇ!?!?....

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...